ಮೈಸೂರು ಮೃಗಾಲಯಕ್ಕೆ ಮುದ್ದಾದ ಗಿಫ್ಟ್ ಕೊಟ್ಟ ಹಿರಿಯ ಜಿರಾಫೆ

|

Updated on: Jun 12, 2020 | 2:25 PM

ಮೈಸೂರು: ನಗರದ ಚಾಮರಾಜೇಂದ್ರ ಮೃಗಾಲಯ ಈಗ ಜಿರಾಫೆಗಳ ಸಂತಾನೋತ್ಪತ್ತಿ ಕೇಂದ್ರ ಅಂತ ಕರೆಸಿಕೊಳ್ಳುತ್ತಿದೆ. ಈ ಮೃಗಾಲಯದಲ್ಲಿ ಜಿರಾಫೆಗಳ ಸಂತಾನೋತ್ಪತ್ತಿ ಹೆಚ್ಚಾಗಿದ್ದು ಅದರಲ್ಲಿ ಕಳೆದ ಮೂರು ತಿಂಗಳ ಅವದಿಯಲ್ಲಿ ಎರಡು ಮರಿಗಳು ಜನಿಸಿವೆ. ಈ ಪೈಕಿ ಖುಷಿ ಹೆಸರಿನ ಜಿರಾಫೆ ಈ ವರೆಗೆ ಮೃಗಾಲಯದಲ್ಲಿ ಆರು ಮರಿಗಳಿಗೆ ಜನ್ಮ ನೀಡಿದೆ. 2009 ರಲ್ಲಿ ಖುಷಿ ಜಿರಾಫೆ ಮೊದಲ ಮರಿಗೆ ಜನ್ಮ ನೀಡಿತ್ತು. ಇದೀಗಾ ಒಟ್ಟು ಆರು ಮರಿಗಳಿಗೆ ಜನ್ಮ ನೀಡಿದೆ. ಇದರ ಜೊತೆಗೆ ಮೇರಿ ಎಂಬ ಜಿರಾಫೆ ಕೂಡ […]

ಮೈಸೂರು ಮೃಗಾಲಯಕ್ಕೆ ಮುದ್ದಾದ ಗಿಫ್ಟ್ ಕೊಟ್ಟ ಹಿರಿಯ ಜಿರಾಫೆ
Follow us on

ಮೈಸೂರು: ನಗರದ ಚಾಮರಾಜೇಂದ್ರ ಮೃಗಾಲಯ ಈಗ ಜಿರಾಫೆಗಳ ಸಂತಾನೋತ್ಪತ್ತಿ ಕೇಂದ್ರ ಅಂತ ಕರೆಸಿಕೊಳ್ಳುತ್ತಿದೆ. ಈ ಮೃಗಾಲಯದಲ್ಲಿ ಜಿರಾಫೆಗಳ ಸಂತಾನೋತ್ಪತ್ತಿ ಹೆಚ್ಚಾಗಿದ್ದು ಅದರಲ್ಲಿ ಕಳೆದ ಮೂರು ತಿಂಗಳ ಅವದಿಯಲ್ಲಿ ಎರಡು ಮರಿಗಳು ಜನಿಸಿವೆ.

ಈ ಪೈಕಿ ಖುಷಿ ಹೆಸರಿನ ಜಿರಾಫೆ ಈ ವರೆಗೆ ಮೃಗಾಲಯದಲ್ಲಿ ಆರು ಮರಿಗಳಿಗೆ ಜನ್ಮ ನೀಡಿದೆ. 2009 ರಲ್ಲಿ ಖುಷಿ ಜಿರಾಫೆ ಮೊದಲ ಮರಿಗೆ ಜನ್ಮ ನೀಡಿತ್ತು. ಇದೀಗಾ ಒಟ್ಟು ಆರು ಮರಿಗಳಿಗೆ ಜನ್ಮ ನೀಡಿದೆ. ಇದರ ಜೊತೆಗೆ ಮೇರಿ ಎಂಬ ಜಿರಾಫೆ ಕೂಡ ಒಂದು ಮರಿಗೆ ಜನ್ಮ ನೀಡಿದೆ.

ಈ‌ ಮೂಲಕ ಮೈಸೂರು ಮೃಗಾಲಯ ಜಿರಾಫೆಗಳ ಸಂತಾನೋತ್ಪತ್ತಿ ಕೇಂದ್ರ ಅಂತನೆ ಕರೆಸಿಕೊಳ್ಳಲು ಶುರುವಾಗಿದೆ. ಸದ್ಯ ಮೈಸೂರು ಮೃಗಾಲಯದಲ್ಲಿ 8 ಜಿರಾಫೆಗಳಿದ್ದು ಅದರಲ್ಲಿ ನಾಲ್ಕು ಗಂಡು, ನಾಲ್ಕು ಹೆಣ್ಣು ಜಿರಾಫೆಗಳಿವೆ. ಸದ್ಯ ಮೈಸೂರು ಮೃಗಾಲಯ ಪ್ರಾಣಿಗಳ ಆರೈಕೆಯನ್ನು ಉತ್ತಮವಾಗಿ ಮಾಡುತ್ತಿದೆ.

ಈಗಾಗಲೇ ಮೈಸೂರು ಮೃಗಾಲಯದಿಂದ ಗುಹಾಟಿ, ಪಾಟ್ನ, ಲಖನೌ ಮೃಗಾಲಯ, ಬನ್ನೇರುಘಟ್ಟಕ್ಕೆ ಜಿರಾಫೆಗಳನ್ನು ಪ್ರಾಣಿ ವಿನಿಮಯ ದಡಿಯಲ್ಲಿ ನೀಡಲಾಗಿದೆ. ಇದೀಗಾ ಬೇರೆ ಬೇರೆ ಮೃಗಾಲಯದಿಂದ ಬೇಡಿಕೆಗಳು ಬರುತ್ತಿದ್ದು, ಮೈಸೂರು ಮೃಗಾಲಯದಲ್ಲಿ ಜಿರಾಫೆ ಸಂತಾನೋತ್ಪತ್ತಿಗೆ ವಾತಾವರಣ ಚೆನ್ನಾಗಿದೆ ಅಂತ ಮೃಗಾಲಯ ಅಧಿಕಾರಿಗಳು ಖುಷಿ ಹಂಚಿಕೊಂಡಿದ್ದಾರೆ.

Published On - 12:13 pm, Fri, 12 June 20