ಮೈಸೂರು, ಮಾರ್ಚ್ 15: ಕಾವೇರಿ ನದಿಯಲ್ಲಿ ತಾತ ಸೇರಿ ಇಬ್ಬರು ಮೊಮ್ಮಕ್ಕಳು ಜಲಸಮಾಧಿ (death) ಆಗಿರುವಂತಹ ಘಟನೆ ಜಿಲ್ಲೆಯ ಟಿ.ನರಸೀಪುರ ತಾಲೂಕು ವ್ಯಾಪ್ತಿಯಲ್ಲಿ ದುರಂತ ಸಂಭವಿಸಿದೆ. ಚೌಡಯ್ಯ(70), ಭರತ್(13) ಮತ್ತು ಧನುಷ್(10) ಮೃತರು. ನದಿ ನೀರಿನಲ್ಲಿ ಮುಳುಗುತ್ತಿದ್ದ (Drown) ಮೊಮ್ಮಕ್ಕಳ ರಕ್ಷಣೆಗೆ ತಾತ ಚೌಡಯ್ಯ ಇಳಿದಿದ್ದಾರೆ. ಇಬ್ಬರು ಮೊಮ್ಮಕ್ಕಳನ್ನು ರಕ್ಷಿಸಲಾಗದೆ ಚೌಡಯ್ಯ ಕೂಡ ನೀರುಪಾಲಾಗಿದ್ದಾರೆ.
ಮೃತರನ್ನು ಟಿ. ನರಸೀಪುರ ಪಟ್ಟಣದ ತಿರುಮಕೂಡಲಿನ ನಿವಾಸಿಗಳು ಎಂದು ಗುರುತಿಸಲಾಗಿದೆ. ಟಿ ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಮೃತದೇಹಗಳನ್ನು ರವಾನೆ ಮಾಡಲಾಗಿದ್ದು, ಟಿ.ನರಸೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬಾಪೂಜಿನಗರದ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಕ್ಯಾಂಟರ್ ಚಾಲಕನಿಂದ ಸರಣಿ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಘಾತದಲ್ಲಿ ಗಾಯಗೊಂಡಿದ್ದ ಕ್ಯಾಂಟರ್ ಚಾಲಕ ಜಗನ್(44) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: 4 ಎಸೆತಗಳಲ್ಲಿ 20 ರನ್ ಚಚ್ಚಿ ಮ್ಯಾಚ್ ಗೆಲ್ಲಿಸಿದ್ದಕ್ಕೆ ಕೊಲೆ? ಯುವಕ ಸಾವಿನ ಸುತ್ತ ಅನುಮಾನಗಳ ಹುತ್ತ!
ಕೆಎಸ್ಆರ್ಟಿಸಿ ಬಸ್, ಕಾರು, ಆಟೋ, ಬೈಕ್ಗೆ ಡಿಕ್ಕಿ ಹೊಡೆದಿದ್ದ ಕ್ಯಾಂಟರ್ ಚಾಲಕನಿಗೆ ಗಂಭೀರ ಗಾಯ ಆಗಿತ್ತು. ಸರಣಿ ಅಪಘಾತದಲ್ಲಿ ಆಟೋ ಚಾಲಕ ಚಾಂದ್ಪಾಷಾ, ಪಾದಚಾರಿ ಮನೋಜ್ಗೆ ಗಾಯ ಆಗಿತ್ತು. ಬ್ಯಾಟರಾಯನಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬೋರ್ ವೆಲ್ ಮೋಟರ್ ಎತ್ತುವಾಗ ವಿದ್ಯುತ್ ತಂತಿ ತಗುಲಿ ಯುವಕ ಸಾವನ್ನಪ್ಪಿರುವಂತಹ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಾಕನೂರ ಗ್ರಾಮದಲ್ಲಿ ನಡೆದಿದೆ. ಹನಮಂತು (24) ಮೃತ ಯುವಕ. ವಿದ್ಯುತ್ ತಂತಿ ಇರುವುದನ್ನು ಗಮನಿಸದೆ ಬೋರ್ವೆಲ್ ಮೋಟರ್ ಎತ್ತುತ್ತಿದ್ದಾಗ ಅವಘಡ ಸಂಭವಿಸಿದೆ. ಸಂತೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪಶು ವೈದ್ಯರ ಎಡವಟ್ಟಿನಿಂದ 20ಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿರುವಂತಹ ಘಟನೆ ಹುಬ್ಬಳ್ಳಿ ನಗರದ ಸಿದ್ದಾರ್ಥ ಕಾಲೋನಿಯಲ್ಲಿ ನಡೆದಿದೆ. R2B ವ್ಯಾಕ್ಸಿನೇಷನ್ನಿಂದ ಜವಾರಿ ಕೋಳಿಗಳು ಸಾವು ಆರೋಪ ಮಾಡಲಾಗಿದೆ.
ಇದನ್ನೂ ಓದಿ: ಸಾಕ್ಷ್ಯ ನಾಶಕ್ಕೆ ಐಷರಾಮಿ ಕಾರನ್ನೇ ಸುಟ್ಟು ಹಾಕಿದ ಕಳ್ಳರು: ಗುಂಡಿಕ್ಕಿ ದರೋಡೆಕೋರರನ್ನ ಹಿಡಿದ ಪೊಲೀಸ್ರು
ಆನಂದ್ ಜಾನ್ ಎಂಬುವರಿಗೆ ಸೇರಿದ ಜವಾರಿ ಕೋಳಿಗಳು ಸಾವಾಗಿದೆ. ವ್ಯಾಕ್ಸಿನೇಷನ್ ಹಾಕಿದ ಮರುದಿನ ಕೋಳಿಗಳು ಮೃತಪಟ್ಟಿವೆ. ಆನಂದ್ ಜಾನ್ ಪಶು ಆಸ್ಪತ್ರೆಯಲ್ಲಿ ವ್ಯಾಕ್ಸಿನೇಷನ್ ಖರೀದಿಸಿದ್ದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:51 pm, Sat, 15 March 25