ಹುಣಸೂರಿನಲ್ಲಿ ಹನುಮ ಜಯಂತಿ ಸಂಭ್ರಮ: ಶಾಲಾ-ಕಾಲೇಜುಗಳಿಗೆ ರಜೆ, ಮೂರು ದಿನ ಮದ್ಯ ಮಾರಾಟ ನಿಷೇಧ

| Updated By: ಆಯೇಷಾ ಬಾನು

Updated on: Dec 07, 2022 | 10:06 AM

ಹುಣಸೂರಿನ ಪ್ರಮುಖ ಬೀದಿಗಳಲ್ಲಿ ಹನುಮ ವಿಗ್ರಹಗಳ ಮೆರವಣಿಗೆ ನಡೆಯುತ್ತಿದೆ. ಕಲಾತಂಡಗಳು ಡೋಲು, ತಮಟೆ, ನಗಾರಿ ಜೊತೆ ಮೆರವಣಿಗೆ ನಡೆಸುತ್ತಿವೆ.

ಹುಣಸೂರಿನಲ್ಲಿ ಹನುಮ ಜಯಂತಿ ಸಂಭ್ರಮ: ಶಾಲಾ-ಕಾಲೇಜುಗಳಿಗೆ ರಜೆ, ಮೂರು ದಿನ ಮದ್ಯ ಮಾರಾಟ ನಿಷೇಧ
ಹುಣಸೂರಿನಲ್ಲಿ ಹನುಮ ಜಯಂತಿ ಸಂಭ್ರಮ
Follow us on

ಮೈಸೂರು: ಇಂದು ಹುಣಸೂರಿನಲ್ಲಿ ಹನುಮ ಜಯಂತಿ(Hanuman Jayanti) ಸಂಭ್ರಮ ಮನೆ ಮಾಡಿದೆ. ಹುಣಸೂರಿನ ಪ್ರಮುಖ ಬೀದಿಗಳಲ್ಲಿ ಹನುಮ ವಿಗ್ರಹಗಳ ಮೆರವಣಿಗೆ ನಡೆಯುತ್ತಿದೆ. ಕಲಾತಂಡಗಳು ಡೋಲು, ತಮಟೆ, ನಗಾರಿ ಜೊತೆ ಮೆರವಣಿಗೆ ನಡೆಸುತ್ತಿವೆ. ಹನುಮ ಜಯಂತಿ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಕಟ್ಟೆಚ್ಚರ ವಹಿಸಿದೆ.

ಹುಣಸೂರಿನ ಜೆಎಲ್​ಬಿ ರಸ್ತೆ ಬಜಾರ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಿರ್ಬಂಧ ಹೇರಲಾಗಿದೆ. ಎಲ್ಲಾ ರೀತಿಯ ವಾಹನಗಳಿಗೆ ನಿರ್ಬಂಧ ವಿಧಿಸಿ ಹುಣಸೂರು ಉಪವಿಭಾಧಿಕಾರಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಎಸ್​ಪಿ ಆರ್ ಚೇತನ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪ್ರಮುಖ ಬಡಾವಣೆಗಳಲ್ಲಿ ಪೊಲೀಸ್ ನಿಯೋಜಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಹುಣಸೂರಿನಲ್ಲಿ ಭದ್ರತೆಗೆ 1,700ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಹುಣಸೂರಿನ 70 ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಪೊಲೀಸರು ಈಗಾಗಲೇ ಎಲ್ಲಾ ಸಮುದಾಯಗಳ ಪ್ರಮುಖರ ಜೊತೆ ಶಾಂತಿ ಸಭೆ ನಡೆಸಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ಶಾಸಕ ರೇಣುಕಾಚಾರ್ಯ ಸಹೋದರ ಪುತ್ರ ಚಂದ್ರಶೇಖರ ಸಾವು ಸಂಭವಿಸಿ ತಿಂಗಳಾದರೂ ಬಂದಿಲ್ಲ ಶವ ಪರೀಕ್ಷೆ ವರದಿ

ಹುಣಸೂರು ಪಟ್ಟಣದ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಇಂದು ಹನುಮ ಜಯಂತಿ ಹಿನ್ನೆಲೆ ಹುಣಸೂರು ಪಟ್ಟಣದ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹಾಗೂ ಹುಣಸೂರು ತಾಲೂಕಿನಾದ್ಯಂತ 3 ದಿನ ಮದ್ಯ ಮಾರಾಟ ನಿಷೇಧಿಸಲಾಗಿದೆ. ಅನುಮತಿ ಪಡೆದ ವಾಹನಗಳಿಗೆ ಮಾತ್ರ ಮೆರವಣಿಗೆಗೆ ಅವಕಾಶ ನೀಡಲಾಗಿದೆ. ಹನುಮ ಮೆರವಣಿಗೆ ವೇಳೆ ಡಿಜೆ ಬಳಕೆಗೆ ಅವಕಾಶ ಇಲ್ಲ. ಸಂಜೆ 5 ಗಂಟೆಯವರೆಗೆ ಮಾತ್ರ ಮೆರವಣಿಗೆ ಮಾಡಲು ಅವಕಾಶ ನೀಡಲಾಗಿದೆ. ವಿವಿಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಮೇಲೆ ಖಾಕಿ ನಿಗಾ ಇಡಲಾಗಿದೆ. ಹುಣಸೂರು ಪ್ರವೇಶಿಸುವ 6 ಕಡೆ ಚೆಕ್​ಪೋಸ್ಟ್​​ ನಿರ್ಮಿಸಿ ತಪಾಸಣೆ ನಡೆಸಲಾಗುತ್ತಿದೆ. ನಿಗದಿತ ಸ್ಥಳಗಳಲ್ಲಿ ಮಾತ್ರ ಬಾವುಟ, ಫ್ಲೆಕ್ಸ್​​ ಅಳವಡಿಕೆಗೆ ಅವಕಾಶ ನೀಡಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:06 am, Wed, 7 December 22