ಮೈಸೂರು: ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ; ಇಬ್ಬರು ಸಾವು, ಓರ್ವ ಮಹಿಳೆಗೆ ಗಂಭೀರ ಗಾಯ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 10, 2023 | 5:16 PM

ಮೈಸೂರು ಜಿಲ್ಲೆಯ ಹೆಚ್​.ಡಿ ಕೋಟೆ(H.D Kote) ತಾಲೂಕಿನ ದೇವಲಾಪುರ ಬಳಿ ಎರಡು ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಘಟನೆಯಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇನ್ನು ಓರ್ವ ಮಹಿಳೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.

ಮೈಸೂರು: ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ; ಇಬ್ಬರು ಸಾವು, ಓರ್ವ ಮಹಿಳೆಗೆ ಗಂಭೀರ ಗಾಯ
ಹೆಚ್​ಡಿ ಕೋಟೆ ಸಮೀಪ ಬೈಕ್​ಗಳ ನಡುವೆ ಅಪಘಾತ
Follow us on

ಮೈಸೂರು, ಆ.10: ಎರಡು ಬೈಕ್(Bike)​ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಹೆಚ್​.ಡಿ ಕೋಟೆ(H.D Kote) ತಾಲೂಕಿನ ದೇವಲಾಪುರ ಬಳಿ ನಡೆದಿದೆ. ನೆಮ್ಮನಹಳ್ಳಿ ಗ್ರಾಮದ ದೇವೇಶ್​, ಪ್ರಕಾಶ್ ಮೃತ ರ್ದುದೈವಿಗಳು. ಇನ್ನು ಘಟನೆಯಲ್ಲಿ ಗಂಭೀರ ಗಾಯಗೊಂಡ ಶ್ರುತಿ ಎಂಬ ಮಹಿಳೆಗೆ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಘಟಣೆ ಕುರಿತು ಸರಗೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೈಕ್​ಗೆ ಕ್ಯಾಂಟರ್ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು

ಬೆಂಗಳೂರು: ಯಲಹಂಕ ತಾಲೂಕಿನ ಸಿಂಗನಾಯಕನಹಳ್ಳಿ ಬಳಿ ಬೈಕ್​ಗೆ ಕ್ಯಾಂಟರ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಚಿಕ್ಕಜಾಲ ಬಳಿಯ ವಿದ್ಯಾನಗರ ನಿವಾಸಿ ಅಂಬರೀಶ್ ಮೃತ ರ್ದುದೈವಿ. ಇತ ದೊಡ್ಡಬಳ್ಳಾಪುರ‌ ಕಡೆಯಿಂದ ಯಲಹಂಕ ಬರುತ್ತಿದ್ದ ವೇಳೆ‌ ಈ ದುರ್ಘಟನೆ ನಡೆದಿದೆ. ಈ ಕುರಿತು ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ನೆಲಮಂಗಲ: ಪತ್ನಿಯನ್ನು ಗ್ರಾಪ ಪಂಚಾಯಿತಿ ಅಧ್ಯಕ್ಷೆಯಾಗಿಸುವ ಕಸರತ್ತು ನಡೆಸಿದ್ದ ಪತಿ ಗುರಿ ಈಡೇರುವ ಮೊದಲೇ ರಸ್ತೆ ಅಪಘಾತಕ್ಕೆ ಬಲಿ!

ಕದಂಬ ನೌಕಾನೆಲೆಯ ತೇಜ್ ಹೆಸರಿನ ಟಗ್ ಬೋಟ್​ನ ಇಂಜಿನ್​ನಲ್ಲಿ ಬೆಂಕಿ

ಉತ್ತರ ಕನ್ನಡ: ಕಾರವಾರ ಕದಂಬ ನೌಕಾನೆಲೆಯ ಡಾಕ್ ಯಾರ್ಡ್​ಗೆ ಎಳೆತರಲು ಉಪಯೋಗಿಸುವ ಟಗ್ ಬೋಟ್​ನ ಇಂಜಿನ್​ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ನಡೆದಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ಕುರಿತು ಕಾರವಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನು ಈ ಟಗ್​ ಬೋಟ್​ಗಳನ್ನು ನೌಕಾ ಹಡಗುಗಳನ್ನು ಎಳೆದು ತರಲು ಉಪಯೋಗಿಸಲಾಗುತ್ತದೆ. ಅದರಂತೆ ಯುದ್ದ ಹಡಗನ್ನು ಎಳೆದು ತರಲು ಹೋದಾಗ ಟಗ್​ ಬೋಟ್​ ಇಂಜಿನ್​ನಲ್ಲಿ ಬೆಂಕಿ ತಗುಲಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ