ಹೊಸ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹಳೇ ಕಳ್ಳಕಾಕರ ಹಾವಳಿ! ಜೋರು ಗಾಳಿ ಬೀಸಿದ್ರೆ ಸಾಕು ಹೈ ವೋಲ್ಟೇಜ್ ಕಂಬಗಳೇ ಉರುಳಬಹುದು, ಜಾಗ್ರತೆ!
ಅದೇನೆ ಆಗ್ಲಿ ಅಲ್ಪ ಕಾಸಿಗೆ ಆಸೆ ಪಟ್ಟು ಮಾಡಬಾರದ ಕೆಲಸವನ್ನ ಕಳ್ಳಕಾಕರು ಮಾಡಿದ್ದಾರೆ. ಇದರ ದುಷ್ಪರಿಣಾಮ ಏನಾಗುತ್ತೆ ಅನ್ನೋದೂ ಅವರ ಅರಿವಿಗೆ ಬಂದಿಲ್ಲ.. ಕೆಇಬಿ ಅಧಿಕಾರಿಗಳು ಇದನ್ನ ತತಕ್ಷಣವೇ ಸರಿ ಪಡಿಸಬೇಕಿದೆ.
ಕಳ್ಳಕಾಕರ ಕಾಟಕ್ಕೆ ಅಕ್ಷರಶಃ ಸಾರ್ವಜನಿಕರು ತತ್ತರಿಸಿ ಹೋಗಿದ್ದಾರೆ.. ಯಾರೋ ಮಾಡಿದ ಯಡವಟ್ಟಿಗೆ ಅಮಾಯಕರು ಪರಿತಪ್ಪಿಸುವಂತಾಗಿದೆ.. ಅಷ್ಟಕ್ಕೂ ಅಲ್ಲಿ ಆಗಿದಾದ್ರು ಏನು.. ಜನರ ಜೀವದ ಜೊತೆ ಆಟವಾಡುತ್ತಿರುವವರಾದ್ರು ಯಾರು ಅಂತೀರಾ ಈ ಸ್ಟೋರಿ ನೋಡಿ. ಅಂಕುಡೊಂಕಾಗಿ ಬಳ್ಳಿಯಂತೆ ಬಳಕುತ್ತಾ ಬಾಗಿ ನಿಂತಿರೊ ವಿದ್ಯುತ್ ಕಂಬಗಳು.. ಮತ್ತೊಂದೆಡೆ ಹೈ ಸ್ಪೀಡಲ್ಲಿ ಚಲಿಸುತ್ತಿರೊ ವಾಹನಗಳು.. ಮತ್ತೊಂದೆಡೆ ಭಯಭೀತರಾಗಿ ಸಂಚರಿಸುತ್ತಿರೊ ವಾಹನ ಸವಾರರು.. ಈ ಎಲ್ಲಾ ದೃಶ್ಯಗಳು ಕಣ್ಣಿಗೆ ರಾಚಿದ್ದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಬಳಿ ಇರುವ ಬೆಂಗಳೂರು ಮೈಸೂರು ಹೆದ್ದಾರಿ ಬಳಿ.. ಹೌದು ಕಳ್ಳಕಾಕರ ಕಾಟಕ್ಕೆ ವಿದ್ಯುತ್ ಕಂಬಗಳು ಬಲಹೀನಗೊಂಡಿವೆ. ಜೋರು ಗಾಳಿ ಬೀಸಿದ್ರೆ ಸಾಕು ಕೆಳಗೆ ಉರುಳುವ ಸಾಧ್ಯತೆಯಿದೆ. ಇದಕ್ಕೆಲ್ಲಾ ಕಾರಣ ಮತ್ಯಾರು ಅಲ್ಲಾ ಬೀದಿ ಚೋರರು!
ಆಗಿರುವುದಿಷ್ಟೇ ಬೆಂಗಳೂರು-ಮೈಸೂರು ಹೆದ್ದಾರಿಯ ಪಕ್ಕದಲ್ಲಿ 11 ಕೆವಿ ಹೈವೋಲ್ಟೇಜ್ ಕಂಬಗಳನ್ನ ಅಳವಡಿಸಲಾಗಿದೆ.. ಆ ಕಂಬಗಳಿಗೆ ಅಲ್ಯೂಮಿನಿಯಮ್ ಪ್ಲೇಟ್ ಗಳನ್ನ ಸಹಾಯಕ್ಕಾಗಿ ಅಳವಡಿಸಲಾಗಿದೆ.. ಆದ್ರೆ ಆ ಪ್ಲೇಟ್ ಗಳನ್ನ ಕಳ್ಳರು ಸಾರಾಯಿ ಲಿಕ್ಕರ್ ಆಸೆಗಾಗಿ ಕದ್ದಿದ್ದಾದ್ರೆ. ಪರಿಣಾಮ ವಿದ್ಯುತ್ ಕಂಬಗಳು ಬಲಹೀನವಾಗಿದೆ. ಪರಿಣಾಮ ಜೋರು ಗಾಳಿ ಬೀಸಿದ್ರೆ ಶಿಥಿಲಗೊಂಡಿರುವ ಕಂಬಗಳು ಬೀಳುವ ಸಾಧ್ಯತೆಯಿದೆ. ದಿನನಿತ್ಯ ಲಕ್ಷಾಂತರ ವಾಹನಗಳು ಈ ಹೈ ವೆಯಲ್ಲಿ ಸಂಚರಿಸುತ್ತವೆ.. ಒಂದು ವೇಳೆ ರಸ್ತೆಯ ಮೇಲೆ ಈ ಹೈ ಟೆನ್ಷನ್ ಕಂಬ ಬಿದ್ದಿದ್ದೇ ಆದರೆ ದುರಂತ ನಡೆದು ಹೋಗುತ್ತೆ ಎಂಬ ಆತಂಕವಿದೆ.
ಅದೇನೆ ಆಗ್ಲಿ ಅಲ್ಪ ಕಾಸಿಗೆ ಆಸೆ ಪಟ್ಟು ಮಾಡಬಾರದ ಕೆಲಸವನ್ನ ಕಳ್ಳಕಾಕರು ಮಾಡಿದ್ದಾರೆ. ಇದರ ದುಷ್ಪರಿಣಾಮ ಏನಾಗುತ್ತೆ ಅನ್ನೋದೂ ಅವರ ಅರಿವಿಗೆ ಬಂದಿಲ್ಲ.. ಕೆಇಬಿ ಅಧಿಕಾರಿಗಳು ಇದನ್ನ ತತಕ್ಷಣವೇ ಸರಿ ಪಡಿಸಬೇಕಿದೆ. ಪೊಲೀಸರಿಗೆ ದೂರು ನೀಡಬೇಕಿದೆ. ಇಲ್ಲದೇ ಹೋದ್ರೆ ಮಾಡದ ತಪ್ಪಿಗೆ ಅಮಾಯಕರ ಜೀವ ಬಲಿಯಾಗೋದಂತು ಗ್ಯಾರಂಟಿ.
ವರದಿ: ಸೂರಜ್ ಪ್ರಸಾದ್, ಟಿವಿ9, ಮಂಡ್ಯ
Published On - 2:52 pm, Wed, 17 May 23