ಕೃಷಿ ಇಲಾಖೆ, ಪೊಲೀಸ್ ಇಲಾಖೆಯ ಜಂಟಿ ಕಾರ್ಯಚರಣೆಯಲ್ಲಿ ಸಿಕ್ತು ಅಪಾರ ಪ್ರಮಾಣದ ಕಳಪೆ ರಸಗೊಬ್ಬರ
ರೈತ ದೇಶದ ಬೆನ್ನೆಲುಬು, ಕೃಷಿಗೆ ಅವಶ್ಯಕವಾಗಿರುವ ನೀರು, ರಸಗೊಬ್ಬರ ಹಾಗೂ ರೈತ ಬೆಳೆದ ಬೆಳೆಗೆ ಉತ್ತಮ ಬೆಲೆ ನೀಡಿದ್ರೆ, ರೈತನ ಬಾಳು ಹಸನಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಇಂತಹ ಸಂದರ್ಭದಲ್ಲಿ ಅನ್ನ ಕೊಡುವ ರೈತನಿಗೆ ಕಳಪೆ ರಸಗೊಬ್ಬರ ಮಾರಾಟ ಮಾಡಿದ ಆರೋಪ ಮೈಸೂರಿನ ಮೇಟಗಳ್ಳಿಯಲ್ಲಿ ಕೇಳಿಬಂದಿದೆ.
ಮೈಸೂರು: ರೈತ ದೇಶದ ಬೆನ್ನೆಲುಬು, ಕೃಷಿಗೆ ಅವಶ್ಯಕವಾಗಿರುವ ನೀರು, ರಸಗೊಬ್ಬರ ಹಾಗೂ ರೈತ ಬೆಳೆದ ಬೆಳೆಗೆ ಉತ್ತಮ ಬೆಲೆ ನೀಡಿದ್ರೆ, ರೈತನ ಬಾಳು ಹಸನಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಇಂತಹ ಸಂದರ್ಭದಲ್ಲಿ ಅನ್ನ ಕೊಡುವ ರೈತನಿಗೆ ಕಳಪೆ ರಸಗೊಬ್ಬರ(Low grade Fertilizer) ಮಾರಾಟ ಮಾಡಿದ ಆರೋಪ ಮೈಸೂರಿನ ಮೇಟಗಳ್ಳಿಯಲ್ಲಿ ಕೇಳಿಬಂದಿದೆ. ಈ ಹಿನ್ನಲೆ ಕಳಪೆ ರಸಗೊಬ್ಬರ ಮಾರಾಟ ಕೇಂದ್ರದ ಮೇಲೆ ಕೃಷಿ ಇಲಾಖೆ ಮತ್ತು ಪೊಲೀಸ್ ಇಲಾಖೆಯಿಂದ ದಾಳಿ ಮಾಡಿದ್ದು, ಮಾರಾಟ ಕೇಂದ್ರದಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಪಾರ ಪ್ರಮಾಣದ ಕಳಪೆ ರಸಗೊಬ್ಬರ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಣಸೂರು ಬಳಿಯ ಲಕ್ಷ್ಮಣತೀರ್ಥ ನದಿಯಲ್ಲಿ ಅಕ್ರಮ ಮರಳುಗಾರಿಕೆ; 20 ಲೋಡ್ ಮರಳು, 2 ಟ್ರ್ಯಾಕ್ಟರ್, 1 ಜೆಸಿಬಿ ವಶ
ಮೈಸೂರು: ಜಿಲ್ಲೆಯ ಹುಣಸೂರು ಬಳಿಯ ಲಕ್ಷ್ಮಣತೀರ್ಥ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಮಾಹಿತಿ ಮೇರೆಗೆ ಹನಗೋಡು ಕೊಳವಿ ರಸ್ತೆಯ ತೋಟದ ಮೇಲೆ ಹುಣಸೂರು ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ 20 ಲೋಡ್ ಮರಳು, 2 ಟ್ರ್ಯಾಕ್ಟರ್, 1 ಜೆಸಿಬಿಯನ್ನ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ರಸಗೊಬ್ಬರ ದುರ್ಬಳಕೆ ತಡೆಯಲು ಮಹತ್ತರ ಕ್ರಮ; 100 ಕೋಟಿ ರೂಪಾಯಿಗೂ ಹೆಚ್ಚು ಸೋರಿಕೆ ತಡೆದ ಕೇಂದ್ರ ಸರ್ಕಾರ
ಅಕ್ರಮ ಮರಳುಗಾರಿಕೆ; ಲಾರಿ, ಮರಳು ವಶಕ್ಕೆ
ಮಂಗಳೂರು: 2023 ಮಾರ್ಚ್ 2 ರಂದು ಅಕ್ರಮ ಮರಳುಗಾರಿಕೆ ನಿಯಂತ್ರಣ ಕಾರ್ಯಾಚರಣೆ ನಡೆಸಿರುವ ಮಂಗಳೂರು ಪೊಲೀಸರು ಲಾರಿ, ಹಿಟಾಚಿ ಮತ್ತು ಮರಳು ವಶಪಡಿಸಿಕೊಂಡಿದ್ದರು. ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್ ಅವರ ಸೂಚನೆಯಂತೆ ಕಾರ್ಯಾಚರಣೆ ನಡೆಸಲಾಗಿತ್ತು. ಇನ್ನು ಜಿಲ್ಲೆಯಲ್ಲಿ ಮೀತಿಮೀರಿದ ಅಕ್ರಮ ಮರುಳು ಸಾಗಾಣಿಕೆ ತಡೆಯಲು ಹರಸಾಹಸ ಪಡುತ್ತಿದ್ದಾರೆ. ಹೌದು ಅದರಂತೆ ಫೆ. 25ರಂದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಎಂಆರ್‌ಪಿಎಲ್ ಮೇಲ್ಸೇತುವೆ ಬಳಿ ಸುಮಾರು 10 ಟನ್ ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 2 ಲಾರಿಗಳು, ಫೆ.26ರಂದು ತಣ್ಣೀರುಬಾವಿಯಲ್ಲಿ ಸುಮಾರು 15 ಟನ್ ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 2 ಲಾರಿಗಳು, ಫೆ.28ರಂದು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆಡಂಕುದ್ರು ಎಂಬಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿ ಮತ್ತು ಸುಮಾರು 2 ಯುನಿಟ್ ಮರಳು, ಮಾ.1ರಂದು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುನ್ನೂರು ಗ್ರಾಮದ ಸೋಮನಾಥ ಉಳಿಯ ದೇವಸ್ಥಾನದ ಬಳಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 10 ಲೋಡ್ ಮರಳು ಹಾಗೂ 1 ಹಿಟಾಚಿ ವಾಹನವನ್ನು ವಶಪಡಿಸಿಕೊಂಡಿದ್ದರು. ಬಳಿಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿತ್ತು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ