ವಿಜಯಪುರ: ಕಳಪೆ ಗುಣಮಟ್ಟದ ರಸಗೊಬ್ಬರ ತಯಾರಿಕಾ ಘಟಕಗಳ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ

ಮುಂಗಾರು ಮಳೆ ಆರಂಭವೇ ಆಗಿಲ್ಲ. ಸಿಡಿಲು ಸಹಿತ ಅಕಾಲಿಕ ಮಳೆಯಾಗುತ್ತಿದೆ. ಮುಂಗಾರಿನ ಹದವಾದ ಮಳೆಯಾದ ಬಳಿಕ ಬಿತ್ತನೆ ಕಾರ್ಯ ಆರಂಭವಾಗುತ್ತದೆ. ಆಗ ರಸಗೊಬ್ಬರ ಬಳಕೆ ಹೆಚ್ಚಿರುತ್ತದೆ. ಆದರೆ ಬಿಸಿಲನಾಡು ವಿಜಯಪುರ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೂ ಮುನ್ನವೇ ರಸಗೊಬ್ಬರಗಳಿಗೆ ಬಾರಿ ಬೇಡಿಕೆ ಬಂದಿದೆ.

ವಿಜಯಪುರ: ಕಳಪೆ ಗುಣಮಟ್ಟದ ರಸಗೊಬ್ಬರ ತಯಾರಿಕಾ ಘಟಕಗಳ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ
ಜಿಲ್ಲಾ ಪಂಚಾಯತಿ ಆಧ್ಯಕ್ಷೆ ಸುಜಾತಾ ಕಳ್ಳಿಮನಿ
Follow us
sandhya thejappa
|

Updated on:Apr 15, 2021 | 11:26 AM

ವಿಜಯಪುರ: ಯುಗಾದಿ ಹಬ್ಬ ಇದು ಚಿಗುರು ಮೂಡುವ ಸಮಯ. ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎಂಬ ಹಾಡು ನಿತ್ಯ ನೂತನ. ಯುಗಾದಿಯಿಂದಲೇ ನಮ್ಮ ಮಣ್ಣಿನ ಮಕ್ಕಳು ಕೃಷಿ ಚುಟುವಟಿಕೆಗಳ ಆರಂಭಕ್ಕೆ ಪೂಜೆ ಮಾಡುತ್ತಾರೆ. ಯುಗಾದಿಯಂದು ಭೂಮಿ ಪೂಜೆ ಮಾಡಿ ಈ ವರ್ಷದಲ್ಲಿ ಮಳೆ, ಬೆಳೆ ಉತ್ತಮವಾಗಲಿ ಎಂದು ಬೇಡಿಕೊಳ್ಳುತ್ತಾರೆ. ಈ ರೀತಿ ಯುಗಾದಿ ಕೃಷಿ ಚುಟುವಟಿಕೆಗಳ ಆರಂಭಕ್ಕೆ ಮುನ್ನುಡಿ ಬರೆಯುತ್ತದೆ. ಯುಗಾದಿ ಬಳಿಕ ಭೂಮಿಯನ್ನು ಹದ ಮಾಡಿ ಮುಂಗಾರು ಮಳೆಯಾದೊಡೆನ ಬೀಜ ಬಿತ್ತನೆ ಮಾಡುವ ಸಿದ್ಧತೆಯಲ್ಲಿ ಅನ್ನದಾತರು ನಿರತರಾಗುತ್ತಾರೆ.

ಮುಂಗಾರು ಮಳೆಗೂ ಮುನ್ನವೇ ರಸಗೊಬ್ಬರಕ್ಕೆ ಬೇಡಿಕೆ ಇನ್ನೂ ಮುಂಗಾರು ಮಳೆ ಆರಂಭವೇ ಆಗಿಲ್ಲ. ಸಿಡಿಲು ಸಹಿತ ಅಕಾಲಿಕ ಮಳೆಯಾಗುತ್ತಿದೆ. ಮುಂಗಾರಿನ ಹದವಾದ ಮಳೆಯಾದ ಬಳಿಕ ಬಿತ್ತನೆ ಕಾರ್ಯ ಆರಂಭವಾಗುತ್ತದೆ. ಆಗ ರಸಗೊಬ್ಬರ ಬಳಕೆ ಹೆಚ್ಚಿರುತ್ತದೆ. ಆದರೆ ಬಿಸಿಲನಾಡು ವಿಜಯಪುರ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೂ ಮುನ್ನವೇ ರಸಗೊಬ್ಬರಗಳಿಗೆ ಬಾರಿ ಬೇಡಿಕೆ ಬಂದಿದೆ. ಈಗಲೇ ರೈತರು ರಸಗೊಬ್ಬರಗಳನ್ನು ಕೊಂಡು ಸಂಗ್ರಹ ಮಾಡುತ್ತಿರುವುದು ಕಂಡು ಬಂದಿದೆ. ಕಾರಣ ರಸಗೊಬ್ಬರ ಬೇಡಿಕೆಯನ್ನೇ ಬಂಡವಾಳ ಮಾಡಿಕೊಂಡು ನಕಲಿ ರಸಗೊಬ್ಬರ ತಯಾರಿಸಿ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ದಿಸೆಯಲ್ಲಿ ನಕಲಿ ರಸಗೊಬ್ಬರ ತಯಾರಿಸಿ ಪೂರೈಕೆ ಮಾಡುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲಾ ಪಂಚಾಯತಿ ಆಧ್ಯಕ್ಷೆ ಸುಜಾತಾ ಕಳ್ಳಿಮನಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಕಲಿ ರಸಗೊಬ್ಬರ ತಯಾರಿಸುವವರ ಮೇಲೆ ಕ್ರಮ ಕಳಪೆ ಗುಣಮಟ್ಟದ ರಸಗೊಬ್ಬರ ತಯಾರಿಕಾ ಘಟಕಗಳ ವಿರುದ್ಧ ಕ್ರಮ ಕೈಗೊಳ್ಳುವ ಜೊತೆಗೆ ಅವರ ಲೈಸೆನ್ಸ್ ರದ್ದತಿಗೂ ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಕುರಿತು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಸಿದ ಅವರು, ರೈತರಿಗೆ ತೊಂದರೆ ಆಗದಂತೆ ಹಾಗೂ ನಕಲಿ ರಸಗೊಬ್ಬರ ಪೂರೈಕೆಯಾಗಿ ಅನ್ನದಾತರಿಗೆ ಯಾವುದೇ ರೀತಿಯ ಮೋಸವಾಗದಂತೆ ಕ್ರಮ ತೆಗೆದುಕೊಳ್ಳಬೇಕು. ಅವರಿಗೆ ಉತ್ತಮ ರಸಗೊಬ್ಬರ, ಬೀಜ ಪೂರೈಕೆ ಆಗುವಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾ ಪಂಚಾಯತ್ ಸಿಇಓ ಸಲಹೆ ಕಳಪೆ ಮಟ್ಟದ ಗೊಬ್ಬರವನ್ನು ಬಳಸುವುದರಿಂದ ಬೆಳೆಗಳ ಗುಣಮಟ್ಟ ಕಡಿಮೆಯಾಗುತ್ತದೆ. ಈ ಬಗ್ಗೆ ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಖಾನೆಗೆ ಆಕಸ್ಮಿಕವಾಗಿ ಭೇಟಿ ನೀಡಿ ಪರಿಶೀಲನೆ ಮಾಡುವಂತೆ ಸೂಚನೆ ನೀಡಿದರು. ಕಳಪೆ ಮಟ್ಟದ ಬೀಜಗಳ ಪೂರೈಕೆಯಿಂದ ರೈತರು ನಿಗದಿತ ಪ್ರಮಾಣದ ಬೆಳೆಯನ್ನು ಪಡೆಯಲಾಗುತ್ತಿಲ್ಲ. ಆದ್ದರಿಂದ ಕಳಪೆ ಮಟ್ಟದ ಗೊಬ್ಬರ ಮತ್ತು ಬೀಜಗಳ ಗೋದಾಮುಗಳಿಗೆ ಅಚಾನಕವಾಗಿ ಭೇಟಿ ನೀಡಿ, ಇಲ್ಲವೇ ದಾಳಿ ನಡೆಸಿ ಪರಿಶಿಲನೆ ಮಾಡಬೇಕು. ತಪ್ಪಿತಸ್ಥರು ಕಂಡು ಬಂದರೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಜಿಲ್ಲಾಮಟ್ಟದ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ರೈತರ ಸ್ಥಿತಿ ಆರಕ್ಕೇರದ ಮೂರಕ್ಕಿಳಿಯದ ಸ್ಥಿತಿಯಲ್ಲಿದೆ. ಮುಂಗಾರು ಆರಂಭಕ್ಕೂ ಮುನ್ನವೇ ಜಿಲ್ಲೆಯಲ್ಲಿ ಇದೀಗ ರಸಗೊಬ್ಬರಕ್ಕೆ ಬೇಡಿಕೆ ಬಂದಿದೆ. ಕಾರಣ ವಿವಿಧ ಕೆರೆಗಳಿಗೆ, ಹಳ್ಳಗಳಿಗೆ, ಕೃಷ್ಣಾ ನದಿಯಿಂದ ನೀರು ಹರಿಸಲಾಗಿದೆ. ಜೊತೆಗೆ ವಿವಿಧ ಏತ ನೀರಾವರಿ ಯೋಜನೆಗಳ ಕಾಲುವೆಯಲ್ಲಿ ನೀರು ಹರಿದ ಕಾರಣ ಅಂತರ್ಜಲ ಹೆಚ್ಚಾಗಿದೆ. ಈ ಕಾರಣದಿಂದ ಬಾವಿ, ಕೊಳವೆ ಬಾವಿಗಳಲ್ಲಿ ನೀರು ಹೆಚ್ಚಾಗಿದೆ. ಪ್ರಸಕ್ತ ಮುಂಗಾರು ಹಂಗಾಮಿಗೆ ಬೇಗ ಬಿತ್ತನೆ ಮಾಡಲು ರೈತರು ಈಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ. ಇದರಿಂದ ರಸಗೊಬ್ಬರ ಖರೀದಿ ಮಾಡುತ್ತಿದ್ದಾರೆ. ಇದನ್ನೇ ಬಂಡವಾಡ ಮಾಡಿಕೊಂಡ ಕೆಲವರು ನಕಲಿ ರಸಗೊಬ್ಬರ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ತಿಳಿಸಿದರು.

ಇದನ್ನೂ ಓದಿ

ಹಲವು ಸಂಕಲ್ಪಗಳೊಂದಿಗೆ ಸೈಕಲ್ ಮೇಲೆ ಅಯೋಧ್ಯೆಗೆ ಹೊರಟ ಹಾವೇರಿ ಯುವಕ

ದೇಶಿ ರೂಪಾಂತರಿ.. ಭಾರತದಲ್ಲೇ ಎರಡೆರಡು ಬಾರಿ ರೂಪಾಂತರವಾಗಿದೆ ಕೊರೊನಾ ವೈರಾಣು! ಹೊಸ ಅಧ್ಯಯನದಿಂದ ಬಯಲಾಯ್ತು ಮಾಹಿತಿ

(District Panchayat Chairperson of Vijayapura instructed to take action against poor quality fertilizer manufacturing plants)

Published On - 11:25 am, Thu, 15 April 21

ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್