ಮೈಸೂರು: ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ತನ್ನ ಮರ್ಮಾಂಗವನ್ನೇ (genitals) ಕುಯ್ದುಕೊಂಡಿರುವಂತಹ ಘಟನೆ ಜಿಲ್ಲೆಯ ಹುಣಸೂರು ತಾಲ್ಲೂಕು ತೊಂಡಾಳು ಗ್ರಾಮದಲ್ಲಿ ನಡೆದಿದೆ. ರಾಜಶೆಟ್ಟಿ ಮರ್ಮಾಂಗವನ್ನ ಕೊಯ್ದುಕೊಂಡ ವ್ಯಕ್ತಿ. ನಿನ್ನೆ ರಾತ್ರಿ ಕಂಠಪೂರ್ತಿ ಕುಡಿದಿದ್ದ ರಾಜಶೆಟ್ಟಿ, ಈ ವೇಳೆ ತನ್ನ ಮರ್ಮಾಂಗವನ್ನು ತಾನೆ ಕುಯ್ದುಕೊಂಡಿದ್ದಾನೆ. ಬಳಿಕ ಈತನ ಕೂಗಾಟ ಕೇಳಿದ ಗ್ರಾಮಸ್ಥರು ಹುಣಸೂರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಂದು ಪ್ರಕರಣದಲ್ಲಿ ಪೂಜಾರಿಯೊಬ್ಬರು ದೇವರ ವಿಗ್ರಹದ ಮೇಲೆ ಕಾಲಿಟ್ಟು ಪೂಜೆ ಮಾಡಿದ್ದು ಎಲ್ಲೆಡೆ ವೈರಲ್ ಆಗಿತ್ತು. ಅದೇ ರೀತಿಯಾಗಿ ಕಣ್ಣುಗಳನ್ನು ನೀಡಿರುವಂತಹ ಘಟನೆಗಳು ಸಹ ನಡೆದಿದ್ದವು. ಬಳಿಕ ಇಂತಹದೇ ಒಂದು ವಿಚಿತ್ರ ಘಟನೆ ನಡೆದಿದ್ದು, ಅಂಧ ಭಕ್ತನೊಬ್ಬ ತನ್ನ ನಾಲಿಗೆ ಕಟ್ ಮಾಡಿ ದೇವರಿಗೆ ಅರ್ಪಿಸಿರುವಂತಹ ಘಟನೆ ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಉಪ್ಪಾರ ಹೊಸಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿತ್ತು.
ವೀರೇಶ್ ನಾಲಿಗೆ ಕಟ್ ಮಾಡಿಕೊಂಡ ಭಕ್ತ. ಇದೇ ಭಕ್ತ ಒಂದು ವರ್ಷದ ಹಿಂದೆ ಬೆರಳು ಕಟ್ ಮಾಡಿಕೊಂಡು ದೇವರ ತಲೆಯ ಮೇಲೆ ಇಟ್ಟಿದ್ದ. ಈವಾಗ ತಮ್ಮ ನಾಲಿಗೆ ಕಟ್ ಮಾಡಿಕೊಳ್ಳುವ ಮೂಲಕ ಅಂಧ ಭಕ್ತಿ ಪ್ರದರ್ಶಿಸಿದ್ದನು.
ಬಲಕುಂದಿ ಗ್ರಾಮದ ಗುಡ್ಡದ ಮೇಲೆ ಇರುವ ಶಂಕರಪ್ಪ ದೇವಸ್ಥಾನದಲ್ಲಿ ಭಕ್ತ ವಿರೇಶ್ ಪ್ರತಿ ದಿನ ಪೂಜೆ ಮಾಡುತ್ತಿದ್ದ. ದೇವರನ್ನು ಒಲಿಸಿಕೊಳ್ಳಲು ನಾಲಗೆ ಕತ್ತರಿಸಿಕೊಂಡಿದ್ದಾನೆ ಎನ್ನಲಾಗಿತ್ತು. ಚಾಕುವಿನಿಂದ ನಾಲಗೆ ಕತ್ತರಿಸಿಕೊಂಡಿದ್ದ ಯುವಕ ವೀರೇಶ್ ನಾಲಗೆ ಸಮೇತ ಆಸ್ಪತ್ರೆಗೆ ದಾಖಲಾಗಿದ್ದನು. ಈ ಭಕ್ತನ ಹುಚ್ಚಾಟಕ್ಕೆ ಗ್ರಾಮಸ್ಥರು ಕಿಡಿಕಾರಿದ್ದು, ದೇವರಲ್ಲಿ ನಂಬಿಕೆ ಇರ್ಬೇಕು ಈ ರೀತಿ ಹುಚ್ಚು ನಂಬಿಕೆ ಇರಬಾರದು ಎಂದು ತಿಳಿ ಹೇಳಿದ್ದರು.
ಉತ್ತರ ಪ್ರದೇಶದಲ್ಲಿ ಅಂತಹದ್ದೇ ಒಂದು ವಿಚಿತ್ರ ಘಟನೆ ಒಂದು ಬೆಳಕಿಗೆ ಬಂದಿತ್ತು. ಉತ್ತರ ಪ್ರದೇಶದ ಹರ್ದೋಯ್ ಎಂಬ ಗ್ರಾಮದ ವ್ಯಕ್ತಿಯೊಬ್ಬರು ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ತೆರಳಿದ್ದಾರೆ. ವೈದ್ಯರು ಪ್ರಶ್ನಿಸಿದಾಗ ಬಯಲಿನಲ್ಲಿ ಮಲವಿಸರ್ಜನೆ ಮಾಡುವಾಗ ಖಾಸಗಿ ಭಾಗದ ಮೂಲಕ ಹಾವು ದೇಹವನ್ನು ಪ್ರವೇಶಿಸಿದೆ ಎಂಬ ಆಘಾತಕಾರಿ ಹೇಳಿಕೆ ನೀಡಿದ್ದಾರೆ.
ಖಾಸಗಿ ಅಂಗದ ಮೂಲಕ ಹಾವು ದೇಹ ಪ್ರವೇಶಿಸಿದೆ ಎಂಬ ಹೇಳಿಕೆ ನೀಡಿರುವ ವ್ಯಕ್ತಿವನ್ನು ಮಹೇಂದ್ರ ಎಂದು ಗುರುತಿಸಲಾಗಿದೆ. ಹರ್ದೋಯ್ ವೈದ್ಯಕೀಯ ಕಾಲೇಜಿನ ತುರ್ತು ವಿಭಾಗಕ್ಕೆ ಮಹೇಂದ್ರ ರಾತ್ರೋರಾತ್ರಿ ಆಗಮಿಸಿದ್ದಾರೆ. ವಿಚಾರ ತಿಳಿದ ವೈದ್ಯಕೀಯ ಸಿಬ್ಬಂದಿಗಳು ಮಹೇಂದ್ರನನ್ನು ಕೂಲಂಕಷವಾಗಿ ಪರೀಕ್ಷಿಸಿದ್ದಾರೆ. ಆದರೆ ದೇಹದಲ್ಲಿ ಯಾವುದೇ ಹಾವು ಕಡಿತದ ಪುರಾವೆಗಳು ಸಿಕ್ಕಿಲ್ಲ. ಆದರೆ ವೈದ್ಯರ ಪರೀಕ್ಷಿ ಬಳಿಕ ಮಾದಕವಸ್ತುಗಳ ಪ್ರಭಾವಕ್ಕೆ ಒಳಗಾಗಿರುವುದರಿಂದ ಈ ರೀತಿ ಹೇಳಿಕೆ ನೀಡಿದ್ದಾಗ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:48 pm, Sat, 8 April 23