AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ವೇದಿಕೆಯಲ್ಲಿ ಬಿಜೆಪಿಯ ಹಿರಿ-ಕಿರಿಯ ಮುಖಂಡರ ಮಧ್ಯೆ ವಾಕ್ಸಮರ.. ತೇಜಸ್ವಿ ಸೂರ್ಯ-ಮಾಧುಸ್ವಾಮಿ ಮಧ್ಯೆ ಟಾಕ್‌ಫೈಟ್

Tejasvi Surya - Madhuswamy Fight: ಕೇಂದ್ರದ ಸಲಹೆ ರಾಜ್ಯಗಳು ಸ್ವೀಕರಿಸ್ತಿಲ್ಲ ಎಂದು ಹೇಳುವ ಮೂಲಕ ಸಚಿವ ಮಾಧುಸ್ವಾಮಿ ಹೇಳಿಕೆಗೆ ತೇಜಸ್ವಿ ಸೂರ್ಯ ತಿರುಗೇಟು ನೀಡಿದ್ರು. ಒಂದೇ ಪಕ್ಷದಲ್ಲಿದ್ದರೂ ಇಬ್ಬರಿಂದ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದ್ದು ಸಭೆಯಲ್ಲಿ ಇಬ್ಬರು ಮುಖಂಡರು ಮುಜುಗರಕ್ಕೀಡಾದರು.

ಒಂದೇ ವೇದಿಕೆಯಲ್ಲಿ ಬಿಜೆಪಿಯ ಹಿರಿ-ಕಿರಿಯ ಮುಖಂಡರ ಮಧ್ಯೆ ವಾಕ್ಸಮರ.. ತೇಜಸ್ವಿ ಸೂರ್ಯ-ಮಾಧುಸ್ವಾಮಿ ಮಧ್ಯೆ ಟಾಕ್‌ಫೈಟ್
ಆಯೇಷಾ ಬಾನು
| Edited By: |

Updated on:Mar 29, 2021 | 11:16 AM

Share

ಮೈಸೂರು: ಭಾನುವಾರ ನಗರದಲ್ಲಿ ನಡೆದ ವಿಚಾರ ಸಂಕಿರಣ ಸಭೆಯೊಂದರಲ್ಲಿ ಬಿಜೆಪಿ ಸಂಸದ ಮತ್ತು ರಾಜ್ಯದ ಹಿರಿಯ ಸಚಿವರೊಬ್ಬರ ನಡುವೆ ಟಾಕ್‌ಫೈಟ್ ನಡೆದಿದೆ. ಮೈಸೂರಿನಲ್ಲಿ ನಡೆದ ‘ರಾಷ್ಟ್ರೀಯ ಐಕ್ಯತೆ, ಪ್ರಾದೇಶಿಕ ಸ್ವಾತಂತ್ರ್ಯ’ ವಿಚಾರ ಸಂಕಿರಣದಲ್ಲಿ ಸಚಿವ ಮಾಧುಸ್ವಾಮಿ, ಸಂಸದ ತೇಜಸ್ವಿ ಸೂರ್ಯ ಮಧ್ಯೆ ವಾಕ್ಸಮರ ನಡೆದಿದೆ. ವಿಚಾರ ಸಂಕಿರಣದಲ್ಲಿ ಸಚಿವ ಜೆಸಿ ಮಾಧುಸ್ವಾಮಿ ಕೇಂದ್ರ ಸರ್ಕಾರದ ವಿರುದ್ಧ ಭಾಷಣ ಮಾಡಿದ್ರು. ಈ ವೇಳೆ ‘ಕೇಂದ್ರದಿಂದ ಪ್ರಾದೇಶಿಕ ಶಕ್ತಿ ಕುಂದುತ್ತಿದೆ’ ಎಂದು ಹೇಳಿದ್ರು. ಇದೇ ಸಮಯಕ್ಕೆ ಕೇಂದ್ರ ಸರ್ಕಾರವನ್ನು ತೇಜಸ್ವಿ ಸೂರ್ಯ ಸಮರ್ಥಿಸಿಕೊಂಡ್ರು.

ಕೇಂದ್ರದ ಸಲಹೆ ರಾಜ್ಯಗಳು ಸ್ವೀಕರಿಸ್ತಿಲ್ಲ ಎಂದು ಹೇಳುವ ಮೂಲಕ ಸಚಿವ ಮಾಧುಸ್ವಾಮಿ ಹೇಳಿಕೆಗೆ ತೇಜಸ್ವಿ ಸೂರ್ಯ ತಿರುಗೇಟು ನೀಡಿದ್ರು. ಒಂದೇ ಪಕ್ಷದಲ್ಲಿದ್ದರೂ ಇಬ್ಬರಿಂದ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದ್ದು ಸಭೆಯಲ್ಲಿ ಇಬ್ಬರು ಮುಖಂಡರು ಮುಜುಗರಕ್ಕೀಡಾದರು.

ಕೇಂದ್ರದ ಹಸ್ತಕ್ಷೇಪದಿಂದ ನಾವೆಲ್ಲ ಕುಗ್ಗಿದ್ದೇವೆ -ಮಾಧುಸ್ವಾಮಿ ಕೇಂದ್ರ ಸರ್ಕಾರದಲ್ಲಿ ಸರ್ವಾಧಿಕಾರಿ ಧೋರಣೆ ಶುರುವಾಗಿದೆ. ಇದು ರಾಜ್ಯದ ಒಕ್ಕೂಟ ವ್ಯವಸ್ಥೆಗೆ ಭಾರಿ ಆತಂಕ ತಂದಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧವೇ ಸಚಿವ ಮಾಧುಸ್ವಾಮಿ ಹೇಳಿಕೆ ನೀಡಿದ್ರು. ರಾಜ್ಯದ ವಿಚಾರಗಳಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡ್ತಿದೆ. ‘ನೀಟ್’ಗೂ ನಮ್ಮ ರಾಜ್ಯಕ್ಕೂ ಏನ್ ಸಂಬಂಧ ಇದೆ. ಸಂಸದರಾಗಿ ಇದನ್ನ ಪಾರ್ಲಿಮೆಂಟ್‌ನಲ್ಲಿ ಪ್ರಶ್ನೆ ಮಾಡಬೇಕು ಎಂದು ಸಂಸದ ತೇಜಸ್ವಿ ಸೂರ್ಯಗೆ ಸಚಿವ ಮಾಧುಸ್ವಾಮಿ ಹೇಳಿದ್ರು.

ನಿಮ್ಮ ನಿರ್ಣಯದಿಂದ 160 ಸೂಪರ್ ಸ್ಪೆಷಾಲಿಟಿ ಸೀಟು ಖಾಲಿ ಇದೆ. ನೀಟ್‌ನಲ್ಲಿ ಯಾರೋ ಉತ್ತರ ಭಾರತದವರು ಸೀಟ್ ಪಡೀತಾರೆ. ಇದರಿಂದ 3-4 ವರ್ಷ ಡಾಕ್ಟರ್ ಕೊರತೆ ಎದುರಿಸಬೇಕಾಗುತ್ತೆ. ಮೊದಲು ಎಜುಕೇಷನ್‌ನಲ್ಲಿ ನಾವು ಕ್ಲಾಸ್ ಆಗಿದ್ದೆವು. ತಮಿಳುನಾಡು ಪ್ರೊಡಕ್ಷನ್‌ನಲ್ಲಿ ವಂಡರ್‌ಫುಲ್ ಆಗಿದ್ದರು. ಆದರೆ ಕೇಂದ್ರದ ಹಸ್ತಕ್ಷೇಪದಿಂದ ನಾವೆಲ್ಲ ಕುಗ್ಗಿದ್ದೇವೆ. ಕೇಂದ್ರದ ಪಾಲಿಸಿಗಳಿಂದ ಮುಂದುವರಿದವರನ್ನು ಮೊಟಕುಗೊಳಿಸುವಂತಾಗುತ್ತಿದೆ. ರಾಜ್ಯಗಳು ಬೆಳೆದಂತೆ ಉದಾರೀಕರಣ ಹೆಚ್ಚಾಗಬೇಕಿತ್ತು. ಆದರೆ ಈಗ ಎಲ್ಲವೂ ಕೇಂದ್ರೀಕರಣವಾಗಿದೆ ಎಂದು ವಿಚಾರ ಸಂಕಿರಣದಲ್ಲಿ ಸಚಿವ ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ರು.

ಮಾಧುಸ್ವಾಮಿ ಹೇಳಿಕೆಗೆ ತೇಜಸ್ವಿ ಆಕ್ಷೇಪ ಸಚಿವ ಮಾಧುಸ್ವಾಮಿ ಹೇಳಿಕೆಗೆ ತೇಜಸ್ವಿ ಸೂರ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇಂದ್ರದಿಂದ ಸರ್ವಾಧಿಕಾರಿ ಧೋರಣೆ ಎಂಬುದಕ್ಕೆ ಅದೇ ವೇದಿಕೆ ಮೇಲೆ ಸಂಸದ ತೇಜಸ್ವಿ ಸೂರ್ಯ ಆಕ್ಷೇಪಿಸಿದ್ದಾರೆ. ಪ್ರಾದೇಶಿಕ ಶಕ್ತಿಗಳಿಂದ ಭಾರತದ ಐಕ್ಯತೆಗೆ ಧಕ್ಕೆ ಆಗಲ್ಲ. ಆಡಳಿತ ವಿಚಾರದಲ್ಲಿ ವಿಕೇಂದ್ರೀಕರಣ ದೇಶಕ್ಕೆ ಅಗತ್ಯವಿದೆ. ಸರ್ಕಾರಿಯ ಕಮಿಷನ್ ಸ್ಥಾಪನೆಯಿಂದ ಸಾಕಷ್ಟು ಕೆಲಸವಾಗಿದೆ. ಕೇಂದ್ರ, ರಾಜ್ಯ ಸರ್ಕಾರಗಳ ಮಧ್ಯೆ ಆರ್ಥಿಕ, ಆಡಳಿತ, ಕಾನೂನು ಮಾರ್ಪಾಡುಗಳಿಗೆ ಕಮಿಷನ್ ಸಲಹೆ ನೀಡಿತ್ತು. ಯಾವ ಸರ್ಕಾರಗಳೂ ಆ ಸಲಹೆಗಳನ್ನ ಸ್ವೀಕರಿಸಲೇ ಇಲ್ಲ. ಹಣಕಾಸು ವಿಚಾರದಲ್ಲಿ ರಾಜ್ಯಗಳ ಸಲಹೆ ತೆಗೆದುಕೊಂಡೆ ನಿರ್ಧಾರ ಮಾಡಬೇಕು ಅಂತನೂ ಸಲಹೆ ನೀಡಿತ್ತು.

ಅದರ ಬಗ್ಗೆ ರಾಜ್ಯದಿಂದ ಹೋಗುವ ನಾವು ಈಗ ಯೋಚಿಸಬೇಕಾಗಿದೆ. ಕೇಂದ್ರದ ತೆರಿಗೆಯ ಭಾಗದಲ್ಲಿ ಶೇ.42ರಷ್ಟು ನೀಡಲಾಗ್ತಿದೆ. ಇಷ್ಟು ಭಾಗವನ್ನ ರಾಜ್ಯಗಳಿಗೆ ನೀಡಿದ್ದು ಮೋದಿ ಸರ್ಕಾರ. GST ಕೌನ್ಸಿಲ್‌ನ ಸದಸ್ಯರು ಸಿಎಂ, ಹಣಕಾಸು ಸಚಿವರೇ ಭಾರತದ ಐಕ್ಯತೆ ವಿಚಾರ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಖಾಸಗೀಕರಣ ಬೆಂಬಲಿಸದಿದ್ದರಿಂದ ದೇಶದಲ್ಲಿ ಬಡತನವಿದೆ. ಬೇರೆ ಬೇರೆ ಐಡೆಂಟಿಟಿಗಳ ಮೇಲೆ ದೇಶವನ್ನ ಹೊಡೆದರು ಅವರಿಗೆ ಸೌಲಭ್ಯ ನೀಡಲು ಸ್ಪರ್ಧೆ ಹುಟ್ಟಿಕೊಂಡಿದ್ದು ಕಾರಣ. ಪ್ರಾದೇಶಿಕತೆ ವಿಚಾರದಿಂದ ಐಕ್ಯತೆಗೆ ಧಕ್ಕೆಯಾಗುವುದಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿಕೆಗೆ ತೇಜಸ್ವಿ ಸೂರ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹಿರಿಯ ನಾಗರಿಕರಿಗಾಗಿ ‘ಕೊವಿಡ್ ರಕ್ಷಾ’ ಕಾಲ್ ಸೆಂಟರ್ ಆರಂಭಿಸಿದ ತೇಜಸ್ವಿ ಸೂರ್ಯ

Published On - 11:14 am, Mon, 29 March 21