ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್ ಪ್ರಕರಣ; ಮತ್ತೋರ್ವ ಆರೋಪಿಯನ್ನು ಬಂಧಿಸಿದ ಪೊಲೀಸರು
ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಕುರಿತು ನಿನ್ನೆ ಮಹತ್ವದ ಸುಳಿವು ಸಿಕ್ಕಿತ್ತು. ಅದರಂತೆ ನಿನ್ನೆ ಮಧ್ಯರಾತ್ರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇಂದು ಆರೋಪಿಯನ್ನು ಪೊಲೀಸರು ಮೈಸೂರಿಗೆ ಕರೆತರಲಿದ್ದಾರೆ.
ಮೈಸೂರು: ಜಿಲ್ಲೆಯಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಆ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 6ಕ್ಕೆ ಏರಿದೆ. ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಕುರಿತು ನಿನ್ನೆ ಮಹತ್ವದ ಸುಳಿವು ಸಿಕ್ಕಿತ್ತು. ಅದರಂತೆ ನಿನ್ನೆ ಮಧ್ಯರಾತ್ರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇಂದು ಆರೋಪಿಯನ್ನು ಪೊಲೀಸರು ಮೈಸೂರಿಗೆ ಕರೆತರಲಿದ್ದಾರೆ.
ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್ ಪ್ರಕರಣ: ನಿನ್ನೆ ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಡಿಸಿಪಿ ಪ್ರದೀಪ್ ಗುಂಟಿ ನೇತೃತ್ವದಲ್ಲಿ ನಿನ್ನೆ ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ಮಾಡಲಾಗಿದೆ. ಈ ವೇಳೆ ಆರೋಪಿಗಳು ಗಂಧದ ಮರ ಹುಡುಕಿಕೊಂಡು ಹೋಗಿರುವುದು ತಿಳಿದುಬಂದಿದೆ.
ಚಾಮುಂಡಿಬೆಟ್ಟದ ತಪ್ಪಲಿನ ಪ್ರದೇಶಕ್ಕೆ ಗೂಡ್ಸ್ ಆಟೋದಲ್ಲಿ ತೆರಳಿದ್ದ ಆರೋಪಿಗಳು, ಗಂಧದ ಮರ ಹುಡುಕಾಡಿದ್ದಾರೆ. ಗಂಧದ ಮರ ಸಿಗದ ಹಿನ್ನೆಲೆ, ಅಲ್ಲಿಯೇ ಕುಳಿತು ಪಾರ್ಟಿ ಮಾಡಿದ್ದಾರೆ. ಈ ವೇಳೆ ಅಲ್ಲಿಗೆ ಬಂದಿದ್ದ ಯುವಕ, ಯುವತಿ ಇಬ್ಬರನ್ನೂ ಬೆದರಿಸಿ ದರೋಡೆ ಮಾಡಲು ಯತ್ನಿಸಿದ್ದು, ಯುವತಿ ಮೇಲೆ ಅತ್ಯಾಚಾರ ಮಾಡಿದ್ದಾರೆ. ಈ ಎಲ್ಲಾ ಮಾಹಿತಿಗಳನ್ನು ಆರೋಪಿಗಳು ಮಹಜರು ವೇಳೆ ತಿಳಿಸಿದ್ದಾರೆ. ಮಹಜರು ಸಮಯದಲ್ಲಿ ಎಸಿಪಿ ಎಂ. ಎನ್.ಶಶಿಧರ್, ಆಲನಹಳ್ಳಿ ಇನ್ಸ್ಪೆಕ್ಟರ್ ರವಿಶಂಕರ್ ಭಾಗಿಯಾಗಿದ್ದರು.
ಇಂದು ಬಂಧಿತ ಆರೋಪಿಗಳಿಗೆ ಮೂರನೇ ದಿನದ ವಿಚಾರಣೆ ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೂಡ ಸಂತ್ರಸ್ತೆಯಿಂದ ಸಹಕಾರ ಸಿಗದ ಹಿನ್ನೆಲೆ ಆರೋಪಿಗಳ ಮಂಪರು ಪರೀಕ್ಷೆಗೆ ಚಿಂತನೆ ನಡೆಸಲಾಗಿದೆ. ಅಲ್ಲದೆ ಮುಂಬೈಗೆ ಹೋದ ನಂತರ ಸಂತ್ರಸ್ತೆ ಪೋಷಕರು ಕೂಡ ಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾಗಿ ಐಡೆಂಟಿಫಿಕೇಶನ್ ಪೆರೇಡ್ ಹಾಗೂ ಹೇಳಿಕೆ ಸಿಗುವುದು ಅನುಮಾನ. ಇದೇ ಕಾರಣಕ್ಕೆ ವೈಜ್ಞಾನಿಕ ಸಾಕ್ಷ್ಯ ಸಂಗ್ರಹಕ್ಕೆ ಮುಂದಾದ ಪೊಲೀಸರು, ಇಂದು ನ್ಯಾಯಾಲಯದಿಂದ ಈ ಬಗ್ಗೆ ಅನುಮತಿ ಪಡೆಯುವ ಸಾಧ್ಯತೆ ಇದೆ.
ಮೈಸೂರು: ಇನ್ನೂ ಸಿಗದ ಓರ್ವ ಆರೋಪಿ ಒಟ್ಟು 6 ಜನರಿಂದ ಕೃತ್ಯದ ಬಗ್ಗೆ ಮಾಹಿತಿ ಇದ್ದು, ಆರೋಪಿಗಳ ವಿಚಾರಣೆ ವೇಳೆ 7 ಜನರಿದ್ದ ಬಗ್ಗೆ ಮಾಹಿತಿ ದೊರೆತಿದೆ. ಸದ್ಯ ತಮಿಳುನಾಡಿನಲ್ಲಿ ಬೀಡು ಬಿಟ್ಟಿರುವ ಒಂದು ತಂಡ, ಆರೋಪಿಗಳು ನೀಡಿರುವ ಸುಳಿವು ಆಧಾರಿಸಿ ಕಾರ್ಯಾಚರಣೆ ನಡೆಸುತ್ತಿದೆ. ಇಂದು ಅಥವಾ ನಾಳೆ ಆರೋಪಿಗಳ ಬಂಧನ ಸಾಧ್ಯತೆ ಇದೆ. ತಪ್ಪಿಸಿಕೊಂಡಿರುವ ಆರೋಪಿ ಗಂಧದ ಮರ ಕಳ್ಳತನದಲ್ಲಿ ಭಾಗಿಯಾಗಿದ್ದ ಬಗ್ಗೆಯೂ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ:
ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ; ಕದ್ದ ಮೊಬೈಲ್ನಿಂದ ಸಿಕ್ಕಿಬಿದ್ದ ಆರೋಪಿಗಳು
ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: ಆರೋಪಿಗಳು ಪೊಲೀಸರ ಬಲೆಗೆ ಬೀಳಲು ಈ ಸುಳಿವುಗಳೇ ಮುಖ್ಯ ಕಾರಣ
Published On - 8:34 am, Tue, 31 August 21