ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ; ಕದ್ದ ಮೊಬೈಲ್​ನಿಂದ ಸಿಕ್ಕಿಬಿದ್ದ ಆರೋಪಿಗಳು

ಎರಡು ವರ್ಷದ ಹಿಂದೆ ಮಹಿಳೆ, ಅದು ಹಳೆಯ ಮೊಬೈಲ್. ತನಗೆ ಮೊಬೈಲ್ ಫೋನ್ ಬೇಡ ಸಿಮ್ ಬೇಕು ಎಂದು ಬರೀ ಎನ್ಸಿಆರ್ ಮಾಡಿ ಎಂದು ಹೇಳಿದ್ದರು. ಸಿಮ್ ಪಡೆಯಲು ಮಹಿಳೆ ಕೇವಲ ಎನ್​ಸಿಆರ್ ಪಡೆದಿದ್ದರು.

ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ; ಕದ್ದ ಮೊಬೈಲ್​ನಿಂದ ಸಿಕ್ಕಿಬಿದ್ದ ಆರೋಪಿಗಳು
ಸಾಂದರ್ಭಿಕ ಚಿತ್ರ
Follow us
sandhya thejappa
|

Updated on:Aug 30, 2021 | 11:04 AM

ಮೈಸೂರು: ಜಿಲ್ಲೆಯಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ (Rape) ಎಸಗಿದ ಆರೋಪಿಗಳು ಎರಡು ವರ್ಷದ ಹಿಂದೆ ಕದ್ದ ಮೊಬೈಲ್ನಿಂದ ಸಿಕ್ಕಿ ಬಿದ್ದಿದ್ದಾರೆ. ಆರೋಪಿಗಳು ಮೈಸೂರಲ್ಲಿ ಸಾಲು ಸಾಲು ಸುಲಿಗೆಗಳು ಮಾಡಿದ್ದಾರೆ ಎಂಬ ಮಾಹಿತಿ ವಿಚಾರಣೆ ವೇಳೆ ಲಭ್ಯವಾಗುತ್ತಿದೆ. ಒಂದು ವರ್ಷದ ಹಿಂದೆ ಮೈಸೂರಿನ ಪೊಲೀಸ್ ಠಾಣೆಯಲ್ಲಿ ಆಗಿದ್ದ ಒಂದು ಎನ್​ಸಿಆರ್ ಪೊಲೀಸರ ಪಾಲಿಗೆ ವರವಾಗಿದೆ. ನಿರ್ಜನ ಪ್ರದೇಶದಲ್ಲಿ ಮೊಬೈಲ್ (Mobile) ಕಸಿದುಕೊಂಡು ಹೋಗಿದ್ದರು ಎಂದು ಎರಡು ವರ್ಷದ ಹಿಂದೆ ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ಎನ್​ಸಿಆರ್ ಮಾಡಿಸಿದ್ದರು. ಅತ್ಯಾಚಾರ ಎಸಗಿದ್ದ ಆರೋಪಿಯೊಬ್ಬ ಮಹಿಳೆಯ ಮೊಬೈಲ್ ಬಳಸಿರುವುದು ಬೆಳಕಿಗೆ ಬಂದಿದೆ.

ಎರಡು ವರ್ಷದ ಹಿಂದೆ ಮಹಿಳೆ, ಅದು ಹಳೆಯ ಮೊಬೈಲ್. ತನಗೆ ಮೊಬೈಲ್ ಫೋನ್ ಬೇಡ ಸಿಮ್ ಬೇಕು ಎಂದು ಬರೀ ಎನ್ಸಿಆರ್ ಮಾಡಿ ಎಂದು ಹೇಳಿದ್ದರು. ಸಿಮ್ ಪಡೆಯಲು ಮಹಿಳೆ ಕೇವಲ ಎನ್​ಸಿಆರ್ ಪಡೆದಿದ್ದರು. ಗ್ಯಾಂಗ್ ರೇಪ್ ನಡೆದ ಮರು ದಿನ ನಗರದ ನಿರ್ಜನ ಪ್ರದೇಶದಲ್ಲಿ ಆಗಿದ್ದ ಸುಲಿಗೆ ಪ್ರಕರಣಗಳನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಪಟ್ಟಿ ಮಾಡಿಸಿದ್ದರು. ಈ ವೇಳೆ ಮಹಿಳೆಯ ಮೊಬೈಲ್​ನ ಆರೋಪಿಯೊಬ್ಬ ಬಳಸಿದ್ದ ಎಂಬ ಮಾಹಿತಿ ತಿಳಿದುಬಂದಿದೆ. ತಮಿಳುನಾಡಿನ ಸಿಮ್ ಕಾರ್ಡ್​ನಲ್ಲಿ ಆ ಮೊಬೈಲ್​ನ ಬಳಕೆ ಮಾಡುತ್ತಿದ್ದ. ಎರಡು ವರ್ಷದ ಹಿಂದೆ ಕಸಿದ ಮೊಬೈಲ್ ಇಎಂಇಐ ನಂಬರ್ ಮ್ಯಾಚ್ ಆಗುತ್ತಿತ್ತು. ಹೀಗಾಗಿ ಮಹಿಳೆಯ ಮೊಬೈಲ್ ಬಳಸಿರುವುದು ತಿಳಿದುಬಂದಿದೆ.

ಮೈಸೂರು ರೇಪ್ ಆರೋಪಿಗಳು 3-4 ವರ್ಷಗಳಿಂದ ಮೈಸೂರಿಗೆ ಬರುತ್ತಿದ್ದರು. ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ದರೋಡೆ, ಲೈಂಗಿಕ ಕೃತ್ಯಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಆರೋಪಿಗಳು 10ಕ್ಕೂ ಹೆಚ್ಚು ಶ್ರೀಗಂಧದ ಮರ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಇದೇ ರೀತಿ ಒಡವೆ, ಹಣ ಮೊಬೈಲ್​ಗಳನ್ನ ದೋಚಿದ್ದರು. ನಿರ್ಜನ ಪ್ರದೇಶಕ್ಕೆ ಮಹಿಳೆ, ಯುವತಿ ಜೊತೆ ಯಾರೆ ಹೋದರು ಅವರ ಬಳಿ ವಸೂಲಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಶಾಕ್‌ನಿಂದ ಹೊರಬಾರದ ಸಂತ್ರಸ್ತೆ ಘಟನೆ ನಡೆದು 6 ದಿನವಾಗಿದ್ದು, ಸಂತ್ರಸ್ತೆ ಮಾನಸಿಕವಾಗಿ ಜರ್ಜರಿತವಾಗಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸಂತ್ರಸ್ತೆ ಪೋಷಕರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಸಂತ್ರಸ್ತೆ ಮೈಸೂರಿನಿಂದ ಮುಂಬೈಗೆ ತೆರಳಿದ್ದಾರೆ. ಯಾರ ಜೊತೆಯೂ ಮಾತನಾಡದೆ ಸದಾ ಮೌನವಾಗಿದ್ದಾರೆ. ಮನೆಯವರ ಜೊತೆಯೂ ಸರಿಯಾಗಿ ಮಾತನಾಡದೆ ಸಂಪೂರ್ಣ ಮೌನವಾಗಿದ್ದಾರೆ. ಘಟನೆಯ ಆಘಾತದಿಂದ ವಿದ್ಯಾರ್ಥಿನಿ ಬದಲಾಗಿದ್ದಾರೆ. ಜೊತೆಗೆ ಸಂತ್ರಸ್ತೆ ಸ್ನೇಹಿತನ ಪರಿಸ್ಥಿತಿ ಕೂಡಾ ಇದೇ ಆಗಿದೆ. ಯುವಕ ಅರ್ಥವಿಲ್ಲದ ಮಾತುಗಳನ್ನಾಡುತ್ತಿದ್ದಾನೆ. ಆಸ್ಪತ್ರೆಯಿಂದ ಮನೆಗೆ ತೆರಳಿರುವ ಯುವಕ ಸದ್ಯ ಪೋಷಕರ ಜೊತೆಯಲ್ಲಿದ್ದಾನೆ.

ಭಗ್ನ ಪ್ರೇಮಿ ಮೈಸೂರು ಪೊಲೀಸರು ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸುವ ವೇಳೆ ಆರೋಪಿಯೊಬ್ಬ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ. ಆರೋಪಿಗಳ ಪೈಕಿ ಓರ್ವ ಭಗ್ನ ಪ್ರೇಮಿಯಾಗಿದ್ದ. ಮೂವರು ಯುವತಿಯರು ಆರೋಪಿಯನ್ನ ಪ್ರೀತಿಸಿ ಕೈಕೊಟ್ಟಿದ್ದಾರಂತೆ. ಮೂವರು ಯುವತಿಯರು ಕೈಕೊಟ್ಟ ಬಳಿಕ ವಿಕೃತನಾಗಿದ್ದ. ಅವಕಾಶ ಸಿಕ್ಕಾಗಲೆಲ್ಲ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ನೀಡುತ್ತಿದ್ದ ಎಂದು ತಿಳಿದುಬಂದಿದೆ.

ಇದನ್ನೂ ಓದಿ

ಸಿಂದಗಿ ಅತ್ಯಾಚಾರ ಆರೋಪಿ ಪೊಲೀಸ್ ಠಾಣೆಯಲ್ಲಿ ನೇಣು ಪ್ರಕರಣ ಸಿಐಡಿ ತನಿಖೆಗೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಮೈಸೂರು ಅತ್ಯಾಚಾರ ಪ್ರಕರಣ: ಆರೋಪಿಗಳಿಂದ ತಪ್ಪೊಪ್ಪಿಗೆ, ಹೇಳಿಕೆ ನೀಡಲು ಸಂತ್ರಸ್ತೆ ನಿರಾಕರಣೆ; ಆರೋಪಿಗಳಿಗೆ ಇಂದೇ ವೈದ್ಯಕೀಯ ಪರೀಕ್ಷೆ

(accused of rape had used a mobile phone that was stolen two years ago in mysuru)

Published On - 10:52 am, Mon, 30 August 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ