ಬಾಗಲಕೋಟೆ: ಬಾರ್ ಅಂಡ್ ರೆಸ್ಟೊರೆಂಟ್ ಸ್ಥಳಾಂತರಕ್ಕೆ ಆಗ್ರಹ; ಎಂಟನೇ ದಿನಕ್ಕೆ ಕಾಲಿಟ್ಟ ಮಹಿಳೆಯರ ಪ್ರತಿಭಟನೆ

ಚನಾಳ ಗ್ರಾಮದ ಬಳಿಯ ಕಿಂಗ್ಸ್ ಬಾರ್ ಸ್ಥಳಾಂತರಕ್ಕೆ ಒತ್ತಾಯಿಸಿ ಮಹಿಳೆಯರು ಬಾರ್ ಎದುರಿಗೆ ಅಡುಗೆ ಮಾಡಿ, ಉಪಹಾರ ಸೇವಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಬಾಗಲಕೋಟೆ: ಬಾರ್ ಅಂಡ್ ರೆಸ್ಟೊರೆಂಟ್ ಸ್ಥಳಾಂತರಕ್ಕೆ ಆಗ್ರಹ; ಎಂಟನೇ ದಿನಕ್ಕೆ ಕಾಲಿಟ್ಟ ಮಹಿಳೆಯರ ಪ್ರತಿಭಟನೆ
ಬಾರ್ ಮುಂದೆ ಮಹಿಳೆಯರಿಂದ ಪ್ರತಿಭಟನೆ
Follow us
TV9 Web
| Updated By: preethi shettigar

Updated on: Aug 30, 2021 | 11:17 AM

ಬಾಗಲಕೋಟೆ: ಬಾರ್ ಅಂಡ್ ರೆಸ್ಟೊರೆಂಟ್ ಸ್ಥಳಾಂತರಕ್ಕೆ ಆಗ್ರಹಿಸಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಚನಾಳ ಗ್ರಾಮದಲ್ಲಿ ಕಳೆದ ಎಂಟು ದಿನಗಳಿಂದ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಚನಾಳ ಗ್ರಾಮದ ಬಳಿಯ ಕಿಂಗ್ಸ್ ಬಾರ್ ಸ್ಥಳಾಂತರಕ್ಕೆ ಒತ್ತಾಯಿಸಿ ಮಹಿಳೆಯರು ಬಾರ್ ಎದುರಿಗೆ ಅಡುಗೆ ಮಾಡಿ, ಉಪಹಾರ ಸೇವಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಬಾರ್​ನಿಂದ ಗ್ರಾಮದ ಯುವಕರು ಹಾಳಾಗುತ್ತಿದ್ದಾರೆ. ಮನೆಯಲ್ಲಿ ನಿತ್ಯವೂ ಜಗಳ ಶುರುವಾಗಿದೆ‌. ಮನೆಯಲ್ಲಿನ ವಸ್ತುಗಳನ್ನು ಕುಡಿಯುವುದಕ್ಕಾಗಿಯೇ ಮಾರಾಟ ಮಾಡುತ್ತಿದ್ದಾರೆ. ನಮ್ಮ ಸಂಸಾರ ಬೀದಿಗೆ ಬರುತ್ತಿದೆ. ಹೀಗಾಗಿ ಬಾರ್ ಸ್ಥಳಾಂತರ ಮಾಡಿ. ಬಾರ್ ಸ್ಥಳಾಂತರ ಮಾಡುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ ಎಂದು ಪ್ರತಿಭಟನಾನೀರತ ಮಹಿಳೆಯರು ತಿಳಿಸಿದ್ದಾರೆ.

ಚಿಕ್ಕಮಗಳೂರು: ಬಾರ್ ಮುಚ್ಚುವಂತೆ ಮಹಿಳೆಯರ ಧರಣಿ; ಬಾರ್ ಮುಚ್ಚದಂತೆ ಮದ್ಯಪ್ರಿಯರ ಹೋರಾಟ! ಒಂದೆಡೆ ಮಹಿಳೆಯರಿಂದ ಬಾರ್ ಮುಚ್ಚುವಂತೆ ಧರಣಿ, ಮತ್ತೊಂದೆಡೆ ಬಾರ್ ಮುಚ್ಚದಂತೆ ಮದ್ಯಪ್ರಿಯರಿಂದ ಧರಣಿ ನಡೆದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗ್ರಾಮ ಅಂಚೆ ಚೋಮನಹಳ್ಳಿಯಲ್ಲಿ ನಡೆದಿದೆ. ಇಲ್ಲಿನ ಬಾರ್‌ ಮುಚ್ಚುವಂತೆ ಚಿಕ್ಕಮಗಳೂರು ಅಬಕಾರಿ ಕಚೇರಿ ಬಳಿ ಮಹಿಳೆಯರು ಧರಣಿ ನಡೆಸಿದ್ದಾರೆ. ಆದರೆ, ಇದಕ್ಕೆ ವಿರುದ್ಧವಾಗಿ ಮತ್ತೊಂದೆಡೆ ಬಾರ್ ಮುಚ್ಚದಂತೆ ಮದ್ಯಪ್ರಿಯರಿಂದ ಧರಣಿ ನಡೆದಿದೆ. ಅಬಕಾರಿ ಕಚೇರಿಯ ಬಳಿ ಬಾರ್‌ ಪರ, ವಿರುದ್ಧ ಪ್ರತಿಭಟನೆ ಜೋರಾಗಿದೆ.

ಗ್ರಾಮದಲ್ಲಿ ತಿಂಗಳ ಹಿಂದೆ ಚಂದನ್ ಬಾರ್‌ ಎಂಬ ಬಾರ್ ಆರಂಭವಾಗಿತ್ತು. ಇದೀಗ ಅದಕ್ಕೆ ಮಹಿಳೆಯರಿಂದ ವಿರೋಧ ವ್ಯಕ್ತವಾಗಿದೆ. ಮದ್ಯಪ್ರಿಯರು ಮಹಿಳೆಯರ ವಿರೋಧಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಾರ್ ಮುಚ್ಚದಂತೆ ತಾವೂ ಧರಣಿ ನಡೆಸಿದ್ದಾರೆ. ಚಿಕ್ಕಮಗಳೂರಿನ ಅಬಕಾರಿ ಕಚೇರಿ ಬಳಿ ಈ ಪ್ರತಿಭಟನೆ ನಡೆದಿದೆ. ಎಣ್ಣೆ ಬೇಕೆಂದು ಒಂದು ಗುಂಪು, ಬೇಡವೆಂದು ಮತ್ತೊಂದು ಗುಂಪು, ಬಾರ್ ಪರ- ವಿರುದ್ದ ರಸ್ತೆ ಮಧ್ಯೆ ಪ್ರತಿಭಟನೆ ನಡೆಸಿದೆ. ಬಾರ್ ಬೇಡವೆಂದು ಮಹಿಳೆಯರು ಬೀದಿಗಿಳಿದಿದ್ದಾರೆ. ಬಾರ್ ಬೇಕೇ ಬೇಕೆಂದು ಮದ್ಯಪ್ರಿಯರು ಬೀದಿಗಳಿದಿದ್ದಾರೆ.

ನನ್ ಗಂಡ ಬೆಳ್ಗೆಯಿಂದ ಸಂಜೆ ತನಕ ಕುಡೀತಾನೆ ಇರ್ತಾನೆ ಸರ್. ಕುಡ್ಕೋ ಬಂದು ಹೊಡೀತಾನೆ, ಬಡೀತಾನೆ. ನಮ್ ಕಷ್ಟ ಯಾರಿಗೆ ಹೇಳೋದ್ ಸರ್. ಬಾರ್ ಹತ್ರ ಇದ್ರೆ ನನ್ನ ಗಂಡನ ಕಾಟ ಮತ್ತಷ್ಟು ಜಾಸ್ತಿಯಾಗುತ್ತೆ. ಹಾಗಾಗೀ ಬಾರ್ ಬೇಡ ಅಂತಾ ಡಿಸಿ ಅವ್ರಿಗೆ ಮನವಿ ಮಾಡೋಕೆ ಬಂದೀವಿ ಸರ್ ಎಂದು ಮಹಿಳೆಯರು ಕಣ್ಣೀರು ಹಾಕಿದ್ದಾರೆ.

ಇತ್ತ, ನಾನ್ ಸಂಜೆ 6 ಗಂಟೆಗೆ ಕೆಲ್ಸ ಮುಗ್ಸಿ ಬರ್ತೀನಿ, ಆಮೇಲೆ ಬಾರ್ ಹುಡ್ಕೊಂಡ್ ಬಾಣಾವಾರಕ್ಕೆ ಹೋಗ್ಬೇಕಂದ್ರೆ 10 ಕೀಲೋ ಮೀಟರ್, ಮತ್ತಿಘಟ್ಟಕ್ಕೆ ಹೋಗೋಕೂ 10 ಕೀಲೋ ಮೀಟರ್ ಆಗುತ್ತೆ. ದೇವನೂರು ಹೋಗ್ಬೇಕಂದ್ರೆ 10 ಕೀಲೋ ಮೀಟರ್. ಕುಡಿಬೇಕು ಅಂದ್ರೆ ಎಲ್ಲಾ ಬೇಲಿ ಸಾಲಲೆಲ್ಲಾ ಹೋಗ್ಬೇಕು. ನಮ್ಮೂರಲ್ಲೇ ಆದ್ರೆ ಈ ಕಷ್ಟನೇ ಇರಲ್ಲ. ಅಲ್ದೇ ಕೆಲ ಕಡೆ ಅಂಗಡಿಯಲ್ಲಿ ಕದ್ದು ಮಾರ್ತಾರೆ, ಅಲ್ಲಿ ಒನ್ ಟು ಡಬಲ್ ದುಡ್ಡು ಕೊಟ್ಟು ಕದ್ದು ಕುಡಿಯಬೇಕು. ಅಷ್ಟು ದುಡ್ಡು ಕೊಟ್ಟು ಕದ್ದು ಕುಡಿಯೋ ಹಣೆಬರಹ ಯಾಕೆ ? ಅನ್ನೋದು ಮದ್ಯಪ್ರಿಯರ ಪ್ರಶ್ನೆ.

ಇದನ್ನೂ ಓದಿ: ಬಾಗಲಕೋಟೆ: ಬಾರ್ ಅಂಡ್ ರೆಸ್ಟೋರೆಂಟ್ ತೆರವುಗೊಳಿಸಲು ಆಗ್ರಹ; ಬಾರ್ ಮುಂದೆ ಮಹಿಳೆಯರಿಂದ ಪ್ರತಿಭಟನೆ

ಬಾರ್ ಮುಚ್ಚುವಂತೆ ಮಹಿಳೆಯರ ಧರಣಿ; ಬಾರ್ ಮುಚ್ಚದಂತೆ ಮದ್ಯಪ್ರಿಯರ ಹೋರಾಟ! ಚಿಕ್ಕಮಗಳೂರಿನಲ್ಲಿ ಹೀಗೊಂದು ಘಟನೆ

ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ