ಬಾರ್ ಮುಚ್ಚುವಂತೆ ಮಹಿಳೆಯರ ಧರಣಿ; ಬಾರ್ ಮುಚ್ಚದಂತೆ ಮದ್ಯಪ್ರಿಯರ ಹೋರಾಟ! ಚಿಕ್ಕಮಗಳೂರಿನಲ್ಲಿ ಹೀಗೊಂದು ಘಟನೆ

Chikkamagaluru: ಗ್ರಾಮದಲ್ಲಿ ತಿಂಗಳ ಹಿಂದೆ ಚಂದನ್ ಬಾರ್‌ ಎಂಬ ಬಾರ್ ಆರಂಭವಾಗಿತ್ತು. ಇದೀಗ ಅದಕ್ಕೆ ಮಹಿಳೆಯರಿಂದ ವಿರೋಧ ವ್ಯಕ್ತವಾಗಿದೆ. ಮದ್ಯಪ್ರಿಯರು ಮಹಿಳೆಯರ ವಿರೋಧಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಬಾರ್ ಮುಚ್ಚುವಂತೆ ಮಹಿಳೆಯರ ಧರಣಿ; ಬಾರ್ ಮುಚ್ಚದಂತೆ ಮದ್ಯಪ್ರಿಯರ ಹೋರಾಟ! ಚಿಕ್ಕಮಗಳೂರಿನಲ್ಲಿ ಹೀಗೊಂದು ಘಟನೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಾರ್ ಮುಂದೆ ಪ್ರತಿಭಟನೆ!
Follow us
TV9 Web
| Updated By: ganapathi bhat

Updated on:Aug 06, 2021 | 8:10 PM

ಚಿಕ್ಕಮಗಳೂರು: ಒಂದೆಡೆ ಮಹಿಳೆಯರಿಂದ ಬಾರ್ ಮುಚ್ಚುವಂತೆ ಧರಣಿ, ಮತ್ತೊಂದೆಡೆ ಬಾರ್ ಮುಚ್ಚದಂತೆ ಮದ್ಯಪ್ರಿಯರಿಂದ ಧರಣಿ ನಡೆದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗ್ರಾಮ ಅಂಚೆ ಚೋಮನಹಳ್ಳಿಯಲ್ಲಿ ನಡೆದಿದೆ. ಇಲ್ಲಿನ ಬಾರ್‌ ಮುಚ್ಚುವಂತೆ ಚಿಕ್ಕಮಗಳೂರು ಅಬಕಾರಿ ಕಚೇರಿ ಬಳಿ ಮಹಿಳೆಯರು ಧರಣಿ ನಡೆಸಿದ್ದಾರೆ. ಆದರೆ, ಇದಕ್ಕೆ ವಿರುದ್ಧವಾಗಿ ಮತ್ತೊಂದೆಡೆ ಬಾರ್ ಮುಚ್ಚದಂತೆ ಮದ್ಯಪ್ರಿಯರಿಂದ ಧರಣಿ ನಡೆದಿದೆ. ಅಬಕಾರಿ ಕಚೇರಿಯ ಬಳಿ ಬಾರ್‌ ಪರ, ವಿರುದ್ಧ ಪ್ರತಿಭಟನೆ ಜೋರಾಗಿದೆ.

ಗ್ರಾಮದಲ್ಲಿ ತಿಂಗಳ ಹಿಂದೆ ಚಂದನ್ ಬಾರ್‌ ಎಂಬ ಬಾರ್ ಆರಂಭವಾಗಿತ್ತು. ಇದೀಗ ಅದಕ್ಕೆ ಮಹಿಳೆಯರಿಂದ ವಿರೋಧ ವ್ಯಕ್ತವಾಗಿದೆ. ಮದ್ಯಪ್ರಿಯರು ಮಹಿಳೆಯರ ವಿರೋಧಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಾರ್ ಮುಚ್ಚದಂತೆ ತಾವೂ ಧರಣಿ ನಡೆಸಿದ್ದಾರೆ. ಚಿಕ್ಕಮಗಳೂರಿನ ಅಬಕಾರಿ ಕಚೇರಿ ಬಳಿ ಈ ಪ್ರತಿಭಟನೆ ನಡೆದಿದೆ. ಎಣ್ಣೆ ಬೇಕೆಂದು ಒಂದು ಗುಂಪು, ಬೇಡವೆಂದು ಮತ್ತೊಂದು ಗುಂಪು, ಬಾರ್ ಪರ- ವಿರುದ್ದ ರಸ್ತೆ ಮಧ್ಯೆ ಪ್ರತಿಭಟನೆ ನಡೆಸಿದೆ. ಬಾರ್ ಬೇಡವೆಂದು ಮಹಿಳೆಯರು ಬೀದಿಗಿಳಿದಿದ್ದಾರೆ. ಬಾರ್ ಬೇಕೇ ಬೇಕೆಂದು ಮದ್ಯಪ್ರಿಯರು ಬೀದಿಗಳಿದಿದ್ದಾರೆ.

ನನ್ ಗಂಡ ಬೆಳ್ಗೆಯಿಂದ ಸಂಜೆ ತನಕ ಕುಡೀತಾನೆ ಇರ್ತಾನೆ ಸರ್. ಕುಡ್ಕೋ ಬಂದು ಹೊಡೀತಾನೆ, ಬಡೀತಾನೆ. ನಮ್ ಕಷ್ಟ ಯಾರಿಗೆ ಹೇಳೋದ್ ಸರ್. ಬಾರ್ ಹತ್ರ ಇದ್ರೆ ನನ್ನ ಗಂಡನ ಕಾಟ ಮತ್ತಷ್ಟು ಜಾಸ್ತಿಯಾಗುತ್ತೆ. ಹಾಗಾಗೀ ಬಾರ್ ಬೇಡ ಅಂತಾ ಡಿಸಿ ಅವ್ರಿಗೆ ಮನವಿ ಮಾಡೋಕೆ ಬಂದೀವಿ ಸರ್ ಎಂದು ಮಹಿಳೆಯರು ಕಣ್ಣೀರು ಹಾಕಿದ್ದಾರೆ.

ಇತ್ತ, ನಾನ್ ಸಂಜೆ 6 ಗಂಟೆಗೆ ಕೆಲ್ಸ ಮುಗ್ಸಿ ಬರ್ತೀನಿ, ಆಮೇಲೆ ಬಾರ್ ಹುಡ್ಕೊಂಡ್ ಬಾಣಾವಾರಕ್ಕೆ ಹೋಗ್ಬೇಕಂದ್ರೆ 10 ಕೀಲೋ ಮೀಟರ್, ಮತ್ತಿಘಟ್ಟಕ್ಕೆ ಹೋಗೋಕೂ 10 ಕೀಲೋ ಮೀಟರ್ ಆಗುತ್ತೆ. ದೇವನೂರು ಹೋಗ್ಬೇಕಂದ್ರೆ 10 ಕೀಲೋ ಮೀಟರ್. ಕುಡಿಬೇಕು ಅಂದ್ರೆ ಎಲ್ಲಾ ಬೇಲಿ ಸಾಲಲೆಲ್ಲಾ ಹೋಗ್ಬೇಕು. ನಮ್ಮೂರಲ್ಲೇ ಆದ್ರೆ ಈ ಕಷ್ಟನೇ ಇರಲ್ಲ. ಅಲ್ದೇ ಕೆಲ ಕಡೆ ಅಂಗಡಿಯಲ್ಲಿ ಕದ್ದು ಮಾರ್ತಾರೆ, ಅಲ್ಲಿ ಒನ್ ಟು ಡಬಲ್ ದುಡ್ಡು ಕೊಟ್ಟು ಕದ್ದು ಕುಡಿಯಬೇಕು. ಅಷ್ಟು ದುಡ್ಡು ಕೊಟ್ಟು ಕದ್ದು ಕುಡಿಯೋ ಹಣೆಬರಹ ಯಾಕೆ ? ಅನ್ನೋದು ಮದ್ಯಪ್ರಿಯರ ಪ್ರಶ್ನೆ.

ಎರಡು ತಿಂಗಳ ಹಿಂದೆ ಮಂಚೇಗೌಡ ಎಂಬವರ ಚಂದನ್ ಬಾರ್ ಅಂಚೆಚೋಮನಹಳ್ಳಿ ಗ್ರಾಮದಲ್ಲಿ ಆರಂಭಗೊಂಡಿತ್ತು. ಬಾರ್ ಏಕಾಏಕಿ ಓಪನ್ ಆದಾಗ ಅಂಚೆಚೋಮನಹಳ್ಳಿ ಗ್ರಾಮ ಪಂಚಾಯತಿ ಸೇರಿದಂತೆ ಊರಿನ ಮಹಿಳೆಯರು ಬಾರ್ ವಿರುದ್ಧ ದನಿ ಎತ್ತಿದ್ದರು. ಬಾರ್ ತೆರೆಯಬಾರದು ಎಂದು ಬಾರ್ ಮುಂದೆಯೇ ಪ್ರತಿಭಟನೆಯನ್ನು ಕೆಲದಿನಗಳ ಹಿಂದೆ ನಡೆಸಿದ್ದರು. ಯಾವುದೇ ಕಾರಣಕ್ಕೂ ಬಾರ್ ಓಪನ್ ಆಗಲು ನಮ್ಮೂರಲ್ಲಿ ಬಿಡಲ್ಲ ಎಂದು ಊರಿನ ಮಹಿಳೆಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.

ಆ ಬಳಿಕ ಬಾರ್ ಕೆಲ ದಿನಗಳ ತನಕ ಮುಚ್ಚಲಾಗಿತ್ತು. ಆದರೆ, ಈಗ ಮತ್ತೆ ಬಾರ್ ಓಪನ್ ಮಾಡೋ ಸುಳಿವು ಪಡೆದುಕೊಂಡ ಮಹಿಳೆಯರು ಇಂದು ಚಿಕ್ಕಮಗಳೂರು ಅಬಕಾರಿ, ಡಿಸಿ ಕಛೇರಿ ಎದುರು ಬಾರ್ ತೆರೆಯಬಾರದು ಎಂದು ಪ್ರತಿಭಟನೆ ನಡೆಸಿದ್ದಾರೆ. ಅಂಚೆಚೋಮನಹಳ್ಳಿ ಗ್ರಾಮದಲ್ಲಿ ಬಾರ್ ಓಪನ್ ಮಾಡಿದ್ಮೇಲೆ ಗಂಡ-ಹೆಂಡತಿಯರ ಗಲಾಟೆ ಜಾಸ್ತಿಯಾಗಿದೆ. ನಮ್ ಶಾಪ ಖಂಡಿತಾ ಬಾರ್ ಓನರ್ಗೆ ತಟ್ಟೇ ತಟ್ಟುತ್ತೆ ಎಂದು ಮಹಿಳೆಯರು ಅಳಲು ತೋಡಕೊಂಡಿದ್ದಾರೆ.

ವರದಿ: ಪ್ರಶಾಂತ್ ಚಿಕ್ಕಮಗಳೂರು

ಇದನ್ನೂ ಓದಿ: ಮದ್ಯಪಾನ ಏನು ಪರಿಣಾಮ ಬೀರುತ್ತದೆ? ಕುಡಿದ ಮೇಲೆ ದೇಹದೊಳಗೆ ಏನಾಗುತ್ತದೆ?

ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರಾಗಿ ಶ್ರುತಿ ನೇಮಕ

(Women Protest against New Bar in Chikkamagaluru Dist Drunkards oppose Womens Protest Supports Bar)

Published On - 6:12 pm, Fri, 6 August 21

ಬಿಗ್ ಬಾಸ್ ಮನೆಗೆ ‘ರಾಮಾಚಾರಿ’ ಜೋಡಿ; ಕುರಿನ ಕರೆದಂತೆ ಚಾರುನ ಕರೆದ ಹನುಮಂತ
ಬಿಗ್ ಬಾಸ್ ಮನೆಗೆ ‘ರಾಮಾಚಾರಿ’ ಜೋಡಿ; ಕುರಿನ ಕರೆದಂತೆ ಚಾರುನ ಕರೆದ ಹನುಮಂತ
ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಕೊಂಡುಕೊಳ್ಳುವ ಯೋಗವಿದೆ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಕೊಂಡುಕೊಳ್ಳುವ ಯೋಗವಿದೆ
4 ವರ್ಷಗಳ ಬಳಿಕ ವೈಟ್​ಹೌಸ್​ನಲ್ಲಿ ಡೊನಾಲ್ಡ್ ಟ್ರಂಪ್-ಜೋ ಬೈಡೆನ್ ಭೇಟಿ
4 ವರ್ಷಗಳ ಬಳಿಕ ವೈಟ್​ಹೌಸ್​ನಲ್ಲಿ ಡೊನಾಲ್ಡ್ ಟ್ರಂಪ್-ಜೋ ಬೈಡೆನ್ ಭೇಟಿ
ರಿಲ್ಯಾಕ್ಸ್ ಮೂಡ್​ನಲ್ಲಿರುವ ಕಾಡಾನೆ ಹಿಂಡಿನ ದೃಶ್ಯ ಡ್ರೋನ್​ನಲ್ಲಿ ಸೆರೆ​
ರಿಲ್ಯಾಕ್ಸ್ ಮೂಡ್​ನಲ್ಲಿರುವ ಕಾಡಾನೆ ಹಿಂಡಿನ ದೃಶ್ಯ ಡ್ರೋನ್​ನಲ್ಲಿ ಸೆರೆ​
ನನ್ನನ್ನು ಕೆಳಗಿಳಿಸುವ ಪ್ರಯತ್ನಗಳಿಗೆ ಜನರೇ ಉತ್ತರ ನೀಡಬೇಕು: ಸಿದ್ದರಾಮಯ್ಯ
ನನ್ನನ್ನು ಕೆಳಗಿಳಿಸುವ ಪ್ರಯತ್ನಗಳಿಗೆ ಜನರೇ ಉತ್ತರ ನೀಡಬೇಕು: ಸಿದ್ದರಾಮಯ್ಯ
ಜೋಡಿ ಬದಲಾಯಿಸಲು ಅನುಷಾ ರೈಗೆ ಆಫರ್​ ನೀಡಿದ ಬಿಗ್ ಬಾಸ್; ಕಾದಿದೆ ಟ್ವಿಸ್ಟ್
ಜೋಡಿ ಬದಲಾಯಿಸಲು ಅನುಷಾ ರೈಗೆ ಆಫರ್​ ನೀಡಿದ ಬಿಗ್ ಬಾಸ್; ಕಾದಿದೆ ಟ್ವಿಸ್ಟ್
ಕಾಮಗಾರಿಗಳಲ್ಲಿ ಮೀಸಲಾತಿಯ ಬಗ್ಗೆ ಸಿಎಂ ಸ್ಪಷ್ಟನೆ ನೀಡಿದ್ದಾರೆ: ಖರ್ಗೆ
ಕಾಮಗಾರಿಗಳಲ್ಲಿ ಮೀಸಲಾತಿಯ ಬಗ್ಗೆ ಸಿಎಂ ಸ್ಪಷ್ಟನೆ ನೀಡಿದ್ದಾರೆ: ಖರ್ಗೆ
ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುವಾಗಲೇ ಹೃದಯಾಘಾತದಿಂದ ಸಾವು!
ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುವಾಗಲೇ ಹೃದಯಾಘಾತದಿಂದ ಸಾವು!
ಮೈಸೂರಿನ ಎಲ್ಲ ಕಾರ್ಯಕ್ರಮಗಳಲ್ಲಿ ತಂದೆಯನ್ನು ಹಿಂಬಾಲಿಸುತ್ತಿರುವ ಯತೀಂದ್ರ
ಮೈಸೂರಿನ ಎಲ್ಲ ಕಾರ್ಯಕ್ರಮಗಳಲ್ಲಿ ತಂದೆಯನ್ನು ಹಿಂಬಾಲಿಸುತ್ತಿರುವ ಯತೀಂದ್ರ