ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರಾಗಿ ಶ್ರುತಿ ನೇಮಕ

ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಕೊಕ್​ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಅವರು, ‘ಅಧ್ಯಕ್ಷ ಸ್ಥಾನ ಕಳೆದುಕೊಂಡು ನೋವಾಗಿದೆ. ಈ ವಿಚಾರ ಮೊದಲು ಗೊತ್ತಿರಲಿಲ್ಲ, ನನಗೆ ಏನೂ ಹೇಳಿರಲಿಲ್ಲ. ಮಾಧ್ಯಮಗಳ ಮೂಲಕ ನನಗೆ ಗೊತ್ತಾಯಿತು. ನಂತರ ಕಾ.ಪು.ಸಿದ್ದಲಿಂಗಸ್ವಾಮಿ ಅವರೇ ಮಾಹಿತಿ ನೀಡಿದರು. ಬೇಸರ ಅನ್ನೋದಕ್ಕಿಂತ ನನಗೆ ನೋವಾಗಿದೆ ಎಂದು ಟಿವಿ9ಕನ್ನಡಕ್ಕೆ ತಿಳಿಸಿದ್ದರು.

ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರಾಗಿ ಶ್ರುತಿ ನೇಮಕ
ಶೃತಿ

ಬೆಂಗಳೂರು: ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರಾಗಿ ಶ್ರುತಿ ಅವರನ್ನು ನೇಮಿಸಿ ಆದೇಶಿಸಲಾಗಿದೆ. ಈವರೆಗೆ ಅವರು ಹೊಂದಿದ್ದ ಜವಾಬ್ದಾರಿಯಾಗಿದ್ದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಕಾಪು ಸಿದ್ದಲಿಂಗಸ್ವಾಮಿ ನೇಮಕಗೊಂಡ ಬೆನ್ನಲ್ಲೇ ಶ್ರುತಿ ಅವರಿಗೆ ಹೊಸ ಸ್ಥಾನಮಾನ ನೀಡಲಾಗಿದೆ.

ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಕೊಕ್​ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಅವರು, ‘ಅಧ್ಯಕ್ಷ ಸ್ಥಾನ ಕಳೆದುಕೊಂಡು ನೋವಾಗಿದೆ. ಈ ವಿಚಾರ ಮೊದಲು ಗೊತ್ತಿರಲಿಲ್ಲ, ನನಗೆ ಏನೂ ಹೇಳಿರಲಿಲ್ಲ. ಮಾಧ್ಯಮಗಳ ಮೂಲಕ ನನಗೆ ಗೊತ್ತಾಯಿತು. ನಂತರ ಕಾ.ಪು.ಸಿದ್ದಲಿಂಗಸ್ವಾಮಿ ಅವರೇ ಮಾಹಿತಿ ನೀಡಿದರು. ಬೇಸರ ಅನ್ನೋದಕ್ಕಿಂತ ನನಗೆ ನೋವಾಗಿದೆ ಎಂದು ಟಿವಿ9ಕನ್ನಡಕ್ಕೆ ತಿಳಿಸಿದ್ದರು.

ನಾನು ಅಧ್ಯಕ್ಷೆ ಆದ ಮೊದಲ ದಿನದಿಂದಲೂ ಉತ್ತಮ ಕಾರ್ಯಗಳನ್ನು ಹಮ್ಮಿಕೊಂಡಿದ್ದೇನೆ. ಇನ್ನೂ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದೆ. ಆದರೆ ರಾಜಕೀಯದಲ್ಲಿ ಇದೆಲ್ಲವೂ ಸಹಜ. ನಾನೂ ಮೊದಲೇ ಎಲ್ಲದಕ್ಕೂ ಸಿದ್ದಳಿದ್ದೆ. ಆದರೆ, ಇಷ್ಟು ಬೇಗ ಈ ರೀತಿ ಸಂದರ್ಭ ಬರುತ್ತೆ ಅಂದುಕೊಂಡಿರಲಿಲ್ಲ. ನಾಯಕರು ಯಾಕೆ ಹೀಗೆ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ. ಕಾರಣ ಹೇಳಿ ಮಾಡಿದರೆ ಚೆನ್ನಾಗಿ ಇರ್ತಿತ್ತು. ಈಗಲೂ ನಾನು ಮೊದಲಿನಂತೆ ಕಾರ್ಯಕರ್ತೆಯಾಗಿ ದುಡಿಯುತ್ತೇನೆ ಎಂದು ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ: 

ಬಿಎಸ್​ವೈ ಪರಮಾಪ್ತ ಕಾಪು ಸಿದ್ದಲಿಂಗಸ್ವಾಮಿ ಪ್ರವಾಸೋದ್ಯಮ ನಿಗಮಕ್ಕೆ: ಬಿಜೆಪಿಯಲ್ಲಿ ಮತ್ತೊಂದು ಸುತ್ತಿನ ಸಮರಕ್ಕೆ ಕಾರಣವಾಗುತ್ತಾ?

ರಾಜ್ಯದಲ್ಲಿ ಸಿಎಂ ಬದಲಾವಣೆಗಾಗಿ ಗಡ್ಡ, ತಲೆಗೂದಲು ಹರಕೆ ಬಿಟ್ಟಿದ್ದಾರಾ ಬಿಜೆಪಿ ಶಾಸಕ ಯತ್ನಾಳ್?

(Actress Shruti appointed chairman of the Alcohol Abstinence Board by Karnataka Govt)

Click on your DTH Provider to Add TV9 Kannada