ಬಾಗಲಕೋಟೆ: ಬಾರ್ ಅಂಡ್ ರೆಸ್ಟೋರೆಂಟ್ ತೆರವುಗೊಳಿಸಲು ಆಗ್ರಹ; ಬಾರ್ ಮುಂದೆ ಮಹಿಳೆಯರಿಂದ ಪ್ರತಿಭಟನೆ

ಈ ಹಿಂದೆ ಡಿಸಿ ಕಚೇರಿಗೂ ತೆರಳಿ ಪ್ರತಿಭಟನೆ ನಡೆಸಿ‌ ಮನವಿ ಸಲ್ಲಿಸಿದ್ದೇವು. ಬಾರ್ ಅಂಡ್ ರೆಸ್ಟೋರೆಂಟ್ ತೆರವುಗೊಳಿಸಲು ಡಿಸಿ ಅವರು ಸ್ವಲ್ಪ ಕಾಲಾವಕಾಶ ಕೇಳಿದ್ದರು. ಆದರೆ ಇವರೆಗೂ ತೆರವು ಕಾರ್ಯ ಆರಂಭವಾಗಿಲ್ಲ ಎಂದು ಪ್ರತಿಭಟನಾನಿರತ ಮಹಿಳೆಯರು ಹೇಳಿದ್ದಾರೆ.

ಬಾಗಲಕೋಟೆ: ಬಾರ್ ಅಂಡ್ ರೆಸ್ಟೋರೆಂಟ್ ತೆರವುಗೊಳಿಸಲು ಆಗ್ರಹ; ಬಾರ್ ಮುಂದೆ ಮಹಿಳೆಯರಿಂದ ಪ್ರತಿಭಟನೆ
ಬಾರ್ ಮುಂದೆ ಮಹಿಳೆಯರಿಂದ ಪ್ರತಿಭಟನೆ
Follow us
TV9 Web
| Updated By: preethi shettigar

Updated on: Aug 24, 2021 | 12:01 PM

ಬಾಗಲಕೋಟೆ: ಬಾರ್ ಅಂಡ್ ರೆಸ್ಟೋರೆಂಟ್ ತೆರವುಗೊಳಿಸಲು ಆಗ್ರಹಿಸಿ ಬಾರ್ ಮುಂದೆ ಮಹಿಳೆಯರು ಪ್ರತಿಭಟನೆ ನಡೆಸುತ್ತಿರುವ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಚನಾಳ ಗ್ರಾಮದಲ್ಲಿ ನಡೆದಿದೆ. ಮದ್ಯ ಸೇವಿಸಲು ಇಲ್ಲಿಗೆ ಬರುವವರನ್ನು ತರಾಟೆಗೆ ತೆಗೆದುಕೊಂಡ ಮಹಿಳೆಯರು, ಅವರಿಗೆ ಛೀಮಾರಿ ಹಾಕಿ ವಾಪಸ್ ಕಳಿಸುತ್ತಿದ್ದಾರೆ.

ಈ ಹಿಂದೆ ಡಿಸಿ ಕಚೇರಿಗೂ ತೆರಳಿ ಪ್ರತಿಭಟನೆ ನಡೆಸಿ‌ ಮನವಿ ಸಲ್ಲಿಸಿದ್ದೇವು. ಬಾರ್ ಅಂಡ್ ರೆಸ್ಟೋರೆಂಟ್ ತೆರವುಗೊಳಿಸಲು ಡಿಸಿ ಅವರು ಸ್ವಲ್ಪ ಕಾಲಾವಕಾಶ ಕೇಳಿದ್ದರು. ಆದರೆ ಇವರೆಗೂ ತೆರವು ಕಾರ್ಯ ಆರಂಭವಾಗಿಲ್ಲ. ಹೀಗಾಗಿ ನಿನ್ನೆಯಿಂದ ಬಾರ್ ಮುಂದೆ ಧರಣಿ ನಡೆಸುತ್ತಿದ್ದೇವೆ ಎಂದು ಪ್ರತಿಭಟನಾನಿರತ ಮಹಿಳೆಯರು ಹೇಳಿದ್ದಾರೆ.

ಗ್ರಾಮದಲ್ಲಿ ಯುವಕರು, ಬಾಲಕರು ಕೂಡ ಕುಡಿತದ ದಾಸರಾಗುತ್ತಿದ್ದಾರೆ. ನಮ್ಮ ಮನೆ ಜೀವನ ಬೀದಿಗೆ ಬರುತ್ತಿದೆ. ಸಣ್ಣ ಸಣ್ಣ ವಯಸ್ಸಿನವರು ಕುಡಿದು ಹಾಳಾಗುತ್ತಿದ್ದಾರೆ. ಹೀಗಾಗಿ ಕೂಡಲೆ ಬಾರ್ ಅನ್ನು ಗ್ರಾಮದಿಂದ ಸ್ಥಳಾಂತರಗೊಳಿಸಿ ಎಂದು ಆಗ್ರಹಿಸಿ ಚನಾಳ ಗ್ರಾಮದ ಕಿಂಗ್ಸ್ ಬಾರ್ ಅಂಡ್ ರೆಸ್ಟೋರೆಂಟ್ ಮುಂದೆ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ.

ಚಿಕ್ಕಮಗಳೂರು: ಬಾರ್ ಮುಚ್ಚುವಂತೆ ಮಹಿಳೆಯರ ಧರಣಿ; ಬಾರ್ ಮುಚ್ಚದಂತೆ ಮದ್ಯಪ್ರಿಯರ ಹೋರಾಟ! ಒಂದೆಡೆ ಮಹಿಳೆಯರಿಂದ ಬಾರ್ ಮುಚ್ಚುವಂತೆ ಧರಣಿ, ಮತ್ತೊಂದೆಡೆ ಬಾರ್ ಮುಚ್ಚದಂತೆ ಮದ್ಯಪ್ರಿಯರಿಂದ ಧರಣಿ ನಡೆದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗ್ರಾಮ ಅಂಚೆ ಚೋಮನಹಳ್ಳಿಯಲ್ಲಿ ನಡೆದಿದೆ. ಇಲ್ಲಿನ ಬಾರ್‌ ಮುಚ್ಚುವಂತೆ ಚಿಕ್ಕಮಗಳೂರು ಅಬಕಾರಿ ಕಚೇರಿ ಬಳಿ ಮಹಿಳೆಯರು ಧರಣಿ ನಡೆಸಿದ್ದಾರೆ. ಆದರೆ, ಇದಕ್ಕೆ ವಿರುದ್ಧವಾಗಿ ಮತ್ತೊಂದೆಡೆ ಬಾರ್ ಮುಚ್ಚದಂತೆ ಮದ್ಯಪ್ರಿಯರಿಂದ ಧರಣಿ ನಡೆದಿದೆ. ಅಬಕಾರಿ ಕಚೇರಿಯ ಬಳಿ ಬಾರ್‌ ಪರ, ವಿರುದ್ಧ ಪ್ರತಿಭಟನೆ ಜೋರಾಗಿದೆ.

ಗ್ರಾಮದಲ್ಲಿ ತಿಂಗಳ ಹಿಂದೆ ಚಂದನ್ ಬಾರ್‌ ಎಂಬ ಬಾರ್ ಆರಂಭವಾಗಿತ್ತು. ಇದೀಗ ಅದಕ್ಕೆ ಮಹಿಳೆಯರಿಂದ ವಿರೋಧ ವ್ಯಕ್ತವಾಗಿದೆ. ಮದ್ಯಪ್ರಿಯರು ಮಹಿಳೆಯರ ವಿರೋಧಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಾರ್ ಮುಚ್ಚದಂತೆ ತಾವೂ ಧರಣಿ ನಡೆಸಿದ್ದಾರೆ. ಚಿಕ್ಕಮಗಳೂರಿನ ಅಬಕಾರಿ ಕಚೇರಿ ಬಳಿ ಈ ಪ್ರತಿಭಟನೆ ನಡೆದಿದೆ. ಎಣ್ಣೆ ಬೇಕೆಂದು ಒಂದು ಗುಂಪು, ಬೇಡವೆಂದು ಮತ್ತೊಂದು ಗುಂಪು, ಬಾರ್ ಪರ- ವಿರುದ್ದ ರಸ್ತೆ ಮಧ್ಯೆ ಪ್ರತಿಭಟನೆ ನಡೆಸಿದೆ. ಬಾರ್ ಬೇಡವೆಂದು ಮಹಿಳೆಯರು ಬೀದಿಗಿಳಿದಿದ್ದಾರೆ. ಬಾರ್ ಬೇಕೇ ಬೇಕೆಂದು ಮದ್ಯಪ್ರಿಯರು ಬೀದಿಗಳಿದಿದ್ದಾರೆ.

ನನ್ ಗಂಡ ಬೆಳ್ಗೆಯಿಂದ ಸಂಜೆ ತನಕ ಕುಡೀತಾನೆ ಇರ್ತಾನೆ ಸರ್. ಕುಡ್ಕೋ ಬಂದು ಹೊಡೀತಾನೆ, ಬಡೀತಾನೆ. ನಮ್ ಕಷ್ಟ ಯಾರಿಗೆ ಹೇಳೋದ್ ಸರ್. ಬಾರ್ ಹತ್ರ ಇದ್ರೆ ನನ್ನ ಗಂಡನ ಕಾಟ ಮತ್ತಷ್ಟು ಜಾಸ್ತಿಯಾಗುತ್ತೆ. ಹಾಗಾಗೀ ಬಾರ್ ಬೇಡ ಅಂತಾ ಡಿಸಿ ಅವ್ರಿಗೆ ಮನವಿ ಮಾಡೋಕೆ ಬಂದೀವಿ ಸರ್ ಎಂದು ಮಹಿಳೆಯರು ಕಣ್ಣೀರು ಹಾಕಿದ್ದಾರೆ.

ಇತ್ತ, ನಾನ್ ಸಂಜೆ 6 ಗಂಟೆಗೆ ಕೆಲ್ಸ ಮುಗ್ಸಿ ಬರ್ತೀನಿ, ಆಮೇಲೆ ಬಾರ್ ಹುಡ್ಕೊಂಡ್ ಬಾಣಾವಾರಕ್ಕೆ ಹೋಗ್ಬೇಕಂದ್ರೆ 10 ಕೀಲೋ ಮೀಟರ್, ಮತ್ತಿಘಟ್ಟಕ್ಕೆ ಹೋಗೋಕೂ 10 ಕೀಲೋ ಮೀಟರ್ ಆಗುತ್ತೆ. ದೇವನೂರು ಹೋಗ್ಬೇಕಂದ್ರೆ 10 ಕೀಲೋ ಮೀಟರ್. ಕುಡಿಬೇಕು ಅಂದ್ರೆ ಎಲ್ಲಾ ಬೇಲಿ ಸಾಲಲೆಲ್ಲಾ ಹೋಗ್ಬೇಕು. ನಮ್ಮೂರಲ್ಲೇ ಆದ್ರೆ ಈ ಕಷ್ಟನೇ ಇರಲ್ಲ. ಅಲ್ದೇ ಕೆಲ ಕಡೆ ಅಂಗಡಿಯಲ್ಲಿ ಕದ್ದು ಮಾರ್ತಾರೆ, ಅಲ್ಲಿ ಒನ್ ಟು ಡಬಲ್ ದುಡ್ಡು ಕೊಟ್ಟು ಕದ್ದು ಕುಡಿಯಬೇಕು. ಅಷ್ಟು ದುಡ್ಡು ಕೊಟ್ಟು ಕದ್ದು ಕುಡಿಯೋ ಹಣೆಬರಹ ಯಾಕೆ ? ಅನ್ನೋದು ಮದ್ಯಪ್ರಿಯರ ಪ್ರಶ್ನೆ.

ಇದನ್ನೂ ಓದಿ: ಬಾರ್ ಮುಚ್ಚುವಂತೆ ಮಹಿಳೆಯರ ಧರಣಿ; ಬಾರ್ ಮುಚ್ಚದಂತೆ ಮದ್ಯಪ್ರಿಯರ ಹೋರಾಟ! ಚಿಕ್ಕಮಗಳೂರಿನಲ್ಲಿ ಹೀಗೊಂದು ಘಟನೆ

ಮದ್ಯದಂಗಡಿ ಮುಚ್ಚುವಂತೆ ಗ್ರಾಮಸ್ಥರಿಂದ ಧರಣಿ, ಫ್ಲೆಕ್ಸ್​ಗಳನೆಲ್ಲ ಹರಿದು ಆಕ್ರೋಶ