AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದ್ಯದಂಗಡಿ ಮುಚ್ಚುವಂತೆ ಗ್ರಾಮಸ್ಥರಿಂದ ಧರಣಿ, ಫ್ಲೆಕ್ಸ್​ಗಳನೆಲ್ಲ ಹರಿದು ಆಕ್ರೋಶ

ಮೈಸೂರು: ಮದ್ಯ ನಮ್ಮ ದೇಶಕ್ಕೆ ದೊಡ್ಡ ಮಟ್ಟದ ಆದಾಯ ತಂದುಕೊಡುತ್ತೆ. ಆದರೆ ನಶೆಯಲ್ಲಿದ್ದಾಗ ಮನುಷ್ಯ ಏನ್ ಮಾಡ್ತಾನೆ ಎಂಬುವುದು ಗೊತ್ತಾಗಲ್ಲ. ಇದರಿಂದ ಎಷ್ಟೂ ಕುಟುಂಬಗಳು ಬೀದಿಗೆ ಬಿದ್ದಿವೆ. ವೀಕೆಂಡ್ ಇರುವುದರಿಂದ ಮದ್ಯದಂಗಡಿಗಳು ಫುಲ್ ಆಗಿವೆ. ಕೊರೊನಾ ಮರೆತು ಮೋಜು ಮಸ್ತಿಯಲ್ಲಿ ಕುಡುಕರಿದ್ದಾರೆ. ಆದ್ರೆ ಇಲ್ಲಿ ಮದ್ಯದಂಗಡಿ ಮುಚ್ಚುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ರಮ್ಮನಹಳ್ಳಿಯಲ್ಲಿ ನಡೆದಿದೆ. ಅಂಗಡಿ ಮುಚ್ಚುವಂತೆ ಮದ್ಯದಂಗಡಿ ಮಾಲೀಕನ ಜತೆ ಗ್ರಾಮಸ್ಥರು ವಾಗ್ವಾದ ನಡೆಸಿದ್ದಾರೆ. ಮೈಸೂರು ತಾಲೂಕಿನ ರಮ್ಮನಹಳ್ಳಿ ಗ್ರಾಮದಲ್ಲಿರುವ ಮದ್ಯದಂಗಡಿ ಮುಚ್ಚಲೇ […]

ಮದ್ಯದಂಗಡಿ ಮುಚ್ಚುವಂತೆ ಗ್ರಾಮಸ್ಥರಿಂದ ಧರಣಿ, ಫ್ಲೆಕ್ಸ್​ಗಳನೆಲ್ಲ ಹರಿದು ಆಕ್ರೋಶ
Follow us
ಆಯೇಷಾ ಬಾನು
|

Updated on:Jun 13, 2020 | 4:03 PM

ಮೈಸೂರು: ಮದ್ಯ ನಮ್ಮ ದೇಶಕ್ಕೆ ದೊಡ್ಡ ಮಟ್ಟದ ಆದಾಯ ತಂದುಕೊಡುತ್ತೆ. ಆದರೆ ನಶೆಯಲ್ಲಿದ್ದಾಗ ಮನುಷ್ಯ ಏನ್ ಮಾಡ್ತಾನೆ ಎಂಬುವುದು ಗೊತ್ತಾಗಲ್ಲ. ಇದರಿಂದ ಎಷ್ಟೂ ಕುಟುಂಬಗಳು ಬೀದಿಗೆ ಬಿದ್ದಿವೆ. ವೀಕೆಂಡ್ ಇರುವುದರಿಂದ ಮದ್ಯದಂಗಡಿಗಳು ಫುಲ್ ಆಗಿವೆ.

ಕೊರೊನಾ ಮರೆತು ಮೋಜು ಮಸ್ತಿಯಲ್ಲಿ ಕುಡುಕರಿದ್ದಾರೆ. ಆದ್ರೆ ಇಲ್ಲಿ ಮದ್ಯದಂಗಡಿ ಮುಚ್ಚುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ರಮ್ಮನಹಳ್ಳಿಯಲ್ಲಿ ನಡೆದಿದೆ. ಅಂಗಡಿ ಮುಚ್ಚುವಂತೆ ಮದ್ಯದಂಗಡಿ ಮಾಲೀಕನ ಜತೆ ಗ್ರಾಮಸ್ಥರು ವಾಗ್ವಾದ ನಡೆಸಿದ್ದಾರೆ.

ಮೈಸೂರು ತಾಲೂಕಿನ ರಮ್ಮನಹಳ್ಳಿ ಗ್ರಾಮದಲ್ಲಿರುವ ಮದ್ಯದಂಗಡಿ ಮುಚ್ಚಲೇ ಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಕೊನೆಗೆ ಅಂಗಡಿ ಮುಚ್ಚಿಸಿದ್ದಾರೆ. ಈ ವೇಳೆ ಮದ್ಯದಂಗಡಿ ಮುಂದಿದ್ದ ಫ್ಲೆಕ್ಸ್​ಗಳನ್ನು ಹರಿದು ಹಾಕಿ ಆಕ್ರೋಶ ಹೊರಹಾಕಿದ್ರು. ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿ ಮದ್ಯದಂಗಡಿ ಮಾಲೀಕನಿಗೆ ತರಾಟೆಗೆ ತೆಗೆದುಕೊಂಡ್ರು. ಘಟನಾ ಸ್ಥಳಕ್ಕೆ ಸ್ಥಳೀಯ ಪೋಲಿಸರು ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿ ಮಾಡಿದ್ದಾರೆ.

Published On - 3:15 pm, Sat, 13 June 20