Politics: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ನಾಯಕ ಎಚ್​ಡಿ ಕುಮಾರಸ್ವಾಮಿ: ಕುತೂಹಲ ಕೆರಳಿಸಿದ ರಾಜಕೀಯ ನಡೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 24, 2021 | 8:06 PM

ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುರುಕಿನ ಚಟುವಟಿಕೆ ನಡೆಸುತ್ತಿದ್ದಾರೆ

Politics: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ನಾಯಕ ಎಚ್​ಡಿ ಕುಮಾರಸ್ವಾಮಿ: ಕುತೂಹಲ ಕೆರಳಿಸಿದ ರಾಜಕೀಯ ನಡೆ
ಹೆಚ್‌.ಡಿ.ಕುಮಾರಸ್ವಾಮಿ
Follow us on

ಮೈಸೂರು: ಸಿಂದಗಿ ಮತ್ತು ಹಾನಗಲ್​ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆಯ ನಡುವೆ ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುರುಕಿನ ಚಟುವಟಿಕೆ ನಡೆಸುತ್ತಿದ್ದಾರೆ. ಎಚ್​ಡಿಕೆ ಈ ನಡೆಯ ಹಿನ್ನೆಲೆ ಬಗ್ಗೆ ಕುತೂಹಲ ವ್ಯಕ್ತವಾಗಿದ್ದು, ಹಲವು ವಿಶ್ಲೇಷಣೆಗಳು ಚಾಲ್ತಿಗೆ ಬಂದಿವೆ.

ಕುಮಾರಸ್ವಾಮಿ ಅವರು ಭಾನುವಾರ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಮ್ಮನಹಳ್ಳಿ ಗ್ರಾಮದಲ್ಲಿ ರೋಡ್‌ಶೋ ನಡೆಸಿದರು. ಕ್ಷೇತ್ರಕ್ಕೆ ಒಂದು ತಿಂಗಳ ಅಂತರದಲ್ಲಿ ಕುಮಾರಸ್ವಾಮಿ ಅವರ 2ನೇ ಭೇಟಿ ಇದು. ಇಷ್ಟು ದಿನ ಜಿ.ಟಿ.ದೇವೇಗೌಡರ ಬಗ್ಗೆ ಮಾತಾಡುತ್ತಿದ್ದ ರೀತಿಯಲ್ಲಿ ಇಂದು ಕುಮಾರಸ್ವಾಮಿ ಮಾತನಾಡಲಿಲ್ಲ. ಶನಿವಾರವಷ್ಟೇ ಕುಮಾರಸ್ವಾಮಿ ಅವರ ಮಗ ಮತ್ತು ಜಿ.ಟಿ.ದೇವೇಗೌಡರ ಮರ ಒಟ್ಟಿಗೆ ಕಾಣಿಸಿಕೊಂಡಿದ್ದರು.

ಜಿಟಿಡಿ ಕಾಂಗ್ರೆಸ್ ಸೇರಬಹುದು ಎಂಬ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರ ಈ ನಡೆ ಕುತೂಹಲ ಕೆರಳಿಸಿದೆ. ಜಿಟಿಡಿ ಅವರನ್ನು ಜೆಡಿಎಸ್​ನಲ್ಲಿಯೇ ಉಳಿಸಿಕೊಳ್ಳಲು ಜೆಡಿಎಸ್ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂಬ ಮಾತುಗಳಿಗೆ ಕುಮಾರಸ್ವಾಮಿ ಅವರ ನಡೆ ಪುಷ್ಟಿ ನೀಡಿದೆ.

ತಮ್ಮ ಇಂದಿನ ಮೈಸೂರು ಭೇಟಿಯ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಕಾರ್ಯಕ್ರಮ ಪೂರ್ವ ನಿಗದಿಯಾಗಿದ್ದರಿಂದ ಭೇಟಿ ನೀಡಿದ್ದೇನೆ ಎಂದರು.

ಇದನ್ನೂ ಓದಿ: ಜೆಡಿಎಸ್ ಅಂದರೆ ಕಾಂಗ್ರೆಸ್​ಗೆ ಭಯ: ಎಚ್​ಡಿ ರೇವಣ್ಣ
ಇದನ್ನೂ ಓದಿ: ಆನೆ ಹೋಗುತ್ತಿದ್ದಾಗ ನಾಯಿಗಳು ಬೊಗಳುತ್ತವೆ; ಶಾಸಕ ಜಮೀರ್ ಹೇಳಿಕೆಗೆ ಕುಮಾರಸ್ವಾಮಿ ಪ್ರತಿಕ್ರಿಯೆ