ಮೈಸೂರಿನಲ್ಲಿ ಮಳೆ ಆರ್ಭಟ; ನೋಡ ನೋಡ್ತಿದ್ದಂತೆ ಮೋರಿಯಲ್ಲಿ ಕೊಚ್ಚಿಹೋದ ವ್ಯಕ್ತಿ!

ಚಿಕ್ಕಬಳ್ಳಾಪುರದ ಕಂದವಾರ ಕೆರೆ ಕೋಡಿ ನೀರು ತಡೆಹಿಡಿದಿದ್ದರಿಂದ ಕೆರೆ ಹಿನ್ನೀರು ತೋಟಗಳಿಗೆ ನುಗ್ಗಿದೆ. ರೈತರು ಬೆಳೆದಿದ್ದ ಸೇವಂತಿ, ಗುಲಾಬಿ, ಆಲೂಗಡ್ಡೆ, ಜೋಳ, ರಾಗಿ, ತರಕಾರಿ ಬೆಳೆಗಳು ನೀರುಪಾಲಾಗಿವೆ.

ಮೈಸೂರಿನಲ್ಲಿ ಮಳೆ ಆರ್ಭಟ; ನೋಡ ನೋಡ್ತಿದ್ದಂತೆ ಮೋರಿಯಲ್ಲಿ ಕೊಚ್ಚಿಹೋದ ವ್ಯಕ್ತಿ!
ನೀರು ಪಾಲಾದ ಚಂದ್ರೇಗೌಡ
Follow us
TV9 Web
| Updated By: sandhya thejappa

Updated on:Oct 25, 2021 | 9:25 AM

ಮೈಸೂರು: ರಾಜ್ಯದ ಹಲವು ಕಡೆ ಭಾರೀ ಮಳೆಯಾಗುತ್ತಿದ್ದು, ಅವಾಂತರವೇ ಸೃಷ್ಟಿಯಾಗಿದೆ. ಮಳೆ ಆರ್ಭಟದಿಂದ ವ್ಯಕ್ತಿಯೊಬ್ಬ ಮೋರಿಯಲ್ಲಿ ಕೊಚ್ಚಿಹೋದ ಘಟನೆ ಮೈಸೂರಿನ ಸಿದ್ದಾರ್ಥನಗರದಲ್ಲಿ ಸಂಭವಿಸಿದೆ. ಕುಟುಂಬ ಸದಸ್ಯರ ಕಣ್ಣೆದುರೇ ಎಂ.ಚಂದ್ರೇಗೌಡ(60) ಎಂಬುವವರು ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಚಂದ್ರೇಗೌಡ ಮನೆ ಬಳಿ ಮೋರಿ ವೀಕ್ಷಣೆ ಮಾಡುತ್ತಿದ್ದರು. ಕಾಲು ಜಾರಿ ಮೋರಿಯಲ್ಲಿ ಕೊಚ್ಚಿಹೋಗಿದ್ದಾರೆ. ಸದ್ಯ ವ್ಯಕ್ತಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದೆ. ಕಾರಂಜಿ ಕೆರೆಗೆ ಸಂಪರ್ಕ ಕಲ್ಪಿಸುವ ಕಾಲುವೆಯಲ್ಲಿ ಈ ದುರ್ಘಟನೆ ನಡೆದಿದೆ.

ಬೆಳೆ ಜಲಾವೃತ ಇನ್ನು ಚಿಕ್ಕಬಳ್ಳಾಪುರದ ಕಂದವಾರ ಕೆರೆ ಕೋಡಿ ನೀರು ತಡೆಹಿಡಿದಿದ್ದರಿಂದ ಕೆರೆ ಹಿನ್ನೀರು ತೋಟಗಳಿಗೆ ನುಗ್ಗಿದೆ. ರೈತರು ಬೆಳೆದಿದ್ದ ಸೇವಂತಿ, ಗುಲಾಬಿ, ಆಲೂಗಡ್ಡೆ, ಜೋಳ, ರಾಗಿ, ತರಕಾರಿ ಬೆಳೆಗಳು ನೀರುಪಾಲಾಗಿವೆ. ಮೈಲಪ್ಪನಹಳ್ಳಿ ಗ್ರಾಮಕ್ಕೂ ಕೆರೆ ಹಿನ್ನೀರು ನುಗ್ಗುವ ಭೀತಿ ಎದುರಾಗಿದೆ. ಕೆರೆ ಕೋಡಿಗೆ ಮರಳು ಚೀಲಗಳನ್ನು ತುಂಬಿ ಕೋಡಿ ನೀರಿಗೆ ತಡೆ ಹಿಡಿಯಲಾಗಿದೆ. ಪರಿಣಾಮ ಸುತ್ತಾಮುತ್ತಾ ಜಲಾವೃತವಾಗಿದ್ದು, ಚಿಕ್ಕಬಳ್ಳಾಪುರ ನಗರದ ವಿವಿಧ ಬಡಾವಣೆಗಳಿಗೂ ನೀರು ನುಗ್ಗುವ ಭೀತಿ ಇದೆ.

ಧಾರಾಕಾರ ಮಳೆಗೆ ಶ್ರೀನಿವಾಸಸಾಗರ ಹಾಗೂ ರಂಗಧಾಮ ಜಲಾಶಯಗಳು ಬಿರುಕು ಬಿಟ್ಟಿರುವ ವದಂತಿ ಇದೆ. ಹೀಗಾಗಿ ಎರಡು ಜಲಾಶಯಗಳಿಗೆ ಚಿಕ್ಕಬಳ್ಳಾಪುರ ಡಿಸಿ ಆರ್.ಲತಾ ಭೇಟಿ ನೀಡಿದ್ದಾರೆ. ಡಿಸಿ ಲತಾಗೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸಾಥ್ ಕೊಟ್ಟಿದ್ದಾರೆ. ಯಾವುದೇ ಅಪಾಯವಿಲ್ಲ. ವದಂತಿಗೆ ಕಿವಿಕೊಡಬೇಡಿ ಅಂತ ರೈತರಿಗೆ ಡಿಸಿ ಲತಾ ಮನವಿ ಮಾಡಿದ್ದಾರೆ.

ಮಂಡ್ಯದಲ್ಲೂ ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದ ಹಲವೆಡೆ ಬೆಳೆ ಹಾನಿಯಾಗಿದೆ. ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಹಲವೆಡೆ ಜಮೀನು ಜಲಾವೃತಗೊಂಡಿವೆ.

ಮನೆ ಕುಸಿದು ವೃದ್ಧ ದಂಪತಿ ಪರದಾಟ ನಿರಂತರ ಮಳೆಗೆ ಮನೆ ಕುಸಿದಿದ್ದು, ವೃದ್ಧ ದಂಪತಿ ಪರದಾಡುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ನಾರಾಯಣಪುರದಲ್ಲಿ ಸಾಕಮ್ಮ, ಗವಿರಂಗಶೆಟ್ಟಿ ಬೀದಿಯಲ್ಲಿ ಪರದಾಟ ಪಡುತ್ತಿದ್ದಾರೆ.

ಇದನ್ನೂ ಓದಿ

Viral Video: ಚಲಿಸುತ್ತಿರುವ ರೈಲು ಹತ್ತಲು ಹೋಗಿ ಜಾರಿ ಬಿದ್ದ ಮಹಿಳೆಯನ್ನು ಪ್ರಾಣಾಪಾಯದಿಂದ ರಕ್ಷಿಸಿದ ಕಾನ್​ಸ್ಟೇಬಲ್

Virat Kohli: ಪಾಕಿಸ್ತಾನ ಪತ್ರಕರ್ತನ ಮೈಚಳಿ ಬಿಡಿಸಿದ ವಿರಾಟ್ ಕೊಹ್ಲಿ: ಖಡಕ್ ಪ್ರಶ್ನೆಗೆ ನಾಯಕ ಉತ್ತರ ಹೇಗಿತ್ತು ಗೊತ್ತಾ?

Published On - 8:47 am, Mon, 25 October 21

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?