Viral Video: ಚಲಿಸುತ್ತಿರುವ ರೈಲು ಹತ್ತಲು ಹೋಗಿ ಜಾರಿ ಬಿದ್ದ ಮಹಿಳೆಯನ್ನು ಪ್ರಾಣಾಪಾಯದಿಂದ ರಕ್ಷಿಸಿದ ಕಾನ್​ಸ್ಟೇಬಲ್

ಚಲಿಸುತ್ತಿರುವ ರೈಲು ಹತ್ತಲು ಹೋಗಿ ಮಹಿಳೆ ಜಾರಿ ಬಿದ್ದಿದ್ದಾರೆ. ಇದನ್ನು ಗಮನಿಸಿದ ಕಾನ್ಸ್ಟೇಬಲ್​ ಮಹಿಳೆಯನ್ನು ಪ್ರಾಣಪಾಯದಿಂದ ರಕ್ಷಿಸಿದ್ದಾರೆ. ಮುಂಬೈ ರಲ್ವೆ ನಿಲ್ದಾಣದಲ್ಲಿ ನಡೆದ ಘಟನೆಯ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Viral Video: ಚಲಿಸುತ್ತಿರುವ ರೈಲು ಹತ್ತಲು ಹೋಗಿ ಜಾರಿ ಬಿದ್ದ ಮಹಿಳೆಯನ್ನು ಪ್ರಾಣಾಪಾಯದಿಂದ ರಕ್ಷಿಸಿದ ಕಾನ್​ಸ್ಟೇಬಲ್
Follow us
TV9 Web
| Updated By: shruti hegde

Updated on: Oct 25, 2021 | 8:42 AM

ಭಾರತೀಯ ರೈಲ್ವೆ ಅಧಿಕೃತ ಟ್ವಿಟರ್ ಖಾತೆ ಆಗಾಗ ಪ್ರಯಾಣಿಕರನ್ನು ಎಚ್ಚರಿಸುವ ಸಂದೇಶವನ್ನು ಸಾರುತ್ತಲೇ ಇರುತ್ತದೆ. ಚಲಿಸುತ್ತಿರುವ ರೈಲನ್ನು ಹತ್ತಲು ಮತ್ತು ಇಳಿಯಲು ಪ್ರಯತ್ನಿಸಬೇಡಿ ಎಂಬ ಸಂದೇಶವನ್ನು ರೈಲ್ವೆ ಇಲಾಖೆ ಆಗಾಗ ಹೇಳುತ್ತಲೇ ಇರುತ್ತದೆ. ಆದರೂ ಸಹ ಕೆಲವು ಅಪಾಯಕಾರಿ ಘಟನೆಗಳು ಬೆಳಕಿ ಬರುತ್ತಿದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಗಮನಿಸುವಂತೆ ಚಲಿಸುತ್ತಿರುವ ರೈಲು ಹತ್ತು ಮಹಿಳೆ ಮುಂದಾಗಿದ್ದು ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ತಡ ಮಾಡದೇ ಓಡಿ ಬಂದ ಕಾನ್ಸ್ಟೇಬಲ್ ಮಹಿಳೆಯನ್ನು ಅಪಾಯದಿಂದ ರಕ್ಷಿಸಿದ್ದಾರೆ. ಈ ಘಟನೆ ಮುಂಬೈನ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಿಡಿಯೋ ಶೀರ್ಷಿಕೆಯಲ್ಲಿ ಬರೆದಂತೆ. ಮುಂಬೈನ ರೈಲ್ವೆ ಸ್ಟೇಷನ್​ನಲ್ಲಿ ಘಟನೆ ನಡೆದಿದೆ. 50 ವರ್ಷದ ಮಹಿಳೆ ರೈಲು ಹತ್ತಲು ಹೋಗಿ ಜಾರಿ ಬಿದ್ದಿದ್ದಾರೆ. ಕಾನ್ಸ್ಟೇಬಲ್ ಆಗಿದ್ದ ಸಪ್ನಾ ಗೋಲ್ಕರ್ ಅವರು ಮಹಿಳೆಯನ್ನು ರಕ್ಷಿಸಿದ್ದಾರೆ ಎಂದು ಟ್ಟಿಟರ್​ನಲ್ಲಿ ಪೋಸ್ಟ್ ಮಾಡಲಾಗಿದೆ.

ಅಕ್ಟೋಬರ್ 22ನೇ ತಾರೀಕಿನಂದು ವಿಡಿಯೋ ಪೋಸ್ಟ್ ಮಾಡಲಾಗಿದೆ. ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ 35,000ಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಕೆಲವರು, ಗ್ರೇಟ್ ಜಾಬ್ ಎಂದು ಕರ್ತವ್ಯ ಪಾಲಿಸಿದ ಕಾನ್ಸ್ಟೇಬಲ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಆರ್​ಪಿಎಫ್​ ಕಾನ್ಸ್ಟೇಬಲ್ ಅವರಿಂದ ಒಳ್ಳೆಯ ಕೆಲಸ ಎಂದು ಹಲವರು ಹೇಳಿದ್ದಾರೆ. ಇನ್ನು ಕೆಲವರು ಚಲಿಸುತ್ತಿರುವ ರೈಲು ಹತ್ತಲು ಹೋಗಿ ಅಪಾಯಕ್ಕೆ ಸಿಲುಕಬೇಡಿ ಎಂಬ ಸಂದೇಶವನ್ನು ಸಾರಿದ್ದಾರೆ.

ಇದನ್ನೂ ಓದಿ:

Viral Video: ಕ್ಯಾಮೆರಾ ಕಂಡು ಮನುಷ್ಯರಂತೆಯೇ ಪೋಸ್ ಕೊಟ್ಟ ಶ್ವಾನಗಳು; ವಿಡಿಯೋ ನೋಡಿ

Viral Video: ಮನಿಕೆ ಮಗೆ ಹಿತೆ ಹಾಡಿಗೆ ಮಹಿಳೆಯ ಬಿಹು ನೃತ್ಯ ಪ್ರದರ್ಶನ; ವಿಡಿಯೋ ನೋಡಿ