Video: ನೀರಿನಲ್ಲಿ ಮುಳುಗುತ್ತಿದ್ದ ಬಾಲಕನ ಪ್ರಾಣ ಕಾಪಾಡಿದ ಪೊಲೀಸ್; ವಿಡಿಯೊ ನೋಡಿ
ತಮ್ಮ ಪ್ರಾಣವನ್ನೂ ಪಣಕ್ಕಿಟ್ಟು ಪೊಲೀಸ್ ಸಿಬ್ಬಂದಿ ಬಾಲಕನ ಜೀವ ಉಳಿಸಿದ್ದಾರೆ. ನದಿಯಲ್ಲಿ ಮುಳುಗುತ್ತಿದ್ದ ಬಾಲಕನ ಜೀವ ರಕ್ಷಿಸಿದ ಪೊಲೀಸ್ ಅಶೋಕ್ ಯಾದವ್ ಅವರಿಗೆ ಶ್ಲಾಘನೆ ವ್ಯಕ್ತವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಕೇವಲ ತಮಾಷೆಯ ವಿಡಿಯೊಗಳು ಹೆಚ್ಚು ವೈರಲ್ ಆಗುತ್ತವೆ. ಆದರೆ ವೈರಲ್ ಆಗುವ ಹೃದಯಸ್ಪರ್ಶಿ ವಿಡಿಯೋಗಳು ಹೆಚ್ಚು ಮನ ಗೆಲ್ಲುತ್ತವೆ. ಕರ್ತವ್ಯಕ್ಕೆ ಬದ್ಧರಾಗಿ ಕೆಲಸ ಮಾಡುವ ಪೊಲೀಸರು ಅದೆಷ್ಟೋ ಜನರ ಪ್ರಾಣ ಉಳಿಸಿರುವ ದೃಶ್ಯಗಳನ್ನು ನೀವು ನೋಡಿರಬಹುದು ಅಥವಾ ಕೇಳಿರಬಹುದು. ಇದೀಗ ವೈರಲ್ ಆಗಿರುವ ವಿಡಿಯೊದಲ್ಲಿ ಗಮನಿಸುವಂತೆ ನೀರಿನಲ್ಲಿ ಮುಳುಗುತ್ತಿದ್ದ ಬಾಲಕನನ್ನು ಪೊಲೀಸರು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ. ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪೊಲೀಸ್ ಅಶೋಕ್ ಯಾದವ್ ಅವರಿಗೆ ಶ್ಲಾಘನೆ ವ್ಯಕ್ತವಾಗಿದೆ.
ಘಟನೆ ಉತ್ತರ ಪ್ರದೇಶದ ಸಿತಾಪುರದಲ್ಲಿ ನಡೆದಿದೆ ಎಂಬ ಮಾಹಿತಿ ವರದಿಗಳಿಂದ ಲಭ್ಯವಾಗಿದೆ. ವಿಡಿಯೋದಲ್ಲಿ, ಪೊಲೀಸ್ ಸಿಬ್ಬಂದಿ ನದಿಯಿಂದ ಬಾಲಕನನ್ನು ಕರೆತಂದ ದೃಶ್ಯವನ್ನು ನೋಡಬಹುದು. ಆಳವಾದ ನದಿಯಲ್ಲಿ ಬಾಲಕ ಮುಳುಗುತ್ತಿದ್ದ. ಇದನ್ನು ಗಮನಿಸಿದ ಪೊಲೀಸ್ ಅಶೋಕ್ ನದಿಗೆ ಹಾರಿ ಬಾಲಕನ ಪ್ರಾಣ ರಕ್ಷಿಸಿದ್ದಾರೆ. ಇವರಿಗೆ ಸ್ಥಳೀಯರು ಸಹ ಸಹಾಯ ಮಾಡಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದು.
का० अशोक, @sitapurpolice
गहरा पानी और तेज बहाव, लेकिन अशोक इस डूबते बच्चे को बाहर खींच लाये। अशोक भाई, आप पर गर्व है।??❤️ ऐसे बहादुरों की खुलकर प्रशंसा होनी चाहिए। pic.twitter.com/in2NtuHE7Z
— SACHIN KAUSHIK (@upcopsachin) October 23, 2021
ವಿಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ. ನದಿಯಲ್ಲಿ ಮುಳುಗುತ್ತಿದ್ದ ಮಗುವನ್ನು ಅಶೋಕ್ ರಕ್ಷಿಸಿದ್ದಾರೆ. ನಿಮ್ಮ ಬಗ್ಗೆ ಹೆಮ್ಮೆ ಇದೆ ಅಶೋಕ್ ಭಾಯ್ ಎಂದು ಶೀರ್ಷಿಕೆ ನೀಡುವ ಮೂಲಕ ವಿಡಿಯೋ ಹಂಚಿಕೊಳ್ಳಲಾಗಿದೆ. ಪೊಲೀಸ್ ಅಶೋಕ್ ಅವರಿಗೆ ನೆಟ್ಟಿಗರು ಧನ್ಯವಾದ ತಿಳಿಸಿದ್ದಾರೆ. ತಮ್ಮ ಪ್ರಾಣವನ್ನೂ ಪಣಕ್ಕಿಟ್ಟು ಬಾಲಕನ ಜೀವ ಉಳಿಸಲು ನದಿಗೆ ಹಾರಿದ ಅಶೋಕ್ ಅವರಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಅತ್ಯುತ್ತಮ ಕೆಲಸ ಎಂದು ಹೊಗಳುವ ಮೂಲಕ ಪೊಲೀಸ್ ಅಶೋಕ್ ಯಾದವ್ ಅವರಿಗೆ ಶ್ಲಾಘನೆ ವ್ಯಕ್ತವಾಗಿದೆ.
ಇದನ್ನೂ ಓದಿ:
Viral Video: ಮೇಲೇರಲು ಸಹಾಯ ಮಾಡಿದ ಈ ಇರುವೆಗೆ ಕೊನೆಗೆ ಏನು ಉಳಿಯಿತು?; ಬದುಕಿನ ಪಾಠ ಹೇಳುವ ಈ ವಿಡಿಯೋ ನೋಡಿ