
ಮೈಸೂರು: ತಂದೆ ಆರ್.ಧ್ರುವನಾರಾಯಣ (R. Dhruvanarayan) ಅಕಾಲಿಕ ಸಾವಿನಿಂದ ಕಂಗಾಲಾಗಿದ್ದ ದರ್ಶನ್ ಮತ್ತು ಧೀರನ್ ಅವರಿಗೆ ಈಗ ತಾಯಿ ನಿಧನ ಬರಸಿಡಿಲಿನಂತೆ ಬಡಿದಿದೆ. ತಂದೆ ಆರ್.ಧ್ರುವನಾರಾಯಣ ಸಾವಿನ ಬಳಿಕ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ನಂಜನಗೂಡು ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಅವರು ಈಗ ತಾಯಿ ವೀಣಾರನ್ನು ಕಳೆದುಕೊಂಡಿದ್ದಾರೆ. ಹೌದು..ಕೆಪಿಸಿಸಿ ಕಾರ್ಯಧ್ಯಕ್ಷರಾಗಿದ್ದ ಆರ್.ಧ್ರುವನಾರಾಯಣ ನಿಧನರಾಗಿ ತಿಂಗಳೊಳಗೆ ಪತ್ನಿ ವೀಣಾ ಧ್ರುವನಾರಾಯಣ್ (Veena Dhruvanarayan) ಸಾವನ್ನಪ್ಪಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ವೀಣಾ ಧ್ರುವನಾರಾಯಣ್ ಅವರು ಇಂದು (ಏಪ್ರಿಲ್ 07) ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ದರ್ಶನ್ ಅವರು ತಂದೆ ಬೆನ್ನಲ್ಲೇ ಇದೀಗ ತಾಯಿಯನ್ನೂ ಕಳೆದುಕೊಂಡಿದ್ದಾರೆ.
ಇನ್ನು ದಿವಂಗತ ಆರ್.ಧ್ರುವನಾರಾಯಣ ಅವರು ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಆರ್.ಧ್ರುವನಾರಾಯಣ ಅವರು ಮಾರ್ಚ್. 11 ರಂದು ತೀರ್ವ ರಕ್ತಸ್ರಾವದಿಂದ ನಿಧನರಾದರು. ಈ ಹಿನ್ನೆಲೆ ಇವರ ಟಿಕೆಟ್ ಅನ್ನು ಪುತ್ರ ದರ್ಶನ ಧ್ರುವನಾರಾಯಣ ಅವರಿಗೆ ನೀಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:16 am, Fri, 7 April 23