ಮೇಕೆದಾಟು ಯೋಜನೆ ಅನುಷ್ಠಾನ: ಕಾವೇರಿ ಸಮನ್ವಯ ಸಭೆ ಕರೆದ ಕುರುಬೂರು​ ಶಾಂತಕುಮಾರ್

ರಾಜ್ಯ ಕಬ್ಬು ಬೆಳಗಾರರ ಸಂಘದ ಅಧ್ಯಕ್ಷ ಕುರುಬೂರು​ ಶಾಂತಕುಮಾರ್ ಮಂಗಳವಾರ (ಅ.21) ಕಾವೇರಿ ಸಮನ್ವಯ ಸಭೆ ಕರೆದಿದ್ದಾರೆ. ಮೈಸೂರಿನ ಕರ್ಜನ್​ ಪಾರ್ಕ್​ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ "ಕಾವೇರಿ ಸಮನ್ವಯ ಸಭೆ" ನಡೆಯಲಿದೆ. ಈ ಸಭೆಯಲ್ಲಿ ಕಾವೇರಿ ನದಿ ಭಾಗದ ರಾಜ್ಯಗಳ ಮುಖಂಡರು ಭಾಗಿಯಾಗಲಿದ್ದಾರೆ.

ಮೇಕೆದಾಟು ಯೋಜನೆ ಅನುಷ್ಠಾನ: ಕಾವೇರಿ ಸಮನ್ವಯ ಸಭೆ ಕರೆದ ಕುರುಬೂರು​ ಶಾಂತಕುಮಾರ್
ಮೇಕೆದಾಟು ಯೋಜನೆ ಅನುಷ್ಠಾನ: ಸಮನ್ವಯ ಸಭೆ

Updated on: Oct 21, 2024 | 10:28 AM

ಮೈಸೂರು, ಅಕ್ಟೋಬರ್​ 21: ಕಾವೇರಿ ನದಿಯ (Cauvery River) ಅಡ್ಡಲಾಗಿ ಮೇಕೆದಾಟುವಿನಲ್ಲಿ ಅಣೆಕಟ್ಟು (Mekedatu dam) ಕಟ್ಟುವ ಕುರಿತು ಮತ್ತು ಕಾವೇರಿ ನದಿ ಕಲ್ಮಶ ತಡೆಯುವ ಸಲುವಾಗಿ ರಾಜ್ಯ ಕಬ್ಬು ಬೆಳಗಾರರ ಸಂಘದ ಅಧ್ಯಕ್ಷ ಕುರುಬೂರು​ ಶಾಂತಕುಮಾರ್ (Kuruburu Shanta Kumar) ಅವರು ಮಂಗಳವಾರ (ಅ.21) ಸಮನ್ವಯ ಸಭೆ ಕರೆದಿದ್ದಾರೆ. ಮೈಸೂರಿನ ಕರ್ಜನ್​ ಪಾರ್ಕ್​ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ “ಕಾವೇರಿ ಸಮನ್ವಯ ಸಭೆ” ನಡೆಯಲಿದೆ. ಸಭೆಯಲ್ಲಿ ಕಾವೇರಿ ಅಷ್ಚುಕಟ್ಟು ಭಾಗದ ಕರ್ನಾಟಕ, ತಮಿಳುನಾಡು, ಪಾಂಡಿಚೆರಿ, ಕೇರಳ ರೈತ ಮುಖಂಡರು, ನೀರಾವರಿ, ಕೃಷಿ, ಪರಿಸರ ಮತ್ತು ಪರಿಣಿತರು ಭಾಗಿಯಾಗಲಿದ್ದಾರೆ.

ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಾಣ ಮಾಡುವುದು ಕರ್ನಾಟಕ ಸರ್ಕಾರದ ಕನಸಿನ ಯೋಜನೆಯಾಗಿದೆ. ಆದರೆ, ಈ ಯೋಜನೆ ಜಾರಿಗೆಗೆ ತಮಿಳುನಾಡು ಅಡ್ಡಿಯಾಗುತ್ತಿದೆ. ಇದನ್ನು ನಿವಾರಿಸಲು ಮತ್ತು ಕಾವೇರಿ ನದಿ ಕಲ್ಮಶವಾಗುವುದುನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕಾವೇರಿ ಸಮನ್ವಯ ಸಭೆ ಕರೆಯಲಾಗಿದ್ದು, ಎಲ್ಲರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

ಇದನ್ನೂ ಓದಿ: Mekedatu Project: ಮೇಕೆದಾಟು ಯೋಜನೆ ಪರಿಶೀಲಿಸುವಂತೆ ಕೇಂದ್ರ ಪರಿಸರ ಸಚಿವಾಲಯಕ್ಕೆ ಮತ್ತೆ ಅರ್ಜಿ ಸಲ್ಲಿಸಿದ ಕರ್ನಾಟಕ

ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಾಣವೇ ಪರಿಹಾರ ಎಂಬ ವಾದ ರಾಜ್ಯ ಸರ್ಕಾರದ್ದಾಗಿದೆ. ಮೇಕೆದಾಟು ಯೋಜನೆ ಅನುಷ್ಠಾನ ವಿಚಾರ ಬಂದಾಗಲೆಲ್ಲ ತಮಿಳುನಾಡು ಕ್ಯಾತೆ ತೆಗೆಯುತ್ತಿದೆ. ಆದರೆ, ಸಮುದ್ರದ ಪಾಲಾಗುತ್ತಿರುವ ನೀರನ್ನು ತಡೆಯಲು ಅಣೆಕಟ್ಟು ನಿರ್ಮಾಣ ಒಂದೇ ಪರಿಹಾರವಾಗಿದೆ. ಅಣೆಕಟ್ಟು ನಿರ್ಮಾಣದಿಂದ ತಮಿಳುನಾಡು ಸರ್ಕಾರಕ್ಕೂ ಅನುಕೂಲವಾಗಲಿದೆ ಎಂದು ರಾಜ್ಯ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.

ಕೆಆರ್​ಎಸ್​ ಜಲಾಯಶದಲ್ಲಿ ನೀರು ಖಾಲಿಯಾದರೇ ಹಳೇ ಮೈಸೂರು ಭಾಗ ಮತ್ತು ಬೆಂಗಳೂರು ಬೇಸಿಗೆಗಾಲದಲ್ಲಿ ನೀರಿಗಾಗಿ ಸಾಕಷ್ಟು ಪರದಾಡುತ್ತಾರೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಮೇಕೆದಾಟುವಿನಲ್ಲಿ ಅಣೆಕಟ್ಟು ಕಟ್ಟುವುದು ಅನಿವಾರ್ಯವಾಗಿದೆ. ಮೇಕೆದಾಟು ಯೋಜನೆ ಅನುಷ್ಠಾನ ಸಂಬಂಧ ರಾಜ್ಯ ಕಾಂಗ್ರೆಸ್​ ಪಾದಯಾತ್ರೆ ನಡೆಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ