Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಡಾ ಮೇಲಿನ ಇಡಿ ದಾಳಿ ಅಂತ್ಯ: ಸತತ 29 ಗಂಟೆ ಶೋಧ, ಮಹತ್ವದ ದಾಖಲೆ ಸಂಗ್ರಹ

ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ಇ.ಡಿ ದಾಳಿ ಅಂತ್ಯಗೊಂಡಿದೆ. ಮುಡಾ ಕಚೇರಿ ಮೇಲೆ ದಾಳಿ ನಡೆಸಿದ್ದ ಇ.ಡಿ ಅಧಿಕಾರಿಗಳು ಸತತ 17 ಗಂಟೆಗಳ ವಿಚಾರಣೆ ಅಂತ್ಯಗೊಳಿಸಿದ್ದಾರೆ. ಅ.18 ರಂದು ಬೆಳಗ್ಗೆ 11 ರಿಂದ ರಾತ್ರಿ 11 ಗಂಟೆಯ ವರೆಗೆ ಇಡಿ ಸತತ ವಿಚಾರಣೆ ನಡೆಸಿದೆ. ಮುಡಾದಲ್ಲಿ ನಡೆದಿರುವ ಭ್ರಷ್ಟಾಚಾರದ ಇಂಚಿಂಚೂ ಮಾಹಿತಿ ಸಂಗ್ರಹಿಸಲಾಗಿದೆ. ಇದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಮುಡಾ ಮೇಲಿನ ಇಡಿ ದಾಳಿ ಅಂತ್ಯ: ಸತತ 29 ಗಂಟೆ ಶೋಧ, ಮಹತ್ವದ ದಾಖಲೆ ಸಂಗ್ರಹ
ಇಡಿ, ಮುಡಾ
Follow us
ರಾಮ್​, ಮೈಸೂರು
| Updated By: ರಮೇಶ್ ಬಿ. ಜವಳಗೇರಾ

Updated on: Oct 20, 2024 | 10:50 AM

ಮೈಸೂರು, (ಅಕ್ಟೋಬರ್ 20): ಮುಡಾ ಹಗರಣ (MUDA Scam Case) ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ಇ.ಡಿ ದಾಳಿ ಅಂತ್ಯಗೊಂಡಿದೆ. ಮೊದಲ ದಿನ 12 ತಾಸು, ಎರಡನೇ ದಿನ 17 ತಾಸು ವಿಚಾರಣೆ ನಡೆಸಿದೆ. ಮೊದಲ ದಿನ ಬರೋಬ್ಬರಿ 12 ಗಂಟೆ ಮುಡಾದಲ್ಲಿ ಬೀಡು ಬಿಟ್ಟು ತಪಾಸಣೆ ವಿಚಾರಣೆ ಪರಿಶೀಲನೆ ನಡೆಸಿದ್ದ ಇಡಿ ಅಧಿಕಾರಿಗಳು ಎರಡನೇ ದಿನವೂ ಬರೋಬ್ಬರಿ 17 ಗಂಟೆಗಳ ಕಾಲ ಇಂಚಿಂಚೂ ಮಾಹಿತಿ ಕಲೆಹಾಕಿದ್ದಾರೆ. ಈ ಮೂಲಕ ಬರೋಬ್ಬರಿ 29 ಗಂಟೆಗಳ ಶೋಧ ನಡೆಸಿದ ಇಡಿ ಅಧಿಕಾರಿಗಳು ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದರೆ, ಇನ್ನು ಕೆಲ ದಾಖಲೆಗಳನ್ನು ಹಾರ್ಡ್ ಡಿಸ್ಕ್‌ನಲ್ಲಿ ಸಂಗ್ರಹಿಸಿಕೊಂಡು ಹೋಗಿದ್ದಾರೆ.

ಮುಡಾದಿಂದ ಸಾವಿರಾರು ಪುಟಗಳ ದಾಖಲೆಗಳನ್ನು ಇಡಿ ವಶಕ್ಕೆ ಪಡೆದಿದೆ. ಅಲ್ಲದೇ ಎಲ್ಲಾ ಹಂತದ ಅಧಿಕಾರಿಗಳ ಡ್ರಿಲ್ ನಡೆಸಿದೆ. ನಿನ್ನೆ (ಅ.19) ಬೆಳಗ್ಗೆ 10 ಗಂಟೆಯಿಂದ ಮಧ್ಯರಾತ್ರಿ 2:40 ಗಂಟೆ ವರೆಗೆ ವಿಚಾರಣೆ ನಡೆಸಲಾಗಿದೆ. ದಾಳಿ ವೇಳೆ ಮಹತ್ವದ ದಾಖಲೆಗಳನ್ನ ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಸಿಎಂ‌ ಸಿದ್ದರಾಮಯ್ಯ (Siddaramaiah) ಪತ್ನಿ ವಾಪಸ್ ನೀಡಿದ 14 ನಿವೇಶನ ಹಾಗೂ ಮುಡಾದಲ್ಲಿ 50:50 ಅನುಪಾತದಡಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಸಮಗ್ರ ದಾಖಲೆ ಸಂಗ್ರಹಿಸಿ ಎರಡು ಕೆಂಪು ಬಣ್ಣದ ಬಾಕ್ಸ್‌ಗಳಲ್ಲಿ ದಾಖಲೆಗಳನ್ನ ತೆಗೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಮುಡಾ ಹಗರಣ: ಸದ್ಯದಲ್ಲೇ ಸಿಎಂ ಸಿದ್ದರಾಮಯ್ಯಗೂ ಇಡಿ ತನಿಖೆ ಬಿಸಿ, ಪತ್ನಿ ಪಾರ್ವತಿ, ಪುತ್ರ ಯತೀಂದ್ರ ವಿಚಾರಣೆ ಸಾಧ್ಯತೆ

FSL ಅಧಿಕಾರಿಯನ್ನು ಕರೆತಂದಿದ್ದ ಇಡಿ

ಮೊದಲ ದಿನ ಬರೋಬ್ಬರಿ 12 ಗಂಟೆ ಮುಡಾದಲ್ಲಿ ಬೀಡು ಬಿಟ್ಟು ತಪಾಸಣೆ ವಿಚಾರಣೆ ಪರಿಶೀಲನೆ ನಡೆಸಿದ್ದ ಇಡಿ ಅಧಿಕಾರಿಗಳು ಎರಡನೇ ದಿನವೂ 17 ಗಂಟೆ ಮುಡಾದಲ್ಲೇ ಕಳೆದಿದ್ದಾರೆ. ನಿನ್ನೆ ಮುಡಾದ ವ್ಯವಹಾರದ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದಾರೆ. ಕೇವಲ ಹಾರ್ಡ್ ಕಾಪಿ ಮಾತ್ರವಲ್ಲ ಅದರ ಸಾಫ್ಟ್ ಕಾಪಿ ಸಹ ಪಡೆದುಕೊಂಡರು. ಇದಕ್ಕಾಗಿ ಎರಡು ಹಾರ್ಡ್ ಡಿಸ್ಕ್‌ಗಳನ್ನು ಇಡಿ ಅಧಿಕಾರಿಗಳು ತಂದಿದ್ದರು. ಇದರ ಜೊತೆಗೆ ಇವತ್ತು ಇಡಿ ಅಧಿಕಾರಿಗಳು ತಮ್ಮ ಜೊತೆ ಒಬ್ಬ ಎಫ್​ ಎಸ್​ ಎಲ್ ಅಧಿಕಾರಿಯನ್ನು ಸಹ ಕರೆತಂದಿದ್ದರು.

ಇದಕ್ಕೆ ಕಾರಣ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಯವರು ಮುಡಗೆ ನೀಡಿದ ಮನವಿ ಪತ್ರದಲ್ಲಿ ವೈಟ್ನರ್ ಹಾಕಿರುವ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಈ ವಿಚಾರ ಸಾಕಷ್ಟು ಸಂಚಲನ ಮೂಡಿಸಿತ್ತು ಅಕ್ರಮವನ್ನ ಮುಚ್ಚಿ ಹಾಕಲು ದಾಖಲೆಯನ್ನು ತಿದ್ದಿ ವೈಟ್ನರ್ ಹಾಕಲಾಗಿದೆ ಆರೋಪ ಕೇಳಿ ಬಂದಿತ್ತು. ಇದಾದ ನಂತರ ವೈಟ್ನ‌ರ್‌ಗೆ ಟಾರ್ಚ್ ಬಿಟ್ಟು ವಿಡಿಯೋ ಸಹ ಮಾಡಲಾಗಿತ್ತು ಆ ವಿಡಿಯೋವನ್ನು ಸಿಎಂ ಸಿದ್ದರಾಮಯ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸ್ಪಷ್ಟನೆ ನೀಡಿದರು ಮೂಲ ದಾಖಲೆ ಪರಿಶೀಲನೆ ಸಹ ಇಡೀ ಅಧಿಕಾರಿಗಳು ಮಾಡಿದರು ಎನ್ನಲಾಗಿದೆ.

ಹಲವು ನಾಯಕರಿಗೆ ನಡುಕ

ಇನ್ನು ಎರಡನೇ ದಿನವು ಇಡಿ ಅಧಿಕಾರಿಗಳು ತಿಂಡಿ ಊಟ ಕಾಫಿ ಟೀ ಎಲ್ಲವನ್ನು ಬುಡಕಚೇರಿಗೆ ತರಿಸಿಕೊಂಡಿದ್ದರು. ಒಂದು ನಿಮಿಷವು ವ್ಯರ್ಥ ಮಾಡದೆ ದಾಖಲೆಗಳನ್ನು ಸಂಗ್ರಹಿಸುವುದು ಮತ್ತು ಅಧಿಕಾರಿಗಳಿಂದ ಮಾಹಿತಿಯನ್ನು ಪಡೆಯುವ ಕೆಲಸ ಮಾಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಎರಡನೇ ದಿನ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಯಾರ ಯಾರ ಅಧಿಕಾರ ಅವಧಿಯಲ್ಲಿ ಎಷ್ಟು ನಿವೇಶನಗಳನ್ನ ಹಂಚಲಾಗಿದೆ. ಫಿಫ್ಟಿ ಫಿಫ್ಟಿ ಅನುಪಾತದಲ್ಲಿ ಯಾರಿಗೆ ಬದಲಿ ನಿವೇಶನಗಳನ್ನು ನೀಡಲಾಗಿದೆ ಎಷ್ಟು ನಿವೇಶನಗಳನ್ನು ನೀಡಲಾಗಿದೆ ಇದರ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿದ್ದಾರೆ.

ಸದ್ಯ ಎರಡನೇ ದಿನದ ನಂತರ ಇಡಿ ಕಾರ್ಯಾಚರಣೆ ಮುಕ್ತಾಯವಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಆದರೆ ಇದು ಆರಂಭ ಮಾತ್ರ. ಸದ್ಯ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಿರುವ ಇಡಿ ಅಧಿಕಾರಿಗಳು ಆ ದಾಖಲೆಗಳ ಆಧಾರದ ಮೇಲೆ ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ಅವರಿಂದ ಮಾಹಿತಿ ಕಲೆ ಹಾಕುವ ಕೆಲಸ ಮಾಡುತ್ತಾರೆ ಎನ್ನಲಾಗಿದೆ.

ಒಟ್ಟಾರೆ ಮೂಡದಲ್ಲಿ ಇಡೀ ಅಧಿಕಾರಿಗಳ ಈ ಕಾರ್ಯಚರಣೆ ಸಿಎಂ ಸಿದ್ದರಾಮಯ್ಯ ಅವರ ಕುಟುಂಬ ಮಾತ್ರವಲ್ಲದೆ ಫಿಫ್ಟಿ ಫಿಫ್ಟಿ ಅನುಪಾತದಲ್ಲಿ ಯಾರೆಲ್ಲಾ ಅಕ್ರಮ ನಿಯಮಬಾಹಿರವಾಗಿ ನಿವೇಶನಗಳನ್ನು ಪಡೆದಿದ್ದಾರೋ ಅವರೆಲ್ಲರಿಗೂ ಸಂಕಷ್ಟ  ಖಂಡಿತ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?
ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಬನಶಂಕರಿ ದೇವಿ ಸನ್ನಿಧಿಯಲ್ಲಿ ಪವಿತ್ರಾ ಗೌಡ, ಇಲ್ಲಿದೆ ವಿಡಿಯೋ
ಬನಶಂಕರಿ ದೇವಿ ಸನ್ನಿಧಿಯಲ್ಲಿ ಪವಿತ್ರಾ ಗೌಡ, ಇಲ್ಲಿದೆ ವಿಡಿಯೋ
ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!
ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ
ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ
ಮತ್ತೊಮ್ಮೆ ಸಮೀಕ್ಷೆ ಮಾಡಿಸುವಂತೆ ಸಿಎಂ, ಡಿಸಿಎಂಗೆ ಆಗ್ರಹಿಸುತ್ತೇವೆ: ಶಾಸಕ
ಮತ್ತೊಮ್ಮೆ ಸಮೀಕ್ಷೆ ಮಾಡಿಸುವಂತೆ ಸಿಎಂ, ಡಿಸಿಎಂಗೆ ಆಗ್ರಹಿಸುತ್ತೇವೆ: ಶಾಸಕ