ಮೈಸೂರು: ಒಂದು ಕಡೆ ಹಿಜಾಬ್, ಕೇಸರಿ, ವ್ಯಾಪಾರದ ಧರ್ಮ ಸಂಘರ್ಷ ನಡೆಯುತ್ತಿದ್ದರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಿಂದೂ ಮುಸ್ಲಿಂ ನಡುವೆ ಹೋಟೆಲ್ ವಿಚಾರವಾಗಿ ಕೇಸರಿ ಯುದ್ಧ ಆರಂಭವಾಗಿತ್ತು. ಇದು ಸಾಕಷ್ಟು ಸಂಚಲನಕ್ಕೂ ಕಾರಣವಾಗಿತ್ತು. ಆದ್ರೆ ಕೊನೆಗೆ ಅದು ವೈಯಕ್ತಿಕ ವಿಚಾರಕ್ಕೆ ನಡೆದ ಗಲಾಟೆ ಎಂದು ಸಾಬೀತಾಗಿದೆ.
ಮೈಸೂರಿನ ಹೈವೇ ಸರ್ಕಲ್ ನಲ್ಲಿರೋ ಕೇಸರಿ ರೆಸ್ಟೋರೆಂಟ್ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ಒಡೆತನದ್ದು. ಮೈಸೂರಿನ ಸೈಯದ್ ರಿಯಾಜ್ ಗೆ ನಲಪಾಡ್ ಲೀಸ್ ಕೊಟ್ಟಿದ್ರಂತೆ. ಬಳಿಕ ರಿಯಾಜ್ ಮೈಸೂರಿನವರೆ ಆದ ಕೃತಿಕಾಗೌಡಗೆ ಮೂರು ವರ್ಷಗಳ ಅವಧಿಗೆ ಸಬ್ ಲೀಸ್ ನೀಡಿದ್ದಾರೆ. ಮೂರು ವರ್ಷದ ಅವಧಿಗೆ ಲೀಸ್ ಪಡೆದಿದ್ದ ಕೃತಿಕಾಗೌಡರನ್ನ ಏಕಾಏಕಿ ಕರಾರಿನ ಅವಧಿಗೂ ಮುನ್ನ ಹೊರ ಕಳುಹಿಸಲು ಪ್ಲಾನ್ ಮಾಡ್ತಿದ್ದಾರೆ ಅನ್ನೋದು ಕೃತಿಕಾಗೌಡ ಆರೋಪ. ಇಷ್ಟಕ್ಕೆ ಸುಮ್ಮನಾಗದ ಕೃತಿಕಾ ತಾನು ಹಿಂದೂ ಹೆಣ್ಣುಮಗಳು, ಜೊತೆಗೆ ಹೋಟೆಲ್ ಗೆ ಕೇಸರಿ ಅಂತಾ ಹೆಸರಿಟ್ಟಿದ್ದು ಅದನ್ನು ತೆಗಿ ಅಂತಿದ್ದಾರೆ. ಹೆಣ್ಣು ಅನ್ನೋದನ್ನೂ ನೋಡದೆ ನನ್ನ ಮೇಲೆ ದೌರ್ಜನ್ಯ ಮಾಡ್ತಿದ್ದಾರೆ ಅಂತಾ ಮಾಧ್ಯಮಗಳ ಮುಂದೆ ಅಲವತ್ತುಕೊಂಡಿದ್ರು.
ಇನ್ನೂ ಈ ಬಗ್ಗೆ ಕೃತಿಕಾ ಗೌಡ ಯಾವುದೇ ದೂರು ನೀಡಿರಲಿಲ್ಲ. ಇದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಇದರ ಬೆನ್ನು ಹತ್ತಿದಾಗ ಕೃತಿಕಾಳ ಅಸಲಿಯತ್ತು ಬಯಲಾಯ್ತು. ಈ ಬಗ್ಗೆ ರಿಯಾಜ್ ಸಹಾ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಆಕೆಗೆ ಹಲ್ಲೆ ಮಾಡಿಯೇ ಇಲ್ಲ. ಕ್ಯಾಬಿನ್ ಚಿಕ್ಕದು ಇತ್ತು ಮಾತನಾಡುವ ವೇಳೆ ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಹೊರ ಬರುವಾಗ ಮಿಸ್ ಆಗಿ ಅವರು ಬಿದ್ದಿದ್ದಾರೆ. ಇನ್ನು ಕೃತಿಕಾ ಹೋಟೆಲ್ ನಲ್ಲಿ ಕೆಲಸ ಮಾಡುವ ಹುಡುಗರಿಗೆ ಸಂಬಳವನ್ನೇ ನೀಡಿಲ್ಲ. ಹುಡುಗರು ನನ್ನ ಬಳಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದರು. ನಾನು ಯಾಕಮ್ಮ ಹೀಗೆ ಮಾಡ್ತೀದ್ದೀಯಾ ಅಂದೆ ಅಷ್ಟೇ. ಅದನ್ನೂ ನಾನು ಕೇಳಬಾರದು ಅಂತಾರೇ. ಕೇಸರಿ ಅನ್ನೋ ಹೆಸ್ರು ನಾನು ಇಟ್ಟಿರೋದು 2018 ರಲ್ಲಿಯೇ ರಿಜಿಸ್ಟರ್ ಮಾಡಿಸಿದ್ದೇನೆ. ಆಕೆ ಲೀಸ್ ಪಡೆದಿರೋದೆ 2020ರಲ್ಲಿ. ಇನ್ನು ಹೋಟೆಲ್ ನಿರ್ವಾಹಣೆ ಸಹಾ ಸರಿಯಾಗಿ ಮಾಡುತ್ತಿಲ್ಲ ಅನ್ನೋದು ರಿಯಾಜ್ ಆರೋಪ.
ಇನ್ನೂ ಘಟನೆ ಸಂಬಂಧ ಮಾಹಿತಿ ಪಡೆದುಕೊಂಡಿರುವ ನಲಪಾಡ್ ಈ ಬಗ್ಗೆ ಪರಿಶೀಲಿಸುವುದಾಗಿ ಹೇಳಿದ್ದರಂತೆ. ಇದೆಲ್ಲಾ ಏನೇ ಇರಲಿ ತಮ್ಮ ವೈಯಕ್ತಿಕ ಜಗಳಕ್ಕಾಗಿ ಹಿಂದೂ ಮುಸ್ಲಿಂ ಕೇಸರಿಯನ್ನು ಎಳೆತಂದಿದ್ದು ಮಾತ್ರ ದುರಂತವೇ ಸರಿ
ವರದಿ: ರಾಮ್, ಟಿವಿ9 ಮೈಸೂರು
ಇದನ್ನೂ ಓದಿ: 2015ರಲ್ಲಿ ಐಎಎಸ್ ಟಾಪರ್ ಆಗಿದ್ದ ಟೀನಾ ಡಾಬಿಗೆ ಮದುವೆ ನಿಶ್ಚಿತಾರ್ಥ; ಇದು ಎರಡನೇ ಮದುವೆ, ವರ ಐಎಎಸ್ ಅಧಿಕಾರಿ
Published On - 9:47 pm, Tue, 29 March 22