AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2015ರಲ್ಲಿ ಐಎಎಸ್ ಟಾಪರ್ ಆಗಿದ್ದ ಟೀನಾ ಡಾಬಿಗೆ ಮದುವೆ ನಿಶ್ಚಿತಾರ್ಥ; ಇದು ಎರಡನೇ ಮದುವೆ, ವರ ಐಎಎಸ್ ಅಧಿಕಾರಿ

Tina Dabi 2015ರಲ್ಲಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ಒಂದನೇ ರ್ಯಾಂಕ್ ಪಡೆದ ಡಾಬಿ ಎರಡನೇ ರ್ಯಾಂಕ್ ಪಡೆದ ಖಾನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದು ಸಿನಿಮಾ ಕತೆಯಂತಿತ್ತು

2015ರಲ್ಲಿ ಐಎಎಸ್ ಟಾಪರ್ ಆಗಿದ್ದ ಟೀನಾ ಡಾಬಿಗೆ ಮದುವೆ ನಿಶ್ಚಿತಾರ್ಥ; ಇದು ಎರಡನೇ ಮದುವೆ, ವರ ಐಎಎಸ್ ಅಧಿಕಾರಿ
ಟೀನಾ ಡಾಬಿ- ಪ್ರದೀಪ್ ಗವಾಂಡೆImage Credit source: Instagram
TV9 Web
| Edited By: |

Updated on:Mar 29, 2022 | 9:34 PM

Share

ದೆಹಲಿ: ಭಾರತೀಯ ಆಡಳಿತ ಸೇವೆಯ (IAS) ಅಧಿಕಾರಿ ಟೀನಾ ಡಾಬಿಯ (Tina Dabi) ಮೊದಲ ಮದುವೆ ಮತ್ತು ವಿಚ್ಛೇದನ ಭಾರಿ ಸುದ್ದಿಯಾಗಿತ್ತು. ಯುಪಿಎಸ್​​ಸಿ (UPSC) ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಪಡೆದಿದ್ದ ಡಾಬಿ ಎರಡನೇ ರ್ಯಾಂಕ್ ಪಡೆದಿದ್ದ ಅಥರ್ ಅಮೀರ್ ಖಾನ್​​ರನ್ನು (Athar Aamir Khan)ಮದುವೆಯಾಗಿ ಸುದ್ದಿಯಾಗಿದ್ದರು. ಈ ವಿವಾಹ ಸಂಬಂಧ ಅಲ್ಪಾವಧಿಯಲ್ಲೇ ಮುರಿದು ಬಿತ್ತು. ಟೀನಾ ಮತ್ತು ಖಾನ್ ವಿವಾಹ ವಿಚ್ಛೇದನವೂ ಬಹು ಚರ್ಚಿತ ವಿಷಯವಾಗಿತ್ತು. ಅಂದಹಾಗೆ ಡಾಬಿ ಈಗ ಮತ್ತೆ ಮದುವೆಯಾಗುತ್ತಿದ್ದಾರೆ. ತಮ್ಮ ನಿಶ್ಚಿತಾರ್ಥದ ಸುದ್ದಿಯನ್ನು ಡಾಬಿ ಇನ್​​ಸ್ಟಾಗ್ರಾಂನಲ್ಲಿ ಫೋಟೊ ಶೇರ್ ಮಾಡಿ ತಿಳಿಸಿದ್ದಾರೆ. ನೀ ಕೊಟ್ಟ ನಗುವನ್ನು ನಾ ತೊಟ್ಟಿರುವೆ #fiance ಎಂಬ ಶೀರ್ಷಿಕೆ ಜತೆ ನಿಶ್ಚಿತಾರ್ಥದ ಫೋಟೊವನ್ನು ಡಾಬಿ ಶೇರ್ ಮಾಡಿದ್ದಾರೆ. ಡಾಬಿ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾ ಜನಪ್ರಿಯರಾಗಿದ್ದು ಅವರಿಗೆ 1.4 ಮಿಲಿಯನ್ ಫಾಲೋವರ್​ಗಳಿದ್ದಾರೆ. ಈ ಚಿತ್ರದಲ್ಲಿ ತನ್ನ ಭಾವೀ ಪತಿ ಪ್ರದೀಪ್ ಗವಾಂಡೆ ಅವರನ್ನು ಡಾಬಿ ಟ್ಯಾಗ್ ಮಾಡಿದ್ದಾರೆ.ಗವಾಂಡೆ ಅವರು 2013ನೇ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದಾರೆ.  ಗವಾಂಡೆ ಕೂಡಾ ಇನ್ ಸ್ಟಾಗ್ರಾಂನಲ್ಲಿ ಫೋಟೋಶೇರ್ ಮಾಡಿದ್ದು ನವ ಜೋಡಿಗಳು ಕೈ ಕೈ ಹಿಡಿದಿರುವ ಫೋಟೊ ಇದಾಗಿದೆ. ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಗವಾಂಡೆ ಡಾಬಿ ಅವರ ಎರಡು ಫೋಟೊ ಶೇರ್ ಮಾಡಿದ್ದಾರೆ.

2018 ರಲ್ಲಿ ವಿವಾಹವಾದ ಅಥರ್ ಅಮೀರ್ ಖಾನ್ ಅವರಿಗೆ ಕಳೆದ ವರ್ಷದ ಕೊನೆಯಲ್ಲಿ ಡಾಬಿ ವಿಚ್ಛೇದನ ನೀಡಿದ್ದರು. ಇವರ ವಿವಾಹದಲ್ಲಿ ಉನ್ನತ ರಾಜಕಾರಣಿಗಳು ಭಾಗವಹಿಸಿದ್ದರು.  2015ರಲ್ಲಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ಒಂದನೇ ರ್ಯಾಂಕ್ ಪಡೆದ ಡಾಬಿ ಎರಡನೇ ರ್ಯಾಂಕ್ ಪಡೆದ ಖಾನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದು ಸಿನಿಮಾ ಕತೆಯಂತಿತ್ತು. ದೆಹಲಿ ಅವರ ಲೇಡಿ ಶ್ರೀ ರಾಮ್ ಕಾಲೇಜಿನ ಪದವೀಧರರಾದ ಡಾಬಿ ಅವರು ಪ್ರತಿಷ್ಠಿತ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಮೊದಲ ದಲಿತರಾಗಿದ್ದರು. ಮೊದಲನೇ ಪ್ರಯತ್ನದಲ್ಲಿಯೇ ಅವರು ರ್ಯಾಂಕ್ ಪಡೆದಿದ್ದರು.

ದೆಹಲಿಯಲ್ಲಿ ತಮ್ಮ ಮದುವೆಯ ಆರತಕ್ಷತೆಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ಸಚಿವರು ಲೋಕಸಭೆ ಸ್ಪೀಕರ್ ಆಗಿದ್ದ ಸುಮಿತ್ರಾ ಮಹಾಜನ್ ಭಾಗಿಯಾಗಿದ್ದರು.

ಎರಡು ಧರ್ಮಕ್ಕೆ ಸೇರಿದ ದಂಪತಿಯ ಈ ವಿವಾಹಕ್ಕೆ ಹಲವರು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಮದುವೆಯನ್ನು ಲವ್ ಜಿಹಾದ್ ಎಂದು ಕರೆಯಲಾಗಿತ್ತು. ಆದರೆ ಇದಕ್ಕೆ ತಲೆಕೆಡಿಸಿಕೊಳ್ಳದ ಡಾಬಿ ಧಾರ್ಮಿಕ ವೈರುಧ್ಯಕ್ಕಿಂತ ಮದುವೆ ಮೇಲು ಎಂದಿದ್ದರು.

ಇದನ್ನೂ ಓದಿ: ನಾನು 4 ತಿಂಗಳ ಪ್ರಗ್ನೆಂಟ್ ಎಂದು ಅಳಲು ತೋಡಿಕೊಂಡ ಶಂಕರಣ್ಣನ ಪತ್ನಿ ಮೇಘನಾ, ಎಲ್ಲಾ ನಮ್ಮತ್ತೆಯದ್ದೇ ಹಿಕ್ಮತ್ತು ಅಂದರು

Published On - 9:32 pm, Tue, 29 March 22

ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ