ನಾರಾಯಣಗೌಡ ಹೆಸರಲ್ಲೇ ಸಂಸ್ಕೃತ ಇದೆ, ಹಾಗಂತ ಅವರು ತಮ್ಮ ಹೆಸರು ಬದಲಾಯಿಸಿಕೊಳ್ಳುತ್ತಾರಾ? ಸಂಸದ ಪ್ರತಾಪಸಿಂಹ ವಾಗ್ದಾಳಿ

| Updated By: ಆಯೇಷಾ ಬಾನು

Updated on: Jan 17, 2022 | 1:53 PM

ನಾರಾಯಣಗೌಡ ಹೆಸರಲ್ಲೇ ಸಂಸ್ಕೃತ ಇದೆ. ಹಾಗಂತ ಅವರು ತಮ್ಮ ಹೆಸರು ಬದಲಾಯಿಸಿಕೊಳ್ಳುತ್ತಾರಾ? ಎಂದು ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ. ಈ ಹಿಂದೆ ಕನ್ನಡದ ವಿಚಾರದಲ್ಲಿ ಹಲವು ಬಾರಿ ಅವರು ಧ್ವನಿ ಎತ್ತಿಲ್ಲ.

ನಾರಾಯಣಗೌಡ ಹೆಸರಲ್ಲೇ ಸಂಸ್ಕೃತ ಇದೆ, ಹಾಗಂತ ಅವರು ತಮ್ಮ ಹೆಸರು ಬದಲಾಯಿಸಿಕೊಳ್ಳುತ್ತಾರಾ? ಸಂಸದ ಪ್ರತಾಪಸಿಂಹ ವಾಗ್ದಾಳಿ
ಪ್ರತಾಪ್ ಸಿಂಹ
Follow us on

ಮೈಸೂರು: ಸಂಸ್ಕೃತ ವಿವಿಗೆ ಕರವೇ ನಾರಾಯಣಗೌಡ ವಿರೋಧ ವಿಚಾರಕ್ಕೆ ಸಂಬಂಧಿಸಿ ನಾರಾಯಣಗೌಡಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಟಾಂಗ್ ಕೊಟ್ಟಿದ್ದಾರೆ. ನಾರಾಯಣಗೌಡ ಹೆಸರಲ್ಲೇ ಸಂಸ್ಕೃತ ಇದೆ. ಹಾಗಂತ ಅವರು ತಮ್ಮ ಹೆಸರು ಬದಲಾಯಿಸಿಕೊಳ್ಳುತ್ತಾರಾ? ಎಂದು ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಪ್ರತಾಪ್ ಸಿಂಹ, ಈ ಹಿಂದೆ ಕನ್ನಡದ ವಿಚಾರದಲ್ಲಿ ಹಲವು ಬಾರಿ ಅವರು ಧ್ವನಿ ಎತ್ತಿಲ್ಲ. ಕರ್ನಾಟಕದ ಜಿಲ್ಲೆಯ ಹೆಸರು ಕನ್ನಡೀಕರಣಗೊಳಿಸುವಾಗ ಟಿಪ್ಪು ಜಯಂತಿ ಆಚರಣೆ, ಟಿಪ್ಪು ವಿವಿ ಸ್ಥಾಪನೆ ವಿಚಾರದಲ್ಲಿ ಮೌನವಾಗಿದ್ದರು. ನಾರಾಯಣಗೌಡ ಚುನಾವಣೆಗೆ ನಿಂತಾಗ ರೇಡ್ ಆಗಿತ್ತು. ಅವರ ಬಳಿ ಹಣ ಸಿಕ್ಕಿದ್ದು ಎಲ್ಲರಿಗೂ ಗೊತ್ತಿದೆ. ಬರೀ ಮೋದಿ ಅವರನ್ನು ವಿರೋಧಿಸುವುದನ್ನು ಬಿಡಿ. ಸಂಸ್ಕೃತ ಕನ್ನಡ ಭಾಷೆಯ ಜೊತೆ ಬೆರೆತು ಹೋಗಿದೆ. ಹುಟ್ಟು ಸಾವು ನಾಮಕರಣ ಮದುವೆ ತಿಥಿ ಎಲ್ಲದರಲ್ಲೂ ಸಂಸ್ಕೃತ ಇದೆ. ಕನ್ನಡ, ಸಂಸ್ಕೃತವನ್ನು ಬೇರೆ ಮಾಡುವ ಕೆಲಸ ಮಾಡಬೇಡಿ ಎಂದು ಮೈಸೂರಿನಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ಇನ್ನು ಇದೇ ವೇಳೆ ಮೇಕೆದಾಟು ಯೋಜನೆ ಬಗ್ಗೆ ಮಾತನಾಡಿದ್ದಾರೆ. ಮೇಕೆದಾಟು ವೇಳೆ ಮುಖ್ಯಮಂತ್ರಿಗಳು ಮನವಿ ಮಾಡಿದ್ದರು. ದೇಶದಾದ್ಯಂತ ರಾಲಿ ಮಾಡಲು ಸೂಕ್ತ ಕಾಲ ಅಲ್ಲ ಅಂತಾ ಹೇಳಿದ್ದರು. ಮೇಕೆದಾಟು ಯೋಜನೆ ಅಂತಾ ದೊಡ್ಡ ಜಾತ್ರೆ ಮಾಡಿದ್ದು ಕಾಂಗ್ರೆಸ್‌ನವರೆ. ಮುಂದೆಯಾದರೂ ಸ್ವಲ್ಪ ಜವಾಬ್ದಾರಿಯುತವಾಗಿ ವರ್ತಿಸಬೇಕು. ಯಾತ್ರೆ ಮೂಲಕ ಜಾತ್ರೆ ಮಾಡಿ ಜನರಿಗೆ ಮನವರಿಕೆ ಮಾಡಿಸುವುದಲ್ಲ. ಯೋಗ್ಯ ವಿಚಾರ, ಜನರ ಪರವಾಗಿದೆ ಅಂದರೆ ಮಾಧ್ಯಮಗಳ ಮೂಲಕವೂ ಮನವರಿಕೆ ಮಾಡಿಕೊಡಬಹುದು ಎಂದು ಕಾಂಗ್ರೆಸ್ ಪಾದಯಾತ್ರೆಗೆ ಸಂಸದ ಪ್ರತಾಪ್ ಸಿಂಹ ಟಾಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ: ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆ ಖಂಡಿಸಿ ಇಂದು ಇಡೀ ದಿನ ಕರ್ನಾಟಕ ರಕ್ಷಣಾ ವೇದಿಕೆಯಿಂದ ಟ್ವಿಟರ್ ಅಭಿಯಾನ!