ಮೈಸೂರು ವಿಮಾನ ನಿಲ್ದಾಣ ರನ್​ವೇ ವಿಸ್ತರಣೆಗೆ ಸಂಸದ ಪ್ರತಾಪ್ ಸಿಂಹ ನೇತೃತ್ವದ ಸಭೆಯಲ್ಲಿ ಸಮ್ಮತಿ, ಜನವರಿಯಲ್ಲಿ ಶಿಲಾನ್ಯಾಸ

ರನ್‌ವೇಯನ್ನು 3,500 ಮೀಟರ್‌ಗೆ ವಿಸ್ತರಿಸಬೇಕಾದರೆ ನಮಗೆ ಹೆಚ್ಚಿನ ಭೂಮಿ ಬೇಕಾಗುತ್ತದೆ ಮತ್ತು ಪ್ರಸ್ತಾವನೆಯು ಹಣಕಾಸು ಇಲಾಖೆಯಲ್ಲಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಭದ್ರತಾ ಕಾಳಜಿ ಮತ್ತು ಅದರ ನಿರ್ಮಾಣಕ್ಕೆ ಸಂಬಂಧಿಸಿದ ಸಂಭಾವ್ಯ ಸವಾಲುಗಳು ಮತ್ತು ವೆಚ್ಚದ ಹೆಚ್ಚಳದ ಕಾರಣ ರನ್‌ವೇ ಕೆಳಗೆ ಅಂಡರ್‌ಪಾಸ್ ನಿರ್ಮಿಸುವ ಪ್ರಸ್ತಾಪವನ್ನು ಕೈಬಿಡಲಾಗಿದೆ ಎಂದು ಅವರು ತಿಳಿಸಿದರು.

ಮೈಸೂರು ವಿಮಾನ ನಿಲ್ದಾಣ ರನ್​ವೇ ವಿಸ್ತರಣೆಗೆ ಸಂಸದ ಪ್ರತಾಪ್ ಸಿಂಹ ನೇತೃತ್ವದ ಸಭೆಯಲ್ಲಿ ಸಮ್ಮತಿ, ಜನವರಿಯಲ್ಲಿ ಶಿಲಾನ್ಯಾಸ
ಪ್ರಾತಿನಿಧಿಕ ಚಿತ್ರ
Follow us
Ganapathi Sharma
|

Updated on:Aug 25, 2023 | 9:39 PM

ಮೈಸೂರು, ಆಗಸ್ಟ್ 25: ಮೈಸೂರು ವಿಮಾನ ನಿಲ್ದಾಣದ (Mysore airport) ರನ್‌ವೇ ವಿಸ್ತರಣೆ ವಿಚಾರವಾಗಿ ಶುಕ್ರವಾರ ವಿಮಾನ ನಿಲ್ದಾಣದ ವಿಐಪಿ ಲಾಂಜ್‌ನಲ್ಲಿ ಸಂಸದ ಪ್ರತಾಪ್ ಸಿಂಹ (Pratap Simha) ಅವರ ಅಧ್ಯಕ್ಷತೆಯಲ್ಲಿ ವಿಮಾನ ನಿಲ್ದಾಣ ಸಲಹಾ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ವಿಮಾನ ನಿಲ್ದಾಣ ನಿರ್ದೇಶಕ ಜೆ.ಆರ್.ಅನೂಪ್, ವಿಮಾನ ನಿಲ್ದಾಣ ಸಲಹಾ ಸಮಿತಿ ಸದಸ್ಯರಾದ ಸಿ.ನಾರಾಯಣಗೌಡ, ಸಿಎ ಜಯಕುಮಾರ್, ಭಾಗ್ಯಶ್ರೀ ಭಟ್ ಮತ್ತಿತರರು ಉಪಸ್ಥಿತರಿದ್ದರು.

ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ 2024 ರ ಜನವರಿಯಲ್ಲಿ ಶಿಲಾನ್ಯಾಸ ಸಮಾರಂಭ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಭವಿಷ್ಯದ ರನ್​ ವೇ ವಿಸ್ತರಣೆಗೆ ಅನುಕೂಲವಾಗುವಂತೆ ಹೆಚ್ಚುವರಿ 91 ಎಕರೆಯನ್ನು ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಇದರಿಂದ ಈಗಿರುವ 1,740 ಮೀಟರ್ (30 ಮೀಟರ್ ಅಗಲ) ದಿಂದ 2,750 ಮೀಟರ್ (45 ಮೀಟರ್ ಅಗಲ) ರನ್‌ವೇ ವಿಸ್ತರಣೆಗೆ ಅನುಕೂಲವಾಗಲಿದೆ ಎನ್ನಲಾಗಿದೆ.

490 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿದ್ದು, ಹೆಚ್ಚುವರಿಯಾಗಿ 240 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ. ವಿಸ್ತರಣೆ ಕಾಮಗಾರಿಗಾಗಿ ಗುರುತಿಸಲಾದ ಒಟ್ಟು 240 ಎಕರೆ ಜಮೀನಿನಲ್ಲಿ ಒಟ್ಟು 160 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಪರಿಹಾರವಾಗಿ ಪ್ರತಿ ಎಕರೆಗೆ 1.5 ಕೋಟಿ ರೂ. ಜತೆಗೆ 46 ಎಕರೆ ಸ್ವಾಧೀನಪಡಿಸಿಕೊಂಡು ಪರಿಹಾರ ವಿತರಿಸಬೇಕು ಎಂದು ಸಭೆಯಲ್ಲಿ ಗಮನಕ್ಕೆ ತರಲಾಯಿತು.

ರನ್‌ವೇಯನ್ನು 3,500 ಮೀಟರ್‌ಗೆ ವಿಸ್ತರಿಸಬೇಕಾದರೆ ನಮಗೆ ಹೆಚ್ಚಿನ ಭೂಮಿ (91 ಎಕರೆ) ಬೇಕಾಗುತ್ತದೆ ಮತ್ತು ಪ್ರಸ್ತಾವನೆಯು ಹಣಕಾಸು ಇಲಾಖೆಯಲ್ಲಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಭದ್ರತಾ ಕಾಳಜಿ ಮತ್ತು ಅದರ ನಿರ್ಮಾಣಕ್ಕೆ ಸಂಬಂಧಿಸಿದ ಸಂಭಾವ್ಯ ಸವಾಲುಗಳು ಮತ್ತು ವೆಚ್ಚದ ಹೆಚ್ಚಳದ ಕಾರಣ ರನ್‌ವೇ ಕೆಳಗೆ ಅಂಡರ್‌ಪಾಸ್ ನಿರ್ಮಿಸುವ ಪ್ರಸ್ತಾಪವನ್ನು ಕೈಬಿಡಲಾಗಿದೆ ಎಂದು ಅವರು (ಸಿಂಹ) ಸಭೆಗೆ ತಿಳಿಸಿದರು. ಹೆದ್ದಾರಿಯ ರನ್‌ವೇಗೆ ಲಂಬವಾಗಿ ಬರುವುದರಿಂದ ಮೈಸೂರು-ನಂಜನಗೂಡು ಹೆದ್ದಾರಿಯನ್ನು ತಿರುಗಿಸಬೇಗುತ್ತದೆ. ಪರಿಣಾಮವಾಗಿ, ಹೆದ್ದಾರಿಯ ತಿರುವುಗಾಗಿ ಹೆಚ್ಚುವರಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು. ಜತೆಗೆ, ಬಿಜೆಪಿ ಸರ್ಕಾರ ವಿಮಾನ ನಿಲ್ದಾಣ ವಿಸ್ತರಣೆಗೆ 320 ಕೋಟಿ ರೂ. ಮಂಜೂರು ಮಾಡಿದೆ ಎಂದೂ ಹೇಳಿದರು.

ಇದನ್ನೂ ಓದಿ: ತಮಿಳುನಾಡಿಗೆ ಹರಿಸುತ್ತಿರುವ ನೀರಿನ ಪ್ರಮಾಣ ಕಡಿಮೆ ಮಾಡಿದ ರಾಜ್ಯ ಸರ್ಕಾರ, ಆದರೂ ಎಷ್ಟು ನೀರು ಹರಿಯುತ್ತಿದೆ ಗೊತ್ತಾ?

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ತೋಟಗಾರಿಕೆ ಮತ್ತು ಹೂಗಾರಿಕೆಯಿಂದ ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸುವ ರಫ್ತು ಕೇಂದ್ರವನ್ನು ಸ್ಥಾಪಿಸಲು ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾಕ್ಕೆ (ಎಎಐ) ಸೂಚಿಸಿದರು. ಮೈಸೂರಿನಲ್ಲಿ ಉತ್ಪಾದನೆಯಾಗುವ ಈ ಹೂವು ಮತ್ತು ಹಣ್ಣಿನ ಉತ್ಪನ್ನಗಳು ಸರಿಯಾದ ಸಾಗಾಟ ವ್ಯವಸ್ಥೆ ಇಲ್ಲದೆ ಜಿಲ್ಲೆಯಿಂದ ಹೊರಗೆ ಹೋಗುವುದಿಲ್ಲ. ವಿಮಾನ ನಿಲ್ದಾಣದಲ್ಲಿ ಗೋದಾಮು ಅಥವಾ ಕೋಲ್ಡ್ ಸ್ಟೋರೇಜ್ ತರಹದ ಸೌಲಭ್ಯ ಬಂದರೆ, ಸ್ಥಳೀಯ ಉತ್ಪನ್ನಗಳನ್ನು ಸರಕು ರೂಪದಲ್ಲಿ ರಫ್ತು ಮಾಡಬಹುದು ಎಂದು ಅವರು ಹೇಳಿರುವುದಾಗಿ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಮೈಸೂರು ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ವಿಸ್ತರಿಸಲು ಇದು ಸೂಕ್ತ ಸಮಯ ಎಂದೂ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:38 pm, Fri, 25 August 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ