ತಮಿಳುನಾಡಿಗೆ ಹರಿಸುತ್ತಿರುವ ನೀರಿನ ಪ್ರಮಾಣ ಕಡಿಮೆ ಮಾಡಿದ ರಾಜ್ಯ ಸರ್ಕಾರ, ಆದರೂ ಎಷ್ಟು ನೀರು ಹರಿಯುತ್ತಿದೆ ಗೊತ್ತಾ?

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದಕ್ಕೆ ಮೈಸೂರು, ಮಂಡ್ಯ ಭಾಗದ ಜನರ ಆಕ್ರೋಶ ಭುಗಿಲೆದ್ದಿದೆ. ಮತ್ತೊಂದೆಡೆ ಈ ಬಗ್ಗೆ ತಮಿಳುನಾಡಿ ಸಲ್ಲಿಸಿದ್ದ ಅರ್ಜಿಯನ್ನು ಇಂದು ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದದೆ. ಇದರ ಮಧ್ಯೆ ಇದೀಗ ತಮಿಳುನಾಡಿಗೆ ಹರಿಸುತ್ತಿರುವ ನೀರಿನ ಪ್ರಮಾಣವನ್ನು ಕಡಿಮೆಗೊಳಿಸಲಾಗಿದೆ. ಆದರೂ ನೀರು ಹರಿಯುತ್ತಿದೆ.

ತಮಿಳುನಾಡಿಗೆ ಹರಿಸುತ್ತಿರುವ  ನೀರಿನ ಪ್ರಮಾಣ ಕಡಿಮೆ ಮಾಡಿದ ರಾಜ್ಯ ಸರ್ಕಾರ, ಆದರೂ ಎಷ್ಟು ನೀರು ಹರಿಯುತ್ತಿದೆ ಗೊತ್ತಾ?
ಕಾವೇರಿ ನದಿ
Follow us
ಪ್ರಶಾಂತ್​ ಬಿ.
| Updated By: ರಮೇಶ್ ಬಿ. ಜವಳಗೇರಾ

Updated on: Aug 25, 2023 | 11:12 AM

ಬೆಂಗಳೂರು, (ಆಗಸ್ಟ್ 25): ತಮಿಳುನಾಡಿಗೆ(Tamil Nadu) ಕಾವೇರಿ ನೀರು(Cauvery water) ಹರಿಸುತ್ತಿರುವುದಕ್ಕೆ ಮೈಸೂರು, ಮಂಡ್ಯ ಭಾಗದ ಜನರ ಆಕ್ರೋಶ ಭುಗಿಲೆದ್ದಿದೆ. ಅಲ್ಲದೇ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿವೆ. ಹೀಗೆ ಅವರು ಕೇಳಿಂದಗೆ ನೀರು ಕೊಡುತ್ತಾ ಹೋದರ ಮುಂದೆ ನಮ್ಮ ಗತಿ ಏನು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ತಮಿಳುನಾಡಿಗೆ ಹರಿಸಲಾಗುತ್ತಿದ್ದ ನೀರಿನ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. 10 ಸಾವಿರ ಕ್ಯೂಸೆಕ್​ನಿಂದ 5 ಸಾವಿರ ಕ್ಯೂಸೆಕ್​ಗೆ ಇಳಿಕೆ ಮಾಡಲಾಗಿದೆ. ಹೌದು… ಕೆಆರ್​ಎಸ್​​ನಿಂದ ಪ್ರತಿನಿತ್ಯ 10 ರಿಂದ 12 ಸಾವಿರ ಕ್ಯೂಸೆಕ್​ ನೀರನ್ನು ನದಿ ಮೂಲಕ ತಮಿಳುನಾಡಿಗೆ ಬಿಡಲಾಗುತ್ತಿತ್ತು. ಆದ್ರೆ, ಇಂದು ಕೆಆರ್​ಎಸ್​ನಿಂದ ಕಾವೇರಿ ನದಿಗೆ 5038 ಕ್ಯೂಸೆಕ್​ ನೀರು ಬಿಡಲಾಗುತ್ತಿದೆ.

ಕೆ ಆರ್ ಎಸ್ ಜಲಾಶಯದ ಗರಿಷ್ಠ ಮಟ್ಟ 124.80 ಅಡಿ. ಆದ್ರೆ. ಸದ್ಯ ಜಲಾಶಯದ ನೀರಿನ ಮಟ್ಟ 102.74 ಅಡಿಯಷ್ಟು ನೀರು ಇದೆ. ಇದುವರೆಗೂ ಕೆ ಆರ್ ಎಸ್ ಜಲಾಶಯದಿಂದ ಎಂಟು ಟಿಎಂಸಿಯಷ್ಟು ನೀರು ತಮಿಳುನಾಡಿಗೆ ಹರಿದು ಹೋಗಿದೆ. ಈ ಹಿನ್ನೆಲೆ ಮಂಡ್ಯದಲ್ಲಿ ಕಾವೇರಿ ಕಿಚ್ಚು ಜೋರಾಗಿತ್ತು. ಇದೀಗ ಅನ್ನದಾತರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ನೀರಿನ ಹರಿಸುವಿಕೆ ಪ್ರಮಾಣ ಕಡಿಮೆ ಮಾಡಿದೆ.

ಇದನ್ನೂ ಓದಿ: ಮಂಡ್ಯ-ಮೈಸೂರಿನಲ್ಲಿ ಜೋರಾದ ಕಾವೇರಿ ಕಿಚ್ಚು: ತಮಿಳುನಾಡಿಗೆ ನೀರು ಹರಿಸುವುದರ ವಿರುದ್ಧ ಸಿಡಿದೆದ್ದ ರೈತರು

ಸುಪ್ರೀಂನಲ್ಲಿ ಇಂದು ತಮಿಳುನಾಡು ಅರ್ಜಿ ವಿಚಾರಣೆ

ಇನ್ನು ಇಂದು(ಆಗಸ್ಟ್ 25) ಸುಪ್ರೀಂಕೋರ್ಟ್​ನಲ್ಲಿ ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಲಿದೆ. ಕಾವೇರಿ ನದಿ ನೀರು ವಿವಾದ ಸಂಬಂಧ ಸುಪ್ರೀಂ ಕೋರ್ಟ್ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುವ ಮುನ್ನಾದಿನ ಕರ್ನಾಟಕ ಸರ್ಕಾರ ಅಫಿಟವಿಟ್‌ ಸಲ್ಲಿಸಿದೆ. ಬಿಳಿಗುಂಡ್ಲುವಿನ ಅಂತರರಾಜ್ಯ ಗಡಿಯಲ್ಲಿ ಮೇಕೆದಾಟು ಸಮತೋಲನ ಜಲಾಶಯ-ಕುಡಿಯುವ ನೀರಿನ ಯೋಜನೆ ನಿರ್ಮಾಣಕ್ಕೆ ತಮಿಳುನಾಡಿನ ಅನಗತ್ಯ ವಿರೋಧದಿಂದ ಈ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಕರ್ನಾಟಕ ಅಫಿಟವಿಟ್‌ನಲ್ಲಿ ಉಲ್ಲೇಖಿಸಿದೆ.

ಸಾಮಾನ್ಯ ಮಳೆ ವರ್ಷಕ್ಕೆ ನಿಗದಿಪಡಿಸಿದ ನೀರು ಬಿಡುಗಡೆಯ ಪ್ರಕಾರ, ಜೂನ್​ನಲ್ಲಿ 9.19 ಟಿಎಂಸಿ, ಜುಲೈನಲ್ಲಿ 31.24 ಟಿಎಂಸಿ, ಆಗಸ್ಟ್​ನಲ್ಲಿ 45.95 ಟಿಎಂಸಿ, ಸೆಪ್ಟೆಂಬರ್​ನಲ್ಲಿ 36.76 ಟಿಎಂಸಿ, ಅಕ್ಟೋಬರ್​ನಲ್ಲಿ 20.22 ಟಿಎಂಸಿ, ನವೆಂಬರ್​ನಲ್ಲಿ 13.78 ಟಿಎಂಸಿ, ಡಿಸೆಂಬರ್​​ನಲ್ಲಿ 7.35 ಟಿಎಂಸಿ, ಜನವರಿಯಲ್ಲಿ 2.76 ಟಿಎಂಸಿ ಹಾಗೂ ಫೆಬ್ರವರಿಯಲ್ಲಿ 2.5 ಟಿಎಂಸಿ ಸೇರಿ ಮೇ ತಿಂಗಳವರೆಗೆ ಒಟ್ಟು 177.25 ಟಿಎಂಸಿ ನೀರನ್ನು ಬಿಡುಗಡೆ ಮಾಡುವ ಬಾಧ್ಯತೆ ಹೊಂದಿಲ್ಲ. ಇದಕ್ಕಾಗಿ ತಮಿಳುನಾಡು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಕರ್ನಾಟಕ ಸರ್ಕಾರ ವಿವರಿಸಿದೆ.

ಕರ್ನಾಟಕದಿಂದ ಕಾವೇರಿ ನದಿ ನೀರು ಬಿಡುಗಡೆಗೆ ಹೊಸ ನಿರ್ದೇಶನಗಳನ್ನು ನೀಡುವಂತೆ ಕೋರಿ ತಮಿಳುನಾಡು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ. ಇದಕ್ಕೆ ಪ್ರತಿಯಾಗಿ ಕರ್ನಾಟಕ ಸರ್ಕಾರ ತನ್ನ ಅಫಿಡವಿಟ್‌ ಸಲ್ಲಿಸಿದ್ದು, ಸುಪ್ರೀಂಕೋರ್ಟ್​ ಏನು ತೀರ್ಪು ನೀಡಲಿದೆ ಎಂದು ಕಾದುನೋಡಬೇಕಿದೆ.

ಕಬಿನಿ ಜಲಾಶಯದ ಒಳಹರಿವು ಕಡಿಮೆ ಹೊರಹರಿವಿನಲ್ಲಿ ಹೆಚ್ಚಳ

ಕಬಿನಿ ಜಲಾಶಯದ ಒಳಹರಿವು ಕಡಿಮೆಯಾಗಿದ್ದರೂ ಹೊರಹರಿವು ಹೆಚ್ಚಳವಾಗಿದೆ. ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲ್ಲೂಕು ಬೀಚನಹಳ್ಳಿ ಗ್ರಾಮದ ಕಬಿನಿ ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿದೆ. 84 ಅಡಿ ಗರಿಷ್ಠ ಸಾಮರ್ಥ್ಯದ ಕಬಿನಿ ಜಲಾಶಯದ ಇಂದಿನ‌ ‌ನೀರಿನ ಮಟ್ಟ 75.24 ಅಡಿ ಇದೆ. ಜಲಾಶಯದ ಇಂದಿನ‌ ಒಳಹರಿವು 1411 ಕ್ಯೂಸೆಕ್‌ಗೆ ಇಳಿಕೆಯಾಗಿದೆ. ಕಳೆದ ವರ್ಷ ಇದೇ ದಿನ 8,368 ಕ್ಯೂಸೆಕ್ ಒಳಹರಿವು ಇತ್ತು. ಇನ್ನು ಜಲಾಶಯದ ಹೊರಹರಿವು 4,375 ಕ್ಯೂಸೆಕ್‌ಗೆ ಹೆಚ್ಚಳವಾಗಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ