ಪಾಕ್ ದಾಳಿಯನ್ನು ವಿಫಲಗೊಳಿಸಿದ ಭಾರತದ ಸುದರ್ಶನ ಚಕ್ರ S-400: ಇದರ ತಾಕತ್ತಿನ ಬಗ್ಗೆ ತಿಳಿದುಕೊಳ್ಳಲೇಬೇಕು
What Is Sudarshan Chakra S-400: ಆಪರೇಷನ್ ಸಿಂಧೂರನಲ್ಲಿ ಭಾರತೀಯ ಸೇನೆ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಪಾಕಿಸ್ತಾನದ HQ-9 ಡಿಫೆನ್ಸ್ ಸಿಸ್ಟಮ್ ಅನ್ನು ಭಾರತದ ಕಮಕಜೈ ಡ್ರೋಣ್ ನಾಶಪಡಿಸಿದೆ. ಅಂದ್ರೆ ಭಾರತದ ಡ್ರೋಣ್ ದಾಳಿಯಲ್ಲಿ ಪಾಕಿಸ್ತಾನದ ಲಾಹೋರ್ ನಗರದಲ್ಲಿದ್ದ ಏರ್ ಡಿಫೆನ್ಸ್ ಸಿಸ್ಟಮ್ ಸಂಪೂರ್ಣ ಉಡೀಸ್ ಆಗಿದೆ. ಹಾಗಾದ್ರೆ, ಪಾಕ್ನ ಡ್ರೋಣ್, ಮಿಸೈಲ್, ಏರ್ ಡಿಫೆನ್ಸ್ ಸಿಸ್ಟಮ್ ಉಡೀಸ್ ಮಾಡಿದ ಭಾರತದ ಏರ್ಡಿಫೆನ್ಸ್ ಸಿಸ್ಟಮ್ S-400 ತಾಕತ್ತಿನ ಬಗ್ಗೆ ತಿಳಿದುಕೊಳ್ಳಿ.

ನವದೆಹಲಿ, (ಮೇ 08): ಆಪರೇಷನ್ ಸಿಂದೂರಗೆ (Operation Sindoor) ಪ್ರತೀಕಾರವಾಗಿ ಪಾಕಿಸ್ತಾನ (Pakistan) ನಡೆಸಿದ ವೈಮಾನಿಕ ದಾಳಿಯನ್ನು ಭಾರತೀಯ ವಾಯುಪಡೆ (Indian Air Force) ವಿಫಲಗೊಳಿಸಿದೆ. ಬುಧವಾರ(ಮೇ 07) ತಡರಾತ್ರಿ ಉತ್ತರ ಮತ್ತು ಪಶ್ಚಿಮ ಭಾರತದ ಹಲವು ಸ್ಥಳಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಡ್ರೋನ್ ಮತ್ತು ಕ್ಷೀಪಣಿ ದಾಳಿ ನಡೆಸಿದೆ. ಆದ್ರೆ, ಭಾರತ ಇದನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದೆ. ಚಂಡೀಗಢ, ಆವಂತಿಪೊರ, ಜಲಂಧರ್, ಲೂಧಿಯಾನ, ಅಮೃತಸರ, ಪಠಾಣಕೋಟ್, ಕಪೂರ್ತಲಾ, ನಲ, ಫಲೋಡಿ, ಉತ್ತರಲೈ, ಭುಜ್, ಜಮ್ಮು, ಶ್ರೀನಗರ, ಆಧಂಪುರ, ಭಟಿಂಡಾ ಮೇಲೆ ಪಾಕ್ ಕ್ಷೀಪಣಿ ದಾಳಿಗೆ ಯತ್ನಿಸಿದೆ. ಆದ್ರೆ, ಇದನ್ನು ಭಾರತದ ಎಸ್-400 ಏರ್ ಡಿಫೆನ್ಸ್ ಸಿಸ್ಟಂ ಹೊಡೆದುರುಳಿಸಿದೆ. ಈ ಬಗ್ಗೆ ಭಾರತ ಅಧಿಕೃತವಾಗಿ ಖಚಿತಪಡಿಸಿದೆ. ಈಗ ಭಾರತದ ರಕ್ಷಣೆಗೆ ಬಳಕೆಯಾಗಿದ್ದು ಅಮೆರಿಕಾದ ವಿರೋಧದ ನಡುವೆಯೇ ಭಾರತ ಖರೀದಿಸಿದ್ದ S-400 ಏರ್ ಡಿಫೆನ್ಸ್ ಸಿಸ್ಟಮ್.
ನಿನ್ನೆ (ಮೇ 07) ರಾತ್ರಿ ಭಾರತದ 15 ನಗರಗಳ ಮೇಲೆ ಪಾಕಿಸ್ತಾನ ಮಿಸೈಲ್ ದಾಳಿ ನಡೆಸಿದ್ದು, ಅದನ್ನ S-400 ಏರ್ ಡಿಫೆನ್ಸ್ ಸಿಸ್ಟಮ್ ಸಂಪೂರ್ಣವಾಗಿ ವಿಫಲಗೊಳಿಸಿದೆ. ಭಾರತದ ರಕ್ಷಣಾ ಬತ್ತಳಿಕೆಯಲ್ಲಿರುವ ಪ್ರಮುಖ ಅಸ್ತ್ರ S-400 ಏರ್ ಡಿಫೆನ್ಸ್ ಸಿಸ್ಟಮ್ ಭಾರತವನ್ನ ರಕ್ಷಿಸಿದೆ. ಈ S-400 ಏರ್ ಡಿಫೆನ್ಸ್ ಸಿಸ್ಟಮ್, ಇಸ್ರೇಲ್‌ನ ಐರನ್ ಡೋಮ್ ರೀತಿ ಕೆಲಸ ಮಾಡುತ್ತೆ. ಭಾರತಕ್ಕೆ ವೈರಿ ರಾಷ್ಟ್ರಗಳ ವಾಯು ದಾಳಿ, ಮಿಸೈಲ್ ದಾಳಿಯಿಂದ ಇದು ಸಂಪೂರ್ಣ ರಕ್ಷಣೆ ನೀಡುತ್ತೆ. S-400 ಅನ್ನು ಸುದರ್ಶನ ಚಕ್ರ ಅಂತ ಕರೆಯಲಾಗುತ್ತೆ.
ಇದನ್ನೂ ಓದಿ: ದೇಶದೊಳಗೆ ನುಗ್ಗಲು ಬಂದ ಪಾಕಿಸ್ತಾನದ ಮೇಲೆ ಭಾರತ ದಾಳಿ; ಲಾಹೋರ್ನಲ್ಲಿ ವಾಯು ರಕ್ಷಣಾ ವ್ಯವಸ್ಥೆ ಧ್ವಂಸ
ರಷ್ಯಾದಿಂದ ಖದೀರಿಸಿದ ಭಾರತ
ಭಾರತವು ರಷ್ಯಾದಿಂದ ಐದು ಸ್ಕ್ವಾಡ್ರನ್‌ಗಳನ್ನು ಖರೀದಿಸಿದ್ದು, ಈ ಐದು S-400 ಸ್ಕ್ವಾಡ್ರನ್‌ಗಳಿಗೆ 35,000 ಕೋಟಿ ರೂ.ಗಳ ಒಪ್ಪಂದಕ್ಕೆ 2018 ರಲ್ಲಿ ಸಹಿ ಹಾಕಲಾಯಿತು. ಈ ಐದರಲ್ಲಿ ಈಗಾಗಲೇ ಮೂರು S-400 ಸ್ಕ್ವಾಡ್ರನ್ಗಳು ಭಾರತ ರಕ್ಷಣಾ ಕ್ಷೇತ್ರಕ್ಕೆ ಸೇರ್ಪಡೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇನ್ನುಳಿದ ಎರಡು 2026ರ ವೇಳೆಗೆ ಬರುವ ನಿರೀಕ್ಷೆಯಿದೆ. 2019ರ ಪುಲ್ವಾಮಾ ದಾಳಿಯ ಬಳಿಕ ಭಾರತ ರಷ್ಯಾದಿಂದ ಈ S-400 ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ಖರೀದಿ ಮಾಡಿದೆ. ಆಗ ರಷ್ಯಾದಿಂದ ಎಸ್-400 ಖರೀದಿಸಿದರೆ ಭಾರತದ ಮೇಲೆ ಕೆಲ ನಿರ್ಬಂಧ ವಿಧಿಸುವುದಾಗಿ ಅಮೆರಿಕಾ ಬೆದರಿಕೆ ಹಾಕಿತ್ತು. ಆದರೆ ಅಮೆರಿಕಾದ ಬೆದರಿಕೆಗೂ ಜಗ್ಗದ ಭಾರತ, ತನ್ನ ರಕ್ಷಣೆಗಾಗಿ ಏರ್ ಡಿಫೆನ್ಸ್ ಸಿಸ್ಟಮ್ ಬೇಕೆಂದು ಖರೀದಿಸಿತ್ತು.
S-400 ಎಷ್ಟು ಬಲಶಾಲಿ ಗೊತ್ತಾ?
ಸುದರ್ಶನ ಚಕ್ರ ಎಂದು ಕರೆಯಲ್ಪಡುವ ಎಸ್-400 ವಾಯು ರಕ್ಷಣಾ ವ್ಯವಸ್ಥೆಗಳಿಂದ ಪಾಕ್ನ ಡ್ರೋನ್ ಹಾಗೂ ಕ್ಷೀಪಣಿಗಳನ್ನು ಹೊಡೆದುಹಾಕಿದೆ. ರಷ್ಯಾ ನಿರ್ಮಿತ ಈ ಎಸ್-400 ಸಿಸ್ಟಮ್ ವಿಶ್ವದಲ್ಲೇ ಅತ್ಯಂತ ಅಡ್ವಾನ್ಸಡ್ ಸಿಸ್ಟಮ್ಗಳಲ್ಲಿ ಒಂದಾಗಿದ್ದು, 600 ಕಿಲೋಮೀಟರ್ ದೂರದವರೆಗಿನ ಗುರಿಗಳನ್ನು ಪತ್ತೆ ಹಚ್ಚುವಲ್ಲಿ ಮತ್ತು 400 ಕಿಲೋಮೀಟರ್ಗಳವರೆಗಿನ ಗುರಿಗಳನ್ನು ತಡೆಯುವ ಸಾಮಾರ್ಥ್ಯವನ್ನು ಹೊಂದಿದೆ.
400 ಕಿಮೀ ವರೆಗಿನ ವ್ಯಾಪ್ತಿಯಲ್ಲಿ ರಹಸ್ಯ ವಿಮಾನಗಳು, ಫೈಟರ್ ಜೆಟ್‌ಗಳು, ಡ್ರೋನ್‌ಗಳು ಮತ್ತು ಕ್ಷಿಪಣಿಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವೈಮಾನಿಕ ದಾಳಿಯನ್ನು ಪತ್ತೆಹಚ್ಚುವ ತಾಕತ್ತು ಇದಕ್ಕಿದೆ. ಅಲ್ಲದೇ 400 ಕಿಮೀ ದೂರದಿಂದಲೇ ಬರುವ ವೈರಿ ರಾಷ್ಟ್ರಗಳ ಮಿಸೈಲ್ ಅನ್ನು ಪತ್ತೆ ಹಚ್ಚಿ ಹೊಡೆದುರುಳಿಸುತ್ತದೆ. S-400 ಏಕಕಾಲಕ್ಕೆ 72 ವೈರಿ ಮಿಸೈಲ್ ದಾಳಿಯನ್ನು ಪತ್ತೆ ಹಚ್ಚಿ ನಾಶಪಡಿಸುವ ಶಕ್ತಿ ಇದಕ್ಕಿದೆ.
ಈ S-400 ಸ್ಕ್ವಾಡ್ರನ್ ಎರಡು ಬ್ಯಾಟರಿಗಳನ್ನು ಒಳಗೊಂಡಿರುತ್ತದೆ. ಹಾಗೇ ಆರು ಲಾಂಚರ್‌ಗಳು, ರಾಡಾರ್ ಮತ್ತು ಕಮಾಂಡ್ ಕಂಟ್ರೋಲ್ ಹೊಂದಿದ್ದು, ಪ್ರತಿ ಬ್ಯಾಟರಿಗೆ 128 ಕ್ಷಿಪಣಿಗಳನ್ನು ಹೊಂದಿಸಬಹುದಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








