ಆಟೋದಲ್ಲಿ ಬಿಟ್ಟು ಹೋಗಿದ್ದ 1.5 ಲಕ್ಷ ಮೌಲ್ಯದ ಚಿನ್ನಾಭರಣ ಮಾಲೀಕರಿಗೆ ಹಿಂದಿರುಗಿಸಿದ ಮೈಸೂರಿನ ಆಟೋ ಡ್ರೈವರ್

ಆಟೋದಲ್ಲೇ ಬಿಟ್ಟು ಹೋದ ಒಡವೆಗಳನ್ನು ಮಾಲೀಕರಿಗೆ ಹಿಂದಿರುಗಿಸಿದ ಆಟೋ ಚಾಲಕನ ನಿಷ್ಠೆಗೆ ಜನರು ಹೊಗಳಿಕೆಯ ಮಾತುಗಳನ್ನಾಡುತ್ತಿದ್ದಾರೆ.

ಆಟೋದಲ್ಲಿ ಬಿಟ್ಟು ಹೋಗಿದ್ದ 1.5 ಲಕ್ಷ ಮೌಲ್ಯದ ಚಿನ್ನಾಭರಣ ಮಾಲೀಕರಿಗೆ ಹಿಂದಿರುಗಿಸಿದ ಮೈಸೂರಿನ ಆಟೋ ಡ್ರೈವರ್
ಆಟೋದಲ್ಲಿ ಬಿಟ್ಟು ಹೋಗಿದ್ದ 1.5 ಲಕ್ಷ ಮೌಲ್ಯದ ಚಿನ್ನಾಭರಣ ಮಾಲೀಕರಿಗೆ ಹಿಂದಿರುಗಿಸಿದ ಮೈಸೂರಿನ ಆಟೋ ಡ್ರೈವರ್
Follow us
TV9 Web
| Updated By: Rakesh Nayak Manchi

Updated on: Dec 11, 2022 | 12:27 PM

ಮೈಸೂರು: ಸ್ವಾರ್ಥಿಗಳ ಪ್ರಪಂಚದಲ್ಲಿ ಒಂದಷ್ಟು ಮಂದಿ ಒಳ್ಳೆಯವರು ಇರುತ್ತಾರೆ ಎಂಬುದಕ್ಕೆ ಆಟೋ ಚಾಲಕ ಸ್ವಾಮಿಯೇ ನಿದರ್ಶನ. ಆಟೋದಲ್ಲಿ ಬಿಟ್ಟು ಹೋಗಿದ್ದ ಚಿನ್ನದ ಒಡವೆಗಳನ್ನು (Gold jewelleries) ಆಟೋ ಚಾಲಕ (Auto Driver) ಸ್ವಾಮಿ ಎಂಬವರು ಮಾಲೀಕರಿಗೆ ಹಿಂದಿರುಗಿಸಿ ಮಾನವೀಯತೆ (Humanity) ಮರೆದಿದ್ದು, ಸ್ವಾಮಿ ನಿಷ್ಠೆ (Loyalty) ಹಾಗೂ ಪ್ರಾಮಾಣಿಕತೆಯನ್ನು ಮೆಚ್ಚಿ ಪೊಲೀಸರು ಸನ್ಮಾನ ಮಾಡಿದ್ದಾರೆ. ದೇವರಾಜ ಸಂಚಾರ ಪೊಲೀಸ್ ಠಾಣೆ ಇನ್ಸಪೆಕ್ಟರ್ ಮುನಿಯಪ್ಪ ಅವರು ಆಟೋ ಚಾಲಕ ಸ್ವಾಮಿಯವರನ್ನು ಸನ್ಮಾನಿಸಿ ಗೌರವಿಸಿದರು.

ಇದನ್ನೂ ಓದಿ: ವಿದೇಶಿಗನ ಮೇಲೆ ಪ್ರಭಾವ ಬೀರಿದ ‘ಓಂ’, ತನ್ನ ಬೆನ್ನಿನ ಮೇಲೆ‌ ಓಂ ಟ್ಯಾಟೂ‌ ಹಾಕಿಸಿಕೊಂಡ‌ ಆ್ಯಂಡಿ

ತಮಿಳುನಾಡು ಮೂಲದ ಚೇತನ ಎಂಬುವವರು ತಿರುಚಿಯಿಂದ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಬಂದಿದ್ದರು. ಇಲ್ಲಿಂದ ಮನೆಗೆ ಸ್ವಾಮಿ ಎಂಬವರ ಆಟೋದಲ್ಲಿ ಹೋಗಿದ್ದಾರೆ. ಅದರಂತೆ ಸ್ವಾಮಿ ಅವರು ಚೇತನ ಅವರನ್ನು ಮನೆ ಬಳಿ ಬಿಟ್ಟು ವಾಪಸ್ ಆಗಿದ್ದಾರೆ. ಹೀಗೆ ಬಂದು ಹಿಂಬದಿ ಸೀಟ್ ನೋಡಿದಾಗ ಚಿನ್ನಾಭರಣ ಪತ್ತೆಯಾಗಿದೆ.

ಇದನ್ನೂ ಓದಿ: ಮೈಸೂರು: ಅಮ್ಮ ಹುಲಿಯ ನಿಗ್ರಾಣಿಯಲ್ಲಿ ಮರಿಗಳು ಸ್ವಚ್ಛಂದವಾಗಿ ಓಡಾಡುವ ದೃಶ್ಯ ಕಣ್ಮನ ಸೆಳೆಯುತ್ತದೆ

ತಮ್ಮ ಆಟೋದಲ್ಲಿ ಪತ್ತೆಯಾದ ಚಿನ್ನಾಭರಣಗಳನ್ನು ಸ್ವಾಮಿಯವರು ದೇವರಾಜ ಸಂಚಾರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿ ಚೇತನಾ ಅವರನ್ನು ಠಾಣೆಗೆ ಕರೆಸಿ ಚಿನ್ನಾಭರಣಗಳನ್ನು ಒಪ್ಪಿಸಿದ್ದಾರೆ. ಸುಮಾರು 1.5 ಲಕ್ಷ ಮೌಲ್ಯದ 24 ಗ್ರಾಂನ ಮಾಂಗಲ್ಯ ಸರ, 10 ಗ್ರಾಂ ಸರ , 2 ಗ್ರಾಂ ಉಂಗುರವನ್ನು ಚೇತನ ಅವರು ಆಟೋಪದಲ್ಲಿ ಬಿಟ್ಟು ಹೋಗಿದ್ದರು.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ