ವರುಣದಲ್ಲಿ ಸಿದ್ದು ವಿರುದ್ದ ತೊಡೆ ತಟ್ಟಲು ಸಿದ್ದ ಎಂದ ಬಿ ವೈ ವಿಜಯೇಂದ್ರ: ರಾಜಕೀಯ ಒಳಸುಳಿಯೇನು?
Varuna: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ಬಾರಿ ಮೈಸೂರು ಜಿಲ್ಲೆಯ ವರುಣ ಕ್ಷೇತ್ರ ರಾಜ್ಯ ರಾಜಕಾರಣದ ಕೇಂದ್ರ ಬಿಂದುವಾಗುವ ಎಲ್ಲಾ ಲಕ್ಷಣಗಳು ಜೋರಾಗಿವೆ. ಇದಕ್ಕೆ ಕಾರಣ ಸಿದ್ದರಾಮಯ್ಯ ಹಾಗೂ ಬಿ ವೈ ವಿಜಯೇಂದ್ರ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ (Karnataka Assembly Elections 2023) ದಿನಗಣನೆ ಆರಂಭವಾಗಿದೆ. ಈ ಬಾರಿ ಮೈಸೂರು ಜಿಲ್ಲೆಯ ವರುಣ (Varuna) ಕ್ಷೇತ್ರ ರಾಜ್ಯ ರಾಜಕಾರಣದ ಕೇಂದ್ರ ಬಿಂದುವಾಗುವ ಎಲ್ಲಾ ಲಕ್ಷಣಗಳು ಜೋರಾಗಿವೆ. ಇದಕ್ಕೆ ಕಾರಣ ಸಿದ್ದರಾಮಯ್ಯ (Siddaramaiah) ಹಾಗೂ ಬಿ ವೈ ವಿಜಯೇಂದ್ರ (BY Vijayendra). ಹೇಗೆ ಅಂತೀರಾ? ಹಾಗಿದ್ರೆ ಈ ಸ್ಟೋರಿ ಓದಿ.
ಒಂದು ಟಗರು. ಮತ್ತೊಂದು ಕಡೆ ಮರಿ ರಾಜಾಹುಲಿ ಅಬ್ಬರ. ಇದು ಸದ್ಯ ಮೈಸೂರು ಜಿಲ್ಲೆ ವರುಣ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಚುನಾವಣಾ ಬೆಳವಣಿಗೆ. ಹೌದು ಸುರಕ್ಷಿತ ಕ್ಷೇತ್ರದ ಹುಡುಕಾಟ ನಡೆಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರ, ಬಾದಾಮಿ ಎಲ್ಲಾ ಸುತ್ತಾಡಿ ಕೊನೆಗೆ ತಮ್ಮ ಹಳೆಯ ಕ್ಷೇತ್ರ ವರುಣವೇ ಬೆಸ್ಟ್ ಅನ್ನೋ ತೀರ್ಮಾನಕ್ಕೆ ಬಂದಿದ್ದಾರೆ.
ಎರಡು ದಿನದ ಹಿಂದೆ ವರುಣ ಕ್ಷೇತ್ರದಲ್ಲಿ ರೌಂಡ್ ಮುಗಿಸಿದ್ದ ಸಿದ್ದು ಸಖತ್ ಖುಷಿಯಾಗಿದ್ರು. ಮಗ ಶಾಸಕನಾಗಿ ಮಾಡಿರುವ ಕೆಲಸಗಳು ಹಾಗೂ ಜನರ ಬೆಂಬಲ ನೋಡಿ ಮುಂದಿನ ಚುನಾವಣೆ ಬಹುತೇಕ ವರುಣದಲ್ಲೇ ಎದುರಿಸುವ ಅಂತಿಮ ನಿರ್ಧಾರಕ್ಕೆ ಬಂದಿದ್ರು.
ಇತ್ತ ವಿಪಕ್ಷ ನಾಯಕ ಸಿದ್ದರಾಮಯ್ಯ ವರುಣದಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತವಾಗುತ್ತಿದ್ದ ಬೆನ್ನಲ್ಲೇ ಇವತ್ತು ಬಿಎಸ್ ಯಡಿಯೂರಪ್ಪ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಭಾನುವಾರ ಮೈಸೂರಿಗೆ ಆಗಮಿಸಿದ್ದರು. ವೀರಶೈವ ಲಿಂಗಾಯತ ಮಹಾಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಜಯೇಂದ್ರ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವರುಣದಲ್ಲಿ ತೊಡೆ ತಟ್ಟುವ ಬಗ್ಗೆ ಸುಳಿವು ನೀಡಿದ್ರು.
ಇದನ್ನೂ ಓದಿ:
ಸಾಮೂಹಿಕವಾಗಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಚಾಮರಾಜಪೇಟೆ ಮುಖಂಡರು, JDS ಗೆಲ್ಲುವ ಮೊದಲ ಕ್ಷೇತ್ರ ಎಂದ ಎಚ್ಡಿಕೆ
ನಿನ್ನೆ ಮೈಸೂರಿಗೆ ಆಗಮಿಸಿದ ವಿಜಯೇಂದ್ರ ಗನ್ ಹೌಸ್ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ರು. ಇದೇ ವೇಳೆ ಮಾತನಾಡಿದ ಬಿ ವೈ ವಿಜಯೇಂದ್ರ ಹೈಕಮಾಂಡ್ ಸೂಚಿಸಿದ್ರೆ ಯಾವುದೇ ಸವಾಲು ಸ್ವೀಕರಿಸಲು ತಾನು ಸಿದ್ದ ಎಂದು ಪರೋಕ್ಷವಾಗಿ ತಾನು ಸಿದ್ದು ವಿರುದ್ದ ತೊಡೆ ತಟ್ಟಲು ಸಿದ್ದ ಅನ್ನೋದನ್ನು ಘೋಷಿಸಿದ್ರು.
ಅಷ್ಟಕ್ಕೆ ಸುಮ್ಮನಾಗದ ಬಿವೈ ವಿಜಯೇಂದ್ರ ಸುತ್ತೂರು ಶಾಖ ಮಠದಲ್ಲಿ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಳೆ ಮೈಸೂರು ಅಂದರೆ ನನಗೆ ಪಂಚಪ್ರಾಣ. ವರುಣ ಕ್ಷೇತ್ರವೇ ನನಗೆ ರಾಜಕೀಯವಾಗಿ ರಾಜ್ಯದಲ್ಲಿ ಗುರುತಿಸುವಂತೆ ಮಾಡಿದ್ದು. ಕೊನೆಯವರೆಗೂ ನಾನು ಇದನ್ನ ಮರೆಯುವುದಿಲ್ಲ ಅಂತ ಘೋಷಿಸಿದ್ರು.
ಕಳೆದ ಚುನಾವಣೆಯಲ್ಲಿ ವರುಣ ಕ್ಷೇತ್ರದಿಂದ ಅಖಾಡಕ್ಕಿಳಿಯಲು ಬಿ ವೈ ವಿಜಯೇಂದ್ರ ಸಾಕಷ್ಟು ಉತ್ಸುಕರಾಗಿದ್ರು. ಆದ್ರೆ ಅಂತಿಮ ಹಂತದಲ್ಲಿ ಹೈಕಮಾಂಡ್ ವಿಜಯೇಂದ್ರ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ನೀಡಿರಲಿಲ್ಲ. ಇದರಿಂದ ಸಾಕಷ್ಟು ಗಲಾಟೆ ಗದ್ದಲ ಗೊಂದಲಗಳಾಗಿತ್ತು. ಇದು ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿತ್ತು.
ಇದೀಗ ಮತ್ತೆ ಬಿ ವೈ ವಿಜಯೇಂದ್ರ ಮತ್ತೊಮ್ಮೆ ವರುಣ ಕ್ಷೇತ್ರದಿಂದ ರಾಜಕೀಯ ಚುನಾವಣಾ ಅಖಾಡಕ್ಕೆ ಧುಮುಕುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಮೂಲಕ ವಿಜಯೇಂದ್ರ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಚೆಕ್ ನೀಡಲು ಮುಂದಾಗಿದ್ದಾರೆ. ಒಂದು ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ವರುಣ ಕ್ಷೇತ್ರವನ್ನೇ ಫೈನಲ್ ಮಾಡಿ, ಮತ್ತೊಂದು ಕಡೆಯಿಂದ ಬಿ ವೈ ವಿಜಯೇಂದ್ರ ಕಣಕ್ಕಿಳಿದರೆ ವರುಣ ಕ್ಷೇತ್ರ ಜಿದ್ದಾಜಿದ್ದಿನ ಅಖಾಡವಾಗಿ ಮುಂದಿನ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆಯೋದು ಖಂಡಿತ (ವರದಿ: ರಾಮ್, ಟಿವಿ 9, ಮೈಸೂರು)
ಕರ್ನಾಟಕ ಅಸೆಂಬ್ಲಿ ಚುನಾವಣೆ 2023 ಕುರಿತಾದ ವರದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ