AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KGF ತಮಿಳು ಕಾರ್ಮಿಕರ ಮೇಲೆ ಕಣ್ಣಿಟ್ಟ ಹೆಚ್‌ಡಿಕೆ, ಪ್ರಾದೇಶಿಕ ಜೆಡಿಎಸ್​ ಪಕ್ಷ ಅಧಿಕಾರಕ್ಕೆ ಬಂದರೆ ಕೇಂದ್ರ ಸರ್ಕಾರ ಅದಕ್ಕೆ ನೀರೆರೆಯುತ್ತಾ!?

ಕೆಜಿಎಫ್‌ನ ತಮಿಳು ಹಾಗೂ ಕಾರ್ಮಿಕ ವಲಯದ ಮೇಲೆ ಕಣ್ಣಿಟ್ಟಿರುವ ಹೆಚ್‌ಡಿಕೆ ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ಕೆಜಿಎಫ್ ಗತ ವೈಭವದ ಭರವಸೆ ನೀಡಿದ್ದಾರೆ. ಆದ್ರೆ ಕೇಂದ್ರ ಸರ್ಕಾರದ ಒಡೆತನದಲ್ಲಿರುವ ಚಿನ್ನದ ಗಣಿ ತೆರೆಯಲು ಪ್ರಾದೇಶಿಕ ಪಕ್ಷ ಜೆಡಿಎಸ್​ ಅಧಿಕಾರಕ್ಕೆ ಬಂದಲ್ಲಿ ಕೆಜಿಎಫ್ ಮತ್ತೆ ಹಿಂದಿನ ದಿನಗಳು ಮರುಕಳಿಸುತ್ತಾ!?

KGF ತಮಿಳು ಕಾರ್ಮಿಕರ ಮೇಲೆ ಕಣ್ಣಿಟ್ಟ ಹೆಚ್‌ಡಿಕೆ, ಪ್ರಾದೇಶಿಕ ಜೆಡಿಎಸ್​ ಪಕ್ಷ ಅಧಿಕಾರಕ್ಕೆ ಬಂದರೆ ಕೇಂದ್ರ ಸರ್ಕಾರ ಅದಕ್ಕೆ ನೀರೆರೆಯುತ್ತಾ!?
ಕೆಜಿಎಫ್‌ ತಮಿಳು ಕಾರ್ಮಿಕರ ಮೇಲೆ ಕಣ್ಣಿಟ್ಟ ಹೆಚ್‌ಡಿಕೆ
TV9 Web
| Updated By: ಸಾಧು ಶ್ರೀನಾಥ್​|

Updated on:Dec 11, 2022 | 11:20 AM

Share

ಮುಂದಿನ ವಿಧಾನಸಭಾ ಚುನಾವಣೆ (Karnataka Assembly Elections 2023) ತಯಾರಿಯಲ್ಲಿರುವ ಜೆಡಿಎಸ್ (JDS) ಪಂಚರತ್ನ ಮೂಲಕ ರಣಕಹಳೆ ಮೊಳಗಿಸಿದೆ. ಚಿನ್ನದ ನಾಡು, ರಾಜ್ಯದ ಮೂಡಣ ದಿಕ್ಕು ಕೋಲಾರದಿಂದಲೇ ಯಾತ್ರೆ ಆರಂಭಿಸಿದೆ. ಪ್ರಾದೇಶಿಕ ಪಕ್ಷಕ್ಕೆ ಆಶೀರ್ವಾದ ಮಾಡಿದ್ರೆ ಚಿನ್ನದ ಗಣಿ ಪ್ರದೇಶದಲ್ಲಿ (KGF) ಹಳೇ ವೈಭವ ಮರುಕಳಿಸಲಿದೆ ಅನ್ನೋ ಘೋಷಣೆಯನ್ನ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಮಾಡಿದ್ದಾರೆ.

ಕೋಲಾರದಲ್ಲಿ ಈ ಹಿಂದೆ ಐದು ಕ್ಷೇತ್ರಗಳಲ್ಲಿ ಹಿಡಿತ ಹೊಂದಿದ್ದ ಜೆಡಿಎಸ್ ಇತ್ತೀಚೆಗೆ ತನ್ನ ಬಲ ಕುಸಿತದಿಂದ ನೇಪತ್ಯಕ್ಕೆ ಸರಿದಿದೆ. ಈ ಮಧ್ಯೆ ಪಕ್ಷ ಸಂಘಟನೆಗೆ ಹೆಚ್ಚು ಹೊತ್ತು ನೀಡಿರುವ ಜೆಡಿಎಸ್ ಪಂಚರತ್ನ ಯಾತ್ರೆ ಆರಂಭಿಸಿದೆ. ಅದರಂತೆ ಇತ್ತೀಚೆಗೆ ಕೋಲಾರದ ಕೆಜಿಎಫ್ ನಲ್ಲಿ ಮತ್ತೆ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಅಭ್ಯರ್ಥಿ ಹುಡುಕಾಟದಲ್ಲಿದ್ದಾರೆ ದಳಪತಿಗಳು. ಕೆಜಿಎಫ್ ಕ್ಷೇತ್ರದಲ್ಲಿ ಹಿಂದೆ ದಿವಂಗತ ಭಕ್ತವತ್ಸಲಂ ಎರಡು ಭಾರಿ ಜೆಡಿಎಸ್ ಶಾಸಕರಾಗಿ ಆಯ್ಕೆಯಾಗಿದ್ದವರು. ಆದ್ರೆ ಅವರ ನಿಧನದ ನಂತರ ಕ್ಷೇತ್ರದಲ್ಲಿ ಜೆಡಿಎಸ್‌ಗೆ ನಾಯಕನಿಲ್ಲದೆ ಹಿನ್ನಡೆಯಾಗಿದೆ.

ಪರಿಣಾಮ ಈ ಬಾರಿ ಚುನಾವಣಾ ದೃಷ್ಟಿಯಿಂದ ಇತ್ತೀಚೆಗೆ ಕೆಜಿಎಫ್ ಗೆ ಆಗಮಿಸಿದ್ದ ಹೆಚ್‌ಡಿಕೆ ಕೆಜಿಎಫ್ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನ ಗೆಲ್ಲಿಸಿಕೊಡುವಂತೆ ಮನವಿ ಮಾಡಿದ್ದಾರೆ. ಜೆಡಿಎಸ್ ಟಿಕೇಟ್ ಅಭ್ಯರ್ಥಿ ಯಾರೆಂದು ಘೋಷಣೆ ಮಾಡದೆ ಈ ಬಾರಿ ಜೆಡಿಎಸ್‌ಗೆ ಅಧಿಕಾರ ಕೊಟ್ಟಿದ್ದೇ ಆದಲ್ಲಿ ಸ್ತ್ರೀಶಕ್ತಿ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಅಲ್ಲದೆ ಈ ಭಾಗದ ನಿರುದ್ಯೋಗ ಸೇರಿದಂತೆ ಹಲವು ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದ್ದಾರೆ. JDS golden offer for Labourers in KGF is at stake for Karnataka Assembly Elections 2023

ಇನ್ನು ಹೆಚ್ಚಾಗಿ ನಗರ ಭಾಗದಲ್ಲಿಯೇ ಮತದಾರರಿದ್ದು ಅದರಲ್ಲೂ ತಮಿಳು ಭಾಷಿಗರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇದೆ. ಹೀಗಾಗಿ ತಮಿಳು ಭಾಷಿಗರ ಮನಗೆಲ್ಲುವ ಅಭ್ಯರ್ಥಿಯನ್ನೆ ಆಯ್ಕೆ ಮಾಡಬೇಕಾದ ಅನಿವಾರ್ಯತೆ ಎಲ್ಲ ಪಕ್ಷಗಳಿಗೂ ಇದೆ. ಮಾತ್ರವಲ್ಲದೆ ಗ್ರಾಮೀಣ ಭಾಗ ಅಂದ್ರೆ ಬೇತಮಂಗಲ ಹಾಗೂ ಕ್ಯಾಸಂಬಳ್ಳಿ ಹೋಬಳಿಯಲ್ಲಿ ರೈತಾಪಿ ವರ್ಗ ಹೆಚ್ಚಾಗಿದ್ದು ಎರಡೂ ವರ್ಗಗಳ ಮತದಾರರನ್ನು ಸೆಳೆಯಬಲ್ಲ ಅಭ್ಯರ್ಥಿಯನ್ನ ಆಯ್ಕೆ ಮಾಡುವ ನಿಟ್ಟಿನಲ್ಲಿ ಉದ್ಯಮಿ ರಮೇಶ್ ಬಾಬು ತಮ್ಮ ಬೆಂಬಲಿಗರೊಂದಿಗೆ ನಗರದಲ್ಲಿ ಪಂಚ ರತ್ನ ಸಮಾವೇಶ ಆಯೋಜಿಸಿದ್ರೆ.

ವಕೀಲ ಸುರೇಶ್ ಎಂಬುವವರು ಸ್ಥಳೀಯರಿಗೆ ಟಿಕೇಟ್ ನೀಡಬೇಕು ಎಂದು ಬೆಂಬಲಿಗರು ಒತ್ತಾಯ ಮಾಡಿದ್ದಾರೆ. ಹಾಗಾಗಿ ಇಲ್ಲಿ ಅಭ್ಯರ್ಥಿ ಯಾರೆಂದು ಘೋಷಣೆ ಮಾಡದೆ, ಇಲ್ಲಿ ತಮಿಳು ಭಾಷಿಕರೇ ಹೆಚ್ಚಿದ್ದಿದ್ದೀರಿ. ಹಾಗಾಗಿ ತಮಿಳುನಾಡಿನ ರೀತಿಯಲ್ಲಿ ಪ್ರಾದೇಶಿಕ ಪಕ್ಷಕ್ಕೆ ಹೆಚ್ಚಿನ ಒತ್ತು ನೀಡಿ ಒಂದು ಭಾರಿ ಪ್ರಾದೇಶಿಕ ಪಕ್ಷ ಜೆಡಿಎಸ್​ಗೆ ಆದ್ಯತೆ ನೀಡಿದ್ದೇ ಆದಲ್ಲಿ ಕೆಜಿಎಫ್ ಗತ ವೈಭವವನ್ನ ಮರುಕಳಿಸುವಂತೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ಒಟ್ನಲ್ಲಿ ಕೆಜಿಎಫ್‌ನ ತಮಿಳು ಹಾಗೂ ಕಾರ್ಮಿಕ ವಲಯದ ಮೇಲೆ ಕಣ್ಣಿಟ್ಟಿರುವ ಹೆಚ್‌ಡಿಕೆ ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ಕೆಜಿಎಫ್ ಗತ ವೈಭವದ ಭರವಸೆ ನೀಡಿದ್ದಾರೆ. ಆದ್ರೆ ಕೇಂದ್ರ ಸರ್ಕಾರದ ಒಡೆತನದಲ್ಲಿರುವ ಚಿನ್ನದ ಗಣಿ ತೆರೆಯಲು ಪ್ರಾದೇಶಿಕ ಪಕ್ಷ ಜೆಡಿಎಸ್​ ಅಧಿಕಾರಕ್ಕೆ ಬಂದಲ್ಲಿ ಕೆಜಿಎಫ್ ಮತ್ತೆ ಹಿಂದಿನ ದಿನಗಳು ಮರುಕಳಿಸುತ್ತಾ ಅನ್ನೋ ಹತ್ತು ಹಲವು ಪ್ರಶ್ನೆಗಳು ಜನರನ್ನ ಕಾಡುತ್ತಿರೋದಂತೂ ಸುಳ್ಳಲ್ಲ. (ವರದಿ: ರಾಜೇಂದ್ರಸಿಂಹ, ಟಿವಿ 9, ಕೋಲಾರ)

ಇದನ್ನೂ ಓದಿ: ಸೆಕ್ಯೂರಿಟಿ ಸರ್ಕಸ್: ಕೋಮು ಸೌಹಾರ್ದ ಮಂಡಳಿ ಸದಸ್ಯಗೆ ಗನ್ ಮ್ಯಾನ್ ಭದ್ರತೆ ಕೊಟ್ಟ ಜಿಲ್ಲಾಡಳಿತ, ಜನಕ್ಕೆ ಅಚ್ಚರಿ!

Published On - 11:17 am, Sun, 11 December 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್