AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರಿನಲ್ಲಿ ಬಾಲಕನ ಅಪಹರಣ: ಯಶಸ್ವಿ ಕಾರ್ಯಾಚರಣೆ ನಡೆಸಿ, ವೈದ್ಯ ದಂಪತಿ ಮಗನನ್ನು ರಕ್ಷಿಸಿದ ಮೈಸೂರು ಪೊಲೀಸರು

ಮೈಸೂರಿನಲ್ಲಿ ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಕಮಿಷನರ್ ಡಾ ಚಂದ್ರಗುಪ್ತ ಪತ್ರಿಕಾಗೋಷ್ಠಿ ನಡೆಸಿ ನಮಗೆ ಸ್ಥಳೀಯರಿಂದ ಅಪಹರಣದ ಬಗ್ಗೆ ಮಾಹಿತಿ ದೊರೆತ್ತು. ಪ್ರಕರಣದ ಸಂಬಂಧ ಹಲವು ತಂಡಗಳನ್ನು ರಚನೆ ಮಾಡಿ ಕಾರ್ಯಾಚರಣೆ ಮಾಡಿದ ನಂತರ ಬಾಲಕನ ರಕ್ಷಣೆ ಮಾಡಲಾಗಿದೆ ಎಂದರು.

ಮೈಸೂರಿನಲ್ಲಿ ಬಾಲಕನ ಅಪಹರಣ: ಯಶಸ್ವಿ ಕಾರ್ಯಾಚರಣೆ ನಡೆಸಿ, ವೈದ್ಯ ದಂಪತಿ ಮಗನನ್ನು ರಕ್ಷಿಸಿದ ಮೈಸೂರು ಪೊಲೀಸರು
ಪ್ರಾತಿನಿಧಿಕ ಚಿತ್ರ
TV9 Web
| Updated By: ವಿವೇಕ ಬಿರಾದಾರ|

Updated on:Jun 25, 2022 | 5:07 PM

Share

ಮೈಸೂರು: ಮೈಸೂರಿನಲ್ಲಿ (Mysore) ಬಾಲಕನ ಅಪಹರಣ (Child Kidnap) ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಕಮಿಷನರ್ ಡಾ ಚಂದ್ರಗುಪ್ತ ಪತ್ರಿಕಾಗೋಷ್ಠಿ ನಡೆಸಿ ನಮಗೆ ಸ್ಥಳೀಯರಿಂದ ಅಪಹರಣದ ಬಗ್ಗೆ ಮಾಹಿತಿ ದೊರೆತ್ತು. ಪ್ರಕರಣದ ಸಂಬಂಧ ಹಲವು ತಂಡಗಳನ್ನು ರಚನೆ ಮಾಡಿ ಕಾರ್ಯಾಚರಣೆ ಮಾಡಿದ ನಂತರ ಬಾಲಕನ ರಕ್ಷಣೆ ಮಾಡಲಾಗಿದೆ. ಅದಾದ ಕೆಲವು ಗಂಟೆಗಳಲ್ಲಿ ಆರೋಪಿಗಳನ್ನು (Accused) ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು. ಸನು(23), ಕಿರಣ್​(20), ನಿತಿನ್​(21), ನಿಶಾಂತ್​(21) ಬಂಧಿತ ಆರೋಪಿಗಳು. ಪ್ರಮುಖ ಆರೋಪಿ ಚೇತನ್​(22)ಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಇದನ್ನು ಓದಿ: ಹುಷಾರ್ ಕಣ್ರೀ… ಬೈಕ್​ನಲ್ಲಿ ಬರುತ್ತಾರೆ, ಹಿಗ್ಗಾಮುಗ್ಗ ಥಳಿಸುತ್ತಾರೆ, ನಿಮ್ಮ ಬಳಿ ಇರೋದನ್ನ ಕಸಿದು ಹೋಗ್ತಾರೆ!

ಆರೋಪಿಗಳು ಗ್ರಾಮಾಂತರ ನಗರ ಭಾಗದವರಾಗಿದ್ದು, ಅದರಲ್ಲಿ ಒಬ್ಬ ಮಂಗಳೂರಿನವನಾಗಿದ್ದಾನೆ. ಹಲವು ದಿನಗಳಿಂದ ಅಪಹರಣಕ್ಕೆ ಸ್ಕೆಚ್ ಹಾಕಿ ಕೃತ್ಯ ಎಸಗಿದ್ದಾರೆ. ಪ್ರಮುಖ ಆರೋಪಿ ಬಾಲಕನ ಮನೆಯಲ್ಲೇ ಬಾಲಕನ  ತಾತನ ಆರೈಕೆ ಮಾಡುತ್ತಿದ್ದನು. ಒಟ್ಟು ಐದು ಜನರು ಅಪಹರಣ ಮಾಡಿದ್ದಾರೆ. ಅದರಲ್ಲಿ ನಾಲ್ಕು ಜನರ ಬಂಧನವಾಗಿದೆ. ಇಬ್ಬರು ಚಾಲಕರು ಇಬ್ಬರು ಡೇ ಕೇರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಮತ್ತೊಬ್ಬನಿಗೆ ಏನು ಕೆಲಸ ಇರಲಿಲ್ಲ ಎಂದರು.

ಇದನ್ನು ಓದಿ: ಏಕಾಏಕಿ ಹಂಪ್ ಎಗರಿಸಿದ ಕೆಎಸ್​ಆರ್​ಟಿಸಿ ಬಸ್​ ಚಾಲಕ: ಕೆಳಗೆ ಬಿದ್ದು ಕಾಲು ಮುರಿದುಕೊಂಡ ಕಂಡಕ್ಟರ್

ಐದು ಜನ ಒಬ್ಬರಿಗೊಬ್ಬರು ಪರಿಚಯದವರಾಗಿದ್ದು ಹಣದ ಅವಶ್ಯಕತೆಗಾಗಿ ಸಾಲ ಮಾಡಿ ಅಪಹರಣ ಮಾಡಿದ್ದಾರೆ. ಟಾರ್ಗೆಟ್ ಮಾಡಿ ಅಪಹರಣ ಮಾಡಲಾಗಿದ್ದು ಬಾಲಕನನ್ನು ಅವರೇ ಬಿಟ್ಟು ಹೋಗುವಂತೆ ಮಾಡಲಾಯಿತು. ಬಾಲಕನ ಮೇಲೆ ಯಾವುದೇ ಹಲ್ಲೆ ಮಾಡಿಲ್ಲ.  ಬಾಲಕನನ್ನು ಬಿಟ್ಟು ಹೋದ 12 ಗಂಟೆಯ ಒಳಗೆ ಆರೋಪಿಗಳನ್ನು ವಿರಾಜಪೇಟೆಯಲ್ಲಿ  ಬಂಧಿಸಲಾಗಿದೆ. ಅಪಹರಣಕ್ಕಾಗಿ ಬಳಸಿದ್ದ ಎರಡು ಕಾರು, ಮೊಬೈಲ್‌ನ್ನು ವಶಕ್ಕೆ ಪಡೆಯಲಾಗಿದೆ.

Published On - 5:07 pm, Sat, 25 June 22