ಅಪರೂಪ-ಅಮೂಲ್ಯ: ತಮಗೆ ಬಂದ ಲೈಬ್ರರಿ ಪ್ರಶಸ್ತಿಯನ್ನು ಸಹೋದ್ಯೋಗಿಗೆ ನೀಡಿ, ಮೌಲ್ಯ ಹೆಚ್ಚಿಸಿದ ಅಧಿಕಾರಿ!

Mysore District Library: ಲೈಬ್ರರಿ ಡೆಪ್ಯುಟಿ ಡೈರೆಕ್ಟರ್​​ ಬಿ ಮಂಜುನಾಥ್‌ ಅವರು 2023ನೇ ಸಾಲಿನ ಅತ್ಯುತ್ತಮ ಡಿಜಿಟಲ್ ಓದುಗರ ನೋಂದಣಿ ಪ್ರಶಸ್ತಿಗೆ ಭಾಜನರಾಗಿದ್ದರು. ಆದರೆ ಆ ಪ್ರಶಸ್ತಿಯನ್ನು ತಮ್ಮ ಸಹೋದ್ಯೋಗಿ ಪರಮೇಶ್ ಅವರಿಗೆ ನೀಡುವಂತೆ ಮಂಜುನಾಥ್‌ ಅವರು ಸಾರ್ವಜನಿಕೆ ಗ್ರಂಥಾಲಯ ಇಲಾಖೆಗೆ ಪತ್ರ ಬರೆದು ಕೋರಿದರು.

ಅಪರೂಪ-ಅಮೂಲ್ಯ: ತಮಗೆ ಬಂದ ಲೈಬ್ರರಿ ಪ್ರಶಸ್ತಿಯನ್ನು ಸಹೋದ್ಯೋಗಿಗೆ ನೀಡಿ, ಮೌಲ್ಯ ಹೆಚ್ಚಿಸಿದ ಅಧಿಕಾರಿ!
ಲೈಬ್ರರಿ ಡೆಪ್ಯುಟಿ ಡೈರೆಕ್ಟರ್​​ ಬಿ ಮಂಜುನಾಥ್‌ ಮತ್ತು ಪರಮೇಶ್
Follow us
ರಾಮ್​, ಮೈಸೂರು
| Updated By: ಸಾಧು ಶ್ರೀನಾಥ್​

Updated on: Aug 12, 2023 | 10:01 AM

ಮೈಸೂರು, ಆಗಸ್ಟ್​ 12: ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಮಗೆ ಒಲಿದು ಬಂದ ಪ್ರಶಸ್ತಿಯನ್ನು ತಮ್ಮ ಸಹೋದ್ಯೋಗಿಗೆ ನೀಡಿ, ಪ್ರಶಸ್ತಿಯ ಮೌಲ್ಯ ಮತ್ತು ಮಹತ್ವವನ್ನು ಹೆಚ್ಚಿಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ಅಧಿಕಾರಿಯ ನಡೆಗೆ ಪ್ರಶಂಸೆ ವ್ಯಕ್ತವಾಗಿದೆ. ಮೈಸೂರಿನಲ್ಲಿ ಈ ಅಪರೂಪದ ಪ್ರಕರಣ ನಡೆದಿದೆ. ಮೈಸೂರು (Mysore) ಜಿಲ್ಲಾ ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕರಾದ ಬಿ ಮಂಜುನಾಥ್ ಅವರು ತಮಗೆ ಬಂದ ಪ್ರಶಸ್ತಿಯನ್ನು (Library Award) ಸಹೋದ್ಯೋಗಿಗೆ (Colleague) ನೀಡಿ, ಅವರ ಸೇವಾ ಕಾರ್ಯವನ್ನು ಗೌರವಿಸಿದ್ದಾರೆ.

ಲೈಬ್ರರಿ ಡೆಪ್ಯುಟಿ ಡೈರೆಕ್ಟರ್​​ ಬಿ ಮಂಜುನಾಥ್‌ ಅವರು 2023ನೇ ಸಾಲಿನ ಅತ್ಯುತ್ತಮ ಡಿಜಿಟಲ್ ಓದುಗರ ನೋಂದಣಿ ಪ್ರಶಸ್ತಿಗೆ ಭಾಜನರಾಗಿದ್ದರು. ಆದರೆ ಆ ಪ್ರಶಸ್ತಿಯನ್ನು ತಮ್ಮ ಸಹೋದ್ಯೋಗಿ ಪರಮೇಶ್ ಅವರಿಗೆ ನೀಡುವಂತೆ ಮಂಜುನಾಥ್‌ ಅವರು ಸಾರ್ವಜನಿಕೆ ಗ್ರಂಥಾಲಯ ಇಲಾಖೆಗೆ ಪತ್ರ ಬರೆದು ಕೋರಿದರು. ಅಂದಹಾಗೆ ಪರಮೇಶ್ ಅವರು ಹೆಚ್ ಡಿ ಕೋಟೆ ಗ್ರಂಥಾಲಯ ಪ್ರಭಾರ ಅಧಿಕಾರಿಯಾಗಿದ್ದಾರೆ.

ಲೈಬ್ರರಿ ಪ್ರಶಸ್ತಿ ವರ್ಗಾಯಿಸಿಕೊಂಡ ಪರಮೇಶ್ ಅವರ ಸಾಧನೆ ಏನು ಗೊತ್ತಾ?

ಇನ್ನು, ಪರಮೇಶ್ ಅವರ ಸಾಧನೆಯೇನೆಂದರೆ ಒಟ್ಟು 23 ಲಕ್ಷ ನೋಂದಣಿಯಲ್ಲಿ 12 ಲಕ್ಷ ನೋಂದಣಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪರಮೇಶ್‌ ಅವರಿಗೆ ಪ್ರಶಸ್ತಿಯನ್ನು ವರ್ಗಾಯಿಸಲು ಹಿರಿಯ ಅಧಿಕಾರಿ ಮಂಜುನಾಥ್‌ ಕೋರಿದ್ದರು. ಬಿ ಮಂಜುನಾಥ್ ಅವರು 2015ರಲ್ಲಿಯೂ ಇದೇ ಪ್ರಶಸ್ತಿಗೆ ಭಾಜನರಾಗಿದ್ದರು ಎಂಬುದು ಗಮನಾರ್ಹ. ಮಂಜುನಾಥ್ ಅವರ ನಿರ್ಧಾರಕ್ಕೆ ಈಗ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಮೈಸೂರು ಜಿಲ್ಲೆಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ