Suttur Jatra Mahotsava 2023: ಜ.18 ರಿಂದ 23ರವರೆಗೆ 6 ದಿನಗಳ ಕಾಲ ಸುಕ್ಷೇತ್ರ ಸುತ್ತೂರು ಜಾತ್ರೆ
ಸುತ್ತೂರು ಜಾತ್ರೆ: ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಪಿಲಾ ನದಿ ತೀರದಲ್ಲಿರುವ ಸುಕ್ಷೇತ್ರ ಸುತ್ತೂರು ಜಾತ್ರೆ ಜನವರಿ.18 ರಿಂದ 6 ದಿನಗಳ ಕಾಲ ನಡೆಯಲಿದೆ.
ಮೈಸೂರು: ನಾಡಿನ ಪ್ರಸಿದ್ಧ ಯಾತ್ರೆಗಳಲ್ಲಿ ಒಂದಾದ ಮೈಸೂರು (Mysore) ಜಿಲ್ಲೆಯ ನಂಜನಗೂಡು (Nanjangudu) ತಾಲ್ಲೂಕಿನ ಕಪಿಲಾ ನದಿ ತೀರದಲ್ಲಿರುವ ಸುಕ್ಷೇತ್ರ ಸುತ್ತೂರು ಜಾತ್ರೆ (Sattur Fair) ನಾಳೆ (ಜನವರಿ.18) ರಿಂದ 6 ದಿನಗಳ ಕಾಲ ನಡೆಯಲಿದೆ. ಕೊರೊನಾ (Covid) ಕಾರಣದಿಂದ 2 ವರ್ಷ ಜಾತ್ರಾ ಮಹೋತ್ಸವವನ್ನು ಸರಳವಾಗಿ ಆಚರಿಸಲಾಗಿತ್ತು. ಆದರೆ ಈ ಬಾರಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದು, ಜ.18 ರಿಂದ 23ರವರೆಗೆ 6 ದಿನಗಳ ಕಾಲ ಜಾತ್ರೆ ನಡೆಯಲಿದೆ. ಇನ್ನು ವೈಭವದ ಜಾತ್ರೆಗಾಗಿ ಸಕಲ ಸಿದ್ಧತೆ ನಡೆಯುತ್ತಿದ್ದು, ಲಕ್ಷಾಂತರ ಭಕ್ತರಿಗೆ ದಾಸೋಹವಿರಲಿದೆ.
ಈ ಜಾತ್ರೆಯ ವಿಶೇಷತೆಗಳೆಂದರೇ ಕೃಷಿ ಮೇಳ, ಸಾಂಸ್ಕೃತಿಕ ಮೇಳ, ವಸ್ತು ಪ್ರದರ್ಶನ, ತೆಪ್ಪೋತ್ಸವ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿದೆ. ಹಾಗೇ ಸಾಮೂಹಿಕ ವಿವಾಹ, ಹಾಲರವಿ ಉತ್ಸವ, ರಥೋತ್ಸವ, ಮಹದೇಶ್ವರ ಕೊಂಡೋತ್ಸವ, ಲಕ್ಷದೀಪೋತ್ಸವ, ಶ್ರೀವೀರಭದ್ರೇಶ್ವರ ಕೊಂಡೋತ್ಸವ, ಧಾರ್ಮಿಕ ಕಾರ್ಯಕ್ರಮಗಳು, ವೈವಿಧ್ಯಮಯ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಗಳು ನಡೆಯಲಿವೆ.
ಇದನ್ನೂ ಓದಿ: ಸರ್ವಧರ್ಮ ಸಮನ್ವಯದ ಸಂಕ್ರಾಂತಿ ಆಚರಣೆ; ಹಾಲಕೆರೆ ಮಠದ ಆನಂದಾಶ್ರಮದಲ್ಲಿ ಇಸ್ಲಾಂ ಧರ್ಮದವರಿಂದ ದಾಸೋಹ
ಈ ಜಾತ್ರೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಹೆಚ್.ಡಿ ಕುಮಾರಸ್ವಾಮಿ, ಜಗದೀಶ್ ಶೆಟ್ಟರ್, ಕೇಂದ್ರ ಮಾಜಿ ಸಚಿವ ಡಿ.ವಿ.ಸದಾನಂದಗೌಡ ಮತ್ತು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಸೇರಿದಂತೆ ರಾಜ್ಯ ಮತ್ತು ಕೇಂದ್ರ ಸಚಿವರು ಭಾಗಿಯಾಗಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:08 am, Tue, 17 January 23