Santro Ravi Case: ಮಹಿಳೆಯರಿಗೆ ಮತ್ತು ಬರಿಸುವ ಔಷಧಿ ಬೆರೆಸುತ್ತಿದ್ದ ಸ್ಯಾಂಟ್ರೋ ರವಿ ಆಪ್ತ ಪೊಲೀಸರ ವಶಕ್ಕೆ

ಉದ್ಯಮಿ ಸ್ಯಾಂಟ್ರೋ ರವಿ ವಿರುದ್ಧ ವಂಚನೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ರವಿ ಆಪ್ತನನ್ನು ವಶಕ್ಕೆ ಪಡೆದಿದ್ದಾರೆ.

Santro Ravi Case: ಮಹಿಳೆಯರಿಗೆ ಮತ್ತು ಬರಿಸುವ ಔಷಧಿ ಬೆರೆಸುತ್ತಿದ್ದ ಸ್ಯಾಂಟ್ರೋ ರವಿ  ಆಪ್ತ ಪೊಲೀಸರ ವಶಕ್ಕೆ
ಸ್ಯಾಂಟ್ರೋ ರವಿ
Follow us
TV9 Web
| Updated By: Rakesh Nayak Manchi

Updated on:Jan 09, 2023 | 11:18 AM

ಮೈಸೂರು: ಉದ್ಯಮಿ ಸ್ಯಾಂಟ್ರೋ ರವಿ (Santro Ravi) ವಿರುದ್ಧ ದಾಖಲಾದ ವಂಚನೆ ಪ್ರಕರಣ ಸಂಬಂಧ ಸ್ಯಾಂಟ್ರೋ ರವಿ ಆಪ್ತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಿಳೆಗೆ ಮತ್ತು ಬರಿಸುವ ಔಷಧಿ ಬೆರೆಸಿದ್ದ ಆರೋಪದ ಮೇಲೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ಪೊಲೀಸರ ತಂಡ ರವಿ ಆಪ್ತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇನ್ನೊಂದೆಡೆ, ಸ್ಯಾಂಟ್ರೋ ರವಿಗೆ ಮಹಿಳೆಯ ಜೊತೆ ಮದುವೆ ಮಾಡಿಸಿದ್ದ ಪುರೋಹಿತರನ್ನು ಕೂಡ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಸ್ಯಾಂಟ್ರೋ ರವಿ ಹೆಸರು ರಾಜ್ಯದಲ್ಲಿ ಭಾರೀ ಸುದ್ದು ಮಾಡುತ್ತಿದೆ. ಸ್ಯಾಂಟ್ರೋ ರವಿಯ ಲೀಲೆಗಳು ಒಂದಲ್ಲ ಎರಡಲ್ಲ, ಬಗೆದಷ್ಟೂ ಈ ಶೋಕಿಲಾಲನ ರೋಚಕ ಭಯಾನಕ ಮುಖ ತೆರೆದುಕೊಳ್ಳುತ್ತಲೇ ಇದೆ. ಮೊಬೈಲ್‌ ಫೋನಲ್ಲೇ ಚೆಂದದ ಯುವತಿಯರು ಬುಕಿಂಗ್ ಆಗ್ತಿದ್ರೆ, ದೊಡ್ಡ ದೊಡ್ಡ ಬಂಗಲೆ, ಡ್ಯೂಪ್ಲೆಕ್ಸ್‌ ಮನೆಗಳು, ಪೆಂಟ್‌ಹೌಸ್‌ಗಳು, ವಿಲ್ಲಾಗಳು ಹೀಗೆ, ಐಷಾರಾಮಿ ಮನೆಗಳನ್ನ ಬಾಡಿಗೆ ಪಡೀತಿದ್ದನಂತೆ. ಇಂತಹ ಮನೆಗಳನ್ನೇ ವೇಶ್ಯಾವಾಟಿಕೆ ಅಡ್ಡೆ ಮಾಡಿಕೊಳ್ಳುತ್ತಿದ್ದನು.

ಇದನ್ನೂ ಓದಿ: Santro Ravi: ತಲೆ ಮರೆಸಿಕೊಂಡಿರೊ ಸ್ಯಾಂಟ್ರೋ ರವಿ ಹಾದಿ ಮತ್ತಷ್ಟು ಕಠಿಣ, ನ್ಯಾಯಾಧೀಶರ ಮುಂದೆ‌ ಮಹಿಳೆ 164 ಹೇಳಿಕೆ ದಾಖಲು

ಈತನ ಈ ಕತ್ತಲ ಲೋಕಕ್ಕೆ ದೇಶ ವಿದೇಶಗಳಿಂದಲೂ ಹುಡುಗಿಯರು ಸಪ್ಲೈ ಆಗುತ್ತಿದ್ದರು. ತನ್ನ ಕಸ್ಟಮರ್‌ಗಳಿಗೆ ಸರ್ವಿಸ್‌ ಕೊಡಲು ಬರೀ ಲೋಕಲ್‌ ಹುಡುಗಿಯರು ಮಾತ್ರವಲ್ಲ, ರಷ್ಯಾ ಮತ್ತು ಇರಾನ್‌, ದೆಹಲಿ, ಮುಂಬೈ ಕೋಲ್ಕತ್ತಾದಿಂದಲೂ ಕರೆಸಿಕೊಳ್ಳುತ್ತದ್ದ ಎಂಬ ಮಾಹಿತಿ ಇದೆ. ತನ್ನ ಕೆಲಸಗಳಿಗೆ ಸಹಕರಿಸಿದ ಯುವತಿಯರಿಗೆ ದುಬಾರಿ ಗಿಫ್ಟ್‌ಗಳನ್ನೂ ಕೊಡುತ್ತಿದ್ದನಂತೆ, ಅಕ್ರಮವಾಗಿ ಹಣ ಸಂಪಾದಿಸುವುದು ಮಾತ್ರವಲ್ಲದೆ ಆ ಹಣದಿಂದ ಶೋಕಿ ಕೋಡ ಮಾಡುತ್ತಿದ್ದ ಶೋಕಿವಾಲ ಕೂಡ ಆಗಿದ್ದಾನೆ. ಕಂತೆ ಕಂತೆ ನೋಟಿನ ಕಟ್ಟುಗಳ ಫೋಟೋಗಳು, ವಿಡಿಯೋಗಳನ್ನ, ಕಾರು ಬಂಗಲೆಗಳ ಫೋಟೋಗಳನ್ನು ಕೂಡ ವಾಟ್ಸಾಪ್‌ನಲ್ಲಿ ಶೇರ್‌ ಮಾಡುತ್ತಿದ್ದ.

ಇದನ್ನೂ ಓದಿ: ಕೊಡಗಿನ ಹುಡುಗಿ.. ವಿಜಯಲಕ್ಷ್ಮೀ.. ಚಿನ್ನು.. ಬಂಗಾರ: ಬಗೆದಷ್ಟು ಬಯಲಾಗುತ್ತಿವೆ ಸ್ಯಾಂಟ್ರೋ ರವಿಯ ಲೀಲೆಗಳು

ವಿವಾದದಲ್ಲಿ ಹೆಸರು ಹೊರಬರುತ್ತಿದ್ದಂತೆ ಸ್ಯಾಂಟ್ರೋ ರವಿ ನಾಪತ್ತೆಯಾಗಿದ್ದಾನೆ. 7 ದಿನಗಳು ಕಳೆದರೂ ಸ್ಯಾಂಟ್ರೋ ರವಿ ಪತ್ತೆಯಿಲ್ಲ. ಇನ್ನೊಂದೆಡೆ ಸ್ಯಾಂಟ್ರೋ ರವಿ ಪತ್ನಿ ಮೈಸೂರಿನ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದಲ್ಲಿ 164ರ ಅಡಿ ಹೇಳಿಕೆ ದಾಖಲಿಸಿದ್ದಾರೆ.. ಇದ್ರಿಂದ ಜಾಮೀನು ಅರ್ಜಿಗೆ ಕಾಯ್ತಿರುವ ಸ್ಯಾಂಟ್ರೋ ರವಿಗೆ ಕಷ್ಟವಾಗಬಹುದು ಎಂದೇ ಹೇಳಲಾಗುತ್ತಿದೆ. ಮತ್ತೊಂದೆಡೆ ಪೊಲೀಸರು ಕೂಡ ಸ್ಯಾಂಟ್ರೋ ರವಿ ಬಂಧನಕ್ಕೆ ಬಲೆ ಬೀಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:29 am, Mon, 9 January 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್