ಮೈಸೂರು, ನವೆಂಬರ್ 07: ಜಿಲ್ಲೆಯಲ್ಲಿ ಕಾಡು ಪ್ರಾಣಿ ಮತ್ತು ಮಾನವ ಸಂಘರ್ಷ ಮುಂದುವರೆದಿದ್ದು, ಕಾಡಾನೆಗಳ ದಾಳಿ (Elephant) ಅಪಾರ ಪ್ರಮಾಣದ ಬೆಳೆ ನಾಶವಾಗಿರುವಂತಹ ಘಟನೆ ಹೆಚ್ಡಿ ಕೋಟೆ ತಾಲ್ಲೂಕಿನ ನಾಗರಹೊಳೆ ಅಭಯಾರಣ್ಯದ ವೀರನ ಹೊಸಹಳ್ಳಿ ವಲಯದ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ. ಕಾಡಾನೆಗಳ ಹಿಂಡು ದಾಳಿ ಮಾಡಿದ್ದರಿಂದ ಸುರೇಶ್ ಎಂಬುವವರ ಎರಡು ಎಕರೆ ಬಾಳೆ, ರೈತ ಸಿದ್ದನಾಯಕ ಎಂಬುವವರ ಒಂದು ಎಕರೆ ಕಬ್ಬು ನಾಶವಾಗಿದೆ. ಸ್ಥಳಕ್ಕೆ ಬಾರದ ಅರಣ್ಯ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ,
ಕಾಡು ಪ್ರಾಣಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹುಲಿ ಹಾಗೂ ಆನೆಯ ದಾಳಿಗೆ ಜನ ಜಾನುವಾರು ಸಾವನ್ನಪ್ಪಿತ್ತಿವೆ. ಜೊತೆಗೆ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಉಂಟಾಗಿದೆ. ಅರಣ್ಯ ಇಲಾಖೆ ಸೂಕ್ತ ಕಾವಲುಗಾರರನ್ನ ನೇಮಿಸುತ್ತಿಲ್ಲ. ಕಾವಲುಗಾರರು ಇರದ ಕಾರಣ ಈ ರೀತಿಯಾಗುತ್ತಿದೆ. ಸುಮಾರು 3 ಲಕ್ಷ ರೂ ಖರ್ಚು ಮಾಡಿ ಬೆಳೆ ಬೆಳೆದಿದ್ದು, ಆನೆಗಳ ದಾಳಿಯಿಂದ ಸಂಪೂರ್ಣ ಹಾನಿ ಆಗಿದೆ.
ಇದನ್ನೂ ಓದಿ: ಬೆಂಗಳೂರು: ಜಿಂಕೆ ಕೊಂಬು, ಆನೆ ದಂತ, ಎರಡು ತಲೆ ಹಾವು ಸೇಲ್ ಮಾಡುತ್ತಿದ್ದ ಐವರು ಅರೆಸ್ಟ್
ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು. ಕಾಡು ಪ್ರಾಣಿಗಳ ಉಪಟಳವನ್ನು ಶಾಶ್ವತವಾಗಿ ತಪ್ಪಿಸಬೇಕು ಎಂದು ರೈತರು ಮತ್ತು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಹಾಸನ: ಜಿಲ್ಲೆಯ ಎಲ್ಲೆಡೆ ತೀವ್ರ ಬರಗಾಲ ಆವರಿಸಿದೆ. ರೈತರು ಬೆಳೆದ ಬೆಳೆಗಳೆಲ್ಲಾ ಒಣಗಿ ಹೋಗಿದ್ದು, ಪರಿಹಾರಕ್ಕಾಗಿ ಅನ್ನದಾತರು ಸರ್ಕಾರದ ಕಡೆ ಮುಖಮಾಡಿದ್ದಾರೆ. ಇದರ ನಡುವೆಯೂ ಪಂಪ್ ಸೆಟ್ ಮೂಲಕವೋ, ಕೆಲವೆಡೆ ಕಾಡಂಚಿನ ಭಾಗದಲ್ಲಿ ಸುರಿದ ಮಳೆಯಿಂದ ಅಳಿದುಳಿದ ಬೆಳೆಗಳಿಗೂ ಇದೀಗ ಸಂಚಕಾರ ಎದುರಾಗಿದೆ.
ಇದನ್ನೂ ಓದಿ: ಕೂಡ್ಲು ಜನತೆಗೆ ಮತ್ತೆ ಚಿರತೆ ಕಾಟ; ಎಂಎಸ್ ದೋನಿ ಸ್ಕೂಲ್ ಬಳಿ ಪ್ರತ್ಯಕ್ಷ, ಜನರಲ್ಲಿ ಆತಂಕ
ಹಿಂಡು ಹಿಂಡಾಗಿ ದಾಳಿ ಮಾಡುತ್ತಿರುವ ಗಜಪಡೆ ಕಾಫಿ, ಮೆಣಸು, ಬಾಳೆ, ಅಡಿಕೆ, ಶುಂಠಿ, ಜೋಳದ ಬೆಳೆಗಳನ್ನು ಧ್ವಂಸ ಮಾಡುತ್ತಿವೆ. ರಾತ್ರೋ ರಾತ್ರಿ ದಾಳಿಯಿಡುವ ಆನೆಗಳ ಹಿಂಡು ಬೆಳೆಯನ್ನ ತಿಂದು ಹಗಲಿನಲ್ಲಿ ಕಾಫಿತೋಟದಲ್ಲಿ ವಿಹಾರ ಮಾಡುತ್ತಾ ದಿನ ಕಳೆಯುತ್ತಿದ್ದು ಜನರು ಬೆಳೆ ಕಳೆದುಕೊಳ್ಳೋ ಜೊತೆಗೆ ಜೀವ ಭಯದಲ್ಲಿ ದಿನ ದೂಡುವಂತಾಗಿದ್ದು ಕಾಡಾನೆಗಳ ಸ್ಥಾಳಾಂತರಕ್ಕೆ ಆಗ್ರಹಿಸಿದ್ದಾರೆ.
ಅರೆಹಳ್ಳೀ ಭಾಗದಲ್ಲಿ 22ಕ್ಕೂ ಹೆಚ್ಚು ಆನೆಗಳು ಜೋಳದ ಬೆಳೆಯನ್ನ ನಾಶ ಮಾಡುತ್ತಿವೆ. ಗಜಪಡೆಯ ಆರ್ಭಟಕ್ಕೆ ಬಾಳೆ, ಶುಂಟಿ ನೆಲಕಚ್ಚುತ್ತಿವೆ. ಎರಡು ದಶಕಗಳಿಂದ ನಿರಂತರವಾಗಿ ಕಾಡಾನೆ ಸಮಸ್ಯೆ ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು ಭಾಗದ ಜನರನ್ನು ಕಂಗೆಡಿಸಿದೆ. ಈಗ ಆಹಾರ ಅರಸಿ ಜೋಳದ ಬೆಳೆಯನ್ನ ಹುಡುಕಿ ಬರ್ತಿರೊ ಗಜಪಡೆಗಳ ಅಟ್ಟಹಾಸಕ್ಕೆ ಜನರು ನಲುಗಿ ಹೋಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:40 pm, Tue, 7 November 23