ಮೈಸೂರಿನಲ್ಲಿ ಹುಲಿ ದಾಳಿಗೆ ಮತ್ತೊಂದು ಬಲಿ: ವ್ಯಾಘ್ರನ ಬಂಧನಕ್ಕೆ ಮುಂದುವರೆದ ಶೋಧ ಕಾರ್ಯ

ಮೈಸೂರಿನಲ್ಲಿ ಹುಲಿ ದಾಳಿ ಕಾಟ ಹೆಚ್ಚಾಗಿದೆ. ನಿನ್ನೆ ಹುಲಿ ದಾಳಿಗೆ ಮತ್ತೋರ್ವ ರೈತ ಬಲಿಯಾಗಿದ್ದಾನೆ. ಅರಣ್ಯ ಇಲಾಖೆ ಸಿಬ್ಬಂದಿ ಆದಷ್ಟು ಬೇಗ ಹುಲಿ ಹಿಡಿಯುವಂತೆ ಗ್ರಾಮಸ್ಥರು ಒತ್ತಡ ಹಾಕುತ್ತಿದ್ದು ಶೋಧ ಕಾರ್ಯ ಮುಂದುವರೆದಿದೆ. ಹುಲಿ ಒಂದು ದಿನ ಬಂಡೀಪುರ ಕಾಡಿನಲ್ಲಿದ್ರೆ‌ ಮತ್ತೊಂದು ದಿನ ಕಾಡಂಚಿನ ಪ್ರದೇಶದ ಜಮೀನಲ್ಲಿ ಕಾಣಿಸಿಕೊಳ್ಳುತ್ತಿದೆ. ಸದ್ಯ ಇದಕ್ಕಾಗಿ ಇಲಾಖೆ ಸಿಬ್ಬಂದಿಗಳು 30 ಕ್ಕು ಹೆಚ್ಚು ಕ್ಯಾಮರಾ ಟ್ರಾಪ್ ಗಳನ್ಜು ಅಳವಡಿಸಿ ಹುಲಿ ಜಾಡು ಹಿಡಿಯಲು ಮುಂದಾಗಿದ್ದಾರೆ.

ಮೈಸೂರಿನಲ್ಲಿ ಹುಲಿ ದಾಳಿಗೆ ಮತ್ತೊಂದು ಬಲಿ: ವ್ಯಾಘ್ರನ ಬಂಧನಕ್ಕೆ ಮುಂದುವರೆದ ಶೋಧ ಕಾರ್ಯ
ಬಾಲಾಜಿ ನಾಯಕ್
Follow us
| Updated By: ಆಯೇಷಾ ಬಾನು

Updated on: Nov 07, 2023 | 10:17 AM

ಮೈಸೂರು, ನ.07: ಮೈಸೂರಿನ್ಲಲಿ ಮಾನವ ಪ್ರಾಣಿ ಸಂಘರ್ಷ ಮುಂದುವರೆದಿದೆ. ಇತ್ತೀಚೆಗೆ ಜಿಲ್ಲೆಯ ನಂಜನಗೂಡು ತಾಲೂಕಿನ‌ ಮಹದೇವನಗರದಲ್ಲಿ ಜಾನುವಾರು ಮೇಲೆ ದಾಳಿ ಮಾಡಿ ರಕ್ಷಣೆಗೆ ಹೋದ ವೀರಭದ್ರ ಬೋವಿ ಎಂಬ ರೈತನ ಮೇಲೆ ಹುಲಿ ದಾಳಿ (Tiger Attack) ನಡೆಸಿತ್ತು. ಈಗ ಇದೇ ರೀತಿಯ ಘಟನೆ ಮರುಕಳಿಸಿದೆ. ಮತ್ತೊಂದೆಡೆ ನಿನ್ನೆ ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿಯಿಂದ ಮತ್ತೋರ್ವ ರೈತ ಪ್ರಾಣ (Death) ಕಳೆದುಕೊಂಡಿದ್ದಾನೆ. ರೈತ ಬಾಲಾಜಿ ನಾಯಕ್ (42) ಹುಲಿ ದಾಳಿಗೆ ಬಲಿಯಾಗಿದ್ದು ಹುಲಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಬಿ.ಮಟಕೆರೆ-ಹೊಸಕೋಟೆ ರಸ್ತೆಯಲ್ಲಿ ನಿನ್ನೆ ದನ ಮೇಯಿಸುವಾಗ ಹುಲಿ ದನಗಳ ಮೇಲೆ ದಾಳಿ ಮಾಡಿತ್ತು. ಆಗ ದನಗಳು ಹುಲಿಗೆ ಸಿಗದೆ ಚೆಲ್ಲಾ ಪಿಲ್ಲಿಯಾಗಿ ಓಡಿದವು. ದನಗಳು ಸಿಗದ ಹಿನ್ನೆಲೆ ಬಾಲಾಜಿ ಮೇಲೆ ಹುಲಿ ದಾಳಿ ನಡೆಸಿತ್ತು. ಬಳಿಕ ಮೃತದೇಹ ಕಾಡಿಗೆ ಎಳೆದುಕೊಂಡು ಹೋಗಿತ್ತು. ಇದನ್ನು ಗಮನಿಸಿದ ಅಕ್ಕ ಪಕ್ಕದ ಜಮೀನಿನವರು ಕೂಗಾಡಿದ್ದು ಶಬ್ದ ಕೇಳಿ ಮೃತದೇಹ ಬಿಟ್ಟು ಹುಲಿ ಓಡಿ ಹೋಗಿತ್ತು. ಹುಲಿಯು ರೈತನ ಒಂದು ಕಾಲು, ದೇಹದ ಕೆಲ ಭಾಗ ತಿಂದು ಹಾಕಿದೆ. ಮತ್ತೆ ಅದೇ ಸ್ಥಳಕ್ಕೆ ಹುಲಿ ಬರುವ ಸಾಧ್ಯತೆ ಹಿನ್ನೆಲೆ ಅರಣ್ಯ ಇಲಾಖೆ ಅಲರ್ಟ್ ಆಗಿದೆ. ಹುಲಿ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದೆ.

ಇದನ್ನೂ ಓದಿ: ಮೈಸೂರು: ಹುಲಿ ಸೆರೆಗಾಗಿ ಕಾರ್ಯಾಚರಣೆಗಿಳಿದ ವಿಶೇಷ ತಂಡ: 6 ಸಿಸಿ ಕ್ಯಾಮರಾ ಅಳವಡಿಸಿದ ಅರಣ್ಯ ಇಲಾಖೆ

ಹುಲಿ ದಾಳಿಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಹಶೀಲ್ದಾರ್ ಪರಶಿವಮೂರ್ತಿ, ಪಿಎಸ್‌ಐ ನಂದೀಶ್‌ ಕುಮಾರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಪೊಲೀಸ್ ಸಿಬ್ಬಂದಿಗಳಾದ ನಾಗನಾಯಕ, ಇಮ್ರಾನ್ ಅಹಮದ್ಮ ಕೃಷ್ಣ, ಆನಂದ್, ಬಿ.ಮಟಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಜಿ.ಅಜಿತ್‌ಕುಮಾರ್, ಸದಸ್ಯರಾದ ದೇವದಾಸ್, ಕುರ್ಣೇಗಾಲ ಬೆಟ್ಟಸ್ವಾಮಿ, ಕೃಷ್ಣ, ಮುಖಂಡರಾದ ನಾರಾಯಣ ನಾಯ್ಕ, ಹೇಮಾಜಿನಾಯ್ಕ, ರಮೇಶ್, ರಾಮು, ಚಂದ್ರ, ಶಿವಾಜಿ ನಾಯ್ಕ, ಸುಂದರ, ಸುರೇಶ್, ಸಿದ್ದಯ್ಯ ಹಾಜರಿದ್ದರು. ಮೈಸೂರು ಅರಣ್ಯ ಅಧಿಕಾರಿಗಳಿಗೆ ಹುಲಿ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ರಾಂಪುರ ಕ್ಯಾಂಪ್ ನಿಂದ ಬಂದ ಪಾರ್ಥ ಹಾಗೂ ಧರ್ಮ ಆನೆಗಳ ಮೂಲಕ ಹುಲಿ ಕೂಂಬಿಂಗ್ ನಡೆಯುತ್ತಿದೆ. ಕಾಡಂಚಿನ ವಿವಿಧ ಗ್ರಾಮಗಳ ಜಮೀನಿನಲ್ಲಿ ಹುಲಿ ಓಡಾಟ ಶುರುಮಾಡಿದೆ ಎಂಬ ಮಾಹಿತಿ ಸಿಕ್ಕಿದ್ದು ಒಂದು ಕಡೆ ಹೆಜ್ಜೆ ಗುರುತು ಕಾಣಿಸಿದೆ ಅಂತ ಸಿಬ್ಬಂದಿಗಳು ಆ ಸ್ಥಳಕ್ಕೆ ಹೋದ್ರೆ ಮತ್ತೊಂದು ಸ್ಥಳದಲ್ಲಿ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದೆ. ಹುಲಿ ಒಂದು ದಿನ ಬಂಡೀಪುರ ಕಾಡಿನಲ್ಲಿದ್ರೆ‌ ಮತ್ತೊಂದು ದಿನ ಕಾಡಂಚಿನ ಪ್ರದೇಶದ ಜಮೀನಲ್ಲಿ ಕಾಣಿಸಿಕೊಳ್ಳುತ್ತಿದೆ. ಸದ್ಯ ಇದಕ್ಕಾಗಿ ಇಲಾಖೆ ಸಿಬ್ಬಂದಿಗಳು 30 ಕ್ಕು ಹೆಚ್ಚು ಕ್ಯಾಮರಾ ಟ್ರಾಪ್ ಗಳನ್ಜು ಅಳವಡಿಸಿ ಹುಲಿ ಜಾಡು ಹಿಡಿಯಲು ಮುಂದಾಗಿದ್ದಾರೆ. ಮೈಸೂರಿನ ಜನರಿಗೆ ಹುಲಿ ಕಾಟ ಹೆಚ್ಚಾಗಿದ್ದು ಪ್ರತಿ ದಿನ ದನಮ ಮೇಕೆ, ಮನುಷ್ಯರ ಮೇಲೆ ಹುಲಿ ದಾಳಿ ನಡೆಸುತ್ತಿದೆ.

ಮೈಸೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Daily Devotional: ನಂಬಿಕೆ ದ್ರೋಹ ಮಾಡಿದ್ರೆ ಪರಿಣಾಮ ಹೇಗಿರುತ್ತೆ ಗೊತ್ತಾ?
Daily Devotional: ನಂಬಿಕೆ ದ್ರೋಹ ಮಾಡಿದ್ರೆ ಪರಿಣಾಮ ಹೇಗಿರುತ್ತೆ ಗೊತ್ತಾ?
ನವರಾತ್ರಿಯ 2ನೇ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
ನವರಾತ್ರಿಯ 2ನೇ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
ದೆಹಲಿಯ ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು
ದೆಹಲಿಯ ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?