2024ರ ಲಾ‌ಗೈಡ್ ಕ್ಯಾಲೆಂಡರ್ ಡೈರಿ, ಪತ್ರಿಕೆಯ ಆನ್‌ಲೈನ್ ಆವೃತ್ತಿ ಲೋಕಾರ್ಪಣೆ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 02, 2023 | 4:52 PM

ಹಿರಿಯ ವಕೀಲ ಹೆಚ್​ಎನ್ ವೆಂಕಟೇಶ್ ಸಾರಥ್ಯದ ರಾಜ್ಯದ ಏಕೈಕ‌ ಕನ್ನಡ ಕಾನೂನು ಮಾಸ ಪತ್ರಿಕೆ ‘ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆಯ 2024ರ ಕ್ಯಾಲೆಂಡರ್’, ಡೈರಿ ಬಿಡುಗಡೆ ಹಾಗೂ ಪತ್ರಿಕೆಯ ಆನ್‌ಲೈನ್ ಆವೃತ್ತಿಯನ್ನು ಇಂದು ಮೈಸೂರಿನ ಪ್ರತಿಷ್ಠಿತ ಮೆಟ್ರೋಪೋಲ್‌ ಹೋಟೆಲ್‌ನಲ್ಲಿ ಲೋಕಾರ್ಪಣೆ ಮಾಡಲಾಗಿದೆ.

2024ರ ಲಾ‌ಗೈಡ್ ಕ್ಯಾಲೆಂಡರ್ ಡೈರಿ, ಪತ್ರಿಕೆಯ ಆನ್‌ಲೈನ್ ಆವೃತ್ತಿ ಲೋಕಾರ್ಪಣೆ
ಲಾ‌ಗೈಡ್ ಕ್ಯಾಲೆಂಡರ್ ಡೈರಿ ಬಿಡುಗಡೆ ಕಾರ್ಯಕ್ರಮದಲ್ಲಿ ಗಣ್ಯರಿಗೆ ಸನ್ಮಾನ
Follow us on

ಮೈಸೂರು, ಡಿಸೆಂಬರ್​​ 02: ಹಿರಿಯ ವಕೀಲ ಹೆಚ್​ಎನ್ ವೆಂಕಟೇಶ್ ಸಾರಥ್ಯದ ರಾಜ್ಯದ ಏಕೈಕ‌ ಕನ್ನಡ ಕಾನೂನು ಮಾಸ ಪತ್ರಿಕೆ ‘ಲಾ ಗೈಡ್ (Lawguide) ಕನ್ನಡ ಕಾನೂನು ಮಾಸಪತ್ರಿಕೆಯ 2024ರ ಕ್ಯಾಲೆಂಡರ್’, ಡೈರಿ ಬಿಡುಗಡೆ ಹಾಗೂ ಪತ್ರಿಕೆಯ ಆನ್‌ಲೈನ್ ಆವೃತ್ತಿಯನ್ನು ಇಂದು ಲೋಕಾರ್ಪಣೆ ಮಾಡಲಾಗಿದೆ. ಮೈಸೂರಿನ ಪ್ರತಿಷ್ಠಿತ ಮೆಟ್ರೋಪೋಲ್‌ ಹೋಟೆಲ್‌ನಲ್ಲಿ ಕಾರ್ಯಕ್ರಮ ಜರುಗಿದ್ದು, ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಡಿ ಎನ್ ಮುನಿಕೃಷ್ಣ ಐಪಿಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಜಿಲ್ಲಾ ನ್ಯಾಯಾಧೀಶ ಸಿ.ಜಿ ಹುನಗುಂದ ಲಾಗೈಡ್ ಕ್ಯಾಲೆಂಡರ್, ಡೈರಿ‌‌ ಬಿಡುಗಡೆ ಮಾಡಿದರು‌. ಲಾಗೈಡ್ ಪತ್ರಿಕೆಯ ಆನ್‌ಲೈನ್ ಆವೃತ್ತಿಯನ್ನು ಡೇಟಾ ಸೆಕ್ಯುರಿಟಿ ಕೌನ್ಸಿಲ್ ಆಫ್ ಇಂಡಿಯಾದ ಸೀನಿಯರ್ ಡೈರೆಕ್ಟರ್ ಕೆ ವೆಂಕಟೇಶ ಮೂರ್ತಿ ಲೋಕರ್ಪಣೆಗೊಳಿಸಿದರು.

ಲಾಗೈಡ್ ಕಾನೂನು ಮಾಸಪತ್ರಿಕೆ ಗೌರವ ಸಂಪಾದಕರಾದ ಹೆಚ್ ಎನ್ ವೆಂಕಟೇಶ್ ಅವರಿಗೆ ಮೈಸೂರು ಪೇಟ ತೊಡಿಸಿ, ಹಾರ ಹಾಕಿ, ಶಾಲು ಹಾಕಿ ಗೌರವಿಸಲಾಯಿತು.

ಕಾರ್ಯಕ್ರಮದದಲ್ಲಿ ಸ್ಟಾರ್ ಆಫ್ ಮೈಸೂರ್ ಹಾಗೂ ಮೈಸೂರು ಮಿತ್ರ ಸಂಸ್ಥಾಪಕ ಸಂಪಾದಕರಾದ ಕೆ ಬಿ ಗಣಪತಿಯವನ್ನು ಆತ್ಮೀಯವಾಗಿ ಗೌರವಿಸಿ ಅಭಿನಂದಿಸಲಾಯಿತು‌. ವಿಜ್ಞಾನಿಗಳಾದ ಶೈಲಜಾ ಧರ್ಮೇಶ್, ಕನ್ನಡ ಪ್ರಭದ ಕಾರ್ಯ ನಿರ್ವಾಹಕ ಸಂಪಾದಕರಾದ ಅಂಶಿ ಪ್ರಸನ್ನ ಕುಮಾರ್, ಹಿರಿಯ ವಕೀಲರುಗಳಾದ ಹೆಚ್ ವಿ ಶ್ರೀನಾಥ್, ಸಿ ಬಸವರಾಜು, ಮನೋಹರ್, ಪುಟ್ಟಸ್ವಾಮಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಹಿರಿಯ ವಕೀಲರಾದ ಹರೀಶ್ ಕುಮಾರ್ ಹೆಗ್ಡೆ, ಜಿ ವಿ ರಾಮಮೂರ್ತಿ, ಎಸ್ ಲೋಕೇಶ್, ಆರ್ ಗಿರಿಜೇಶ್, ಹೆಚ್ ವಿ ಬಸವರಾಜಪ್ಪ, ನಾಗರಾಜ್, ರಾಜೇಶ್, ಡಿವೈಎಸ್‌ಪಿಗಳಾದ ಕೆ ಎನ್ ಯಶವಂತ್, ಧರ್ಮೇಂದ್ರ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.

ಲಾ ಗೈಡ್ ಹಿನ್ನೆಲೆ

ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ 23 ವರ್ಷದ ಹಿಂದೆ ಅಂದರೆ 2000ನೇ ಇಸವಿಯಲ್ಲಿ ಹಿರಿಯ ವಕೀಲರಾದ ಹೆಚ್ ಎನ್ ವೆಂಕಟೇಶ್ ಆರಂಭಿಸಿದ ಕಾನೂನು ಪತ್ರಿಕೆಯಾಗಿದೆ. ಕಾನೂನಿನ ಬಗ್ಗೆ ಜನ ಸಾಮಾನ್ಯರಿಗೆ ಮಾಹಿತಿ ನೀಡಬೇಕು ಅದರಲ್ಲೂ ನಮ್ಮ ಮಾತೃಭಾಷೆ ಕನ್ನಡದಲ್ಲಿ ಅವರಿಗೆ ಮಾಹಿತಿ ಸಿಗಬೇಕು ಎನ್ನುವ ಕಾರಣಕ್ಕೆ ಎಚ್ ಎನ್ ವೆಂಕಟೇಶ್ ಈ ಪತ್ರಿಕೆಯನ್ನು ಆರಂಭಿಸಿದರು. ಕಳೆದ 23 ವರ್ಷಗಳಿಂದಲೂ ಯಶಸ್ವಿಯಾಗಿ ಜನ ಸಾಮಾನ್ಯರಿಗೆ ಕಾನೂನಿನ ತಿಳುವಳಿಕೆ ಹಾಗೂ ಮಾಹಿತಿ ನೀಡುತ್ತಾ ಪತ್ರಿಕೆ 24ನೇ ವರ್ಷಕ್ಕೆ ಕಾಲಿಟ್ಟಿದೆ.

ಸಮಾಜಮುಖಿ ಕಾರ್ಯಗಳು, ತರಬೇತಿ ಕಾರ್ಯಾಗಾರಗಳು

ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ವತಿಯಿಂದ ಹಲವು ಸಮಾಜ ಮುಖಿ ಕೆಲಸಗಳನ್ನು ಮಾಡಲಾಗಿದೆ. ಕೊರೊನಾ ಸಂದರ್ಭದಲ್ಲಿ ವಕೀಲರಿಗೆ ದಿನಸಿ ಕಿಟ್ ವಿತರಿಸಲಾಗಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಪುಸ್ತಕ ವಿತರಿಸಲಾಗಿದೆ. ಅಷ್ಟೇ ಅಲ್ಲ ಲಾಗೈಡ್ ವತಿಯಿಂದ ಹಲವು ಕಾನೂನಿನ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಉಚಿತ ತರಬೇತಿ ನೀಡಲಾಗುತ್ತಿದೆ. ಸಹಾಯಕ ಸರ್ಕಾರಿ ಅಭಿಯೋಜಕರು ಹಾಗೂ ಸರ್ಕಾರಿ ಅಭಿಯೋಜಕರ ( ಅಸಿಸ್ಟೆಂಟ್ ಪಿಪಿ ಹಾಗೂ ಪಿಪಿ ) ಪರೀಕ್ಷೆಗೆ ಸಿದ್ದವಾಗುವವರಿಗೆ ತಜ್ಞರಿಂದ ಉಚಿತ ತರಬೇತಿ ನೀಡಿಸಿ ಪಾಠ ಮಾಡಿಸಲಾಗುತ್ತಿದೆ.

ಇದನ್ನೂ ಓದಿ: ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಭಾರಿ ಕುಸಿತ: ರೈತ ಚಿಂತಾಕ್ರಾಂತ

ನ್ಯಾಯಾಧೀಶರಾಗಿ ಆಯ್ಕೆಯಾಗಲು ಬೇಕಾದ ತರಬೇತಿಯನ್ನು ನೀಡಿದ ಹೆಗ್ಗಳಿಕೆ ಲಾ ಗೈಡ್ ಕನ್ನಡ ಕಾನೂನು ಬಳಗದ್ದಾಗಿದೆ. ಇದನ್ನು ಇದೇ ರೀತಿ ಮುಂದುವರಿಸಬೇಕು ಅನ್ನೋದು ಎಚ್ ಎನ್ ವೆಂಕಟೇಶ್ ಅವರ ಆಶಯವಾಗಿದೆ. ಕಾನೂನಿನ ಸಹಾಯ ಹಸ್ತ ಎಲ್ಲರಿಗೂ ಸಿಗಬೇಕೆನ್ನುವ ಎಚ್ ಎನ್ ವೆಂಕಟೇಶ್ ಅವರ ಮಹತ್ತರವಾದ ಕನಸಿಗೆ ವಿವಿಧ ಕ್ಷೇತ್ರದ ಹಲವು ಸಮಾನ ಮನಸ್ಕರು ಜೊತೆಯಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.