ತಂದೆಯಿಂದ ಮಗನ ಕೊಲೆ ಕೇಸ್​ಗೆ ಟ್ವಿಸ್ಟ್: ಉದ್ದೇಶಪೂರ್ವಕವಾಗಿ ಮಾಡಿಲ್ಲ ಎಂದ ಅಪ್ಪ

ಮೊಬೈಲ್ ಬಳಸುವ ವಿಚಾರದಲ್ಲಿ ತಂದೆ ಮತ್ತು ಮಗನ ನಡುವೆ ಗಲಾಟೆ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ಸದ್ಯ ಈ ಪ್ರಕರಣಕ್ಕೆ ಟ್ವಿಸ್ಟ್​​ ಸಿಕ್ಕಿದೆ. ಆತ್ಮರಕ್ಷಣೆಗಾಗಿ ತಂದೆಯಿಂದ ಮಗನ ಕೊಲೆ ಮಾಡಲಾಗಿದೆ ಎಂದು ಟಿವಿ9ಗೆ ಸಂಬಂಧಿಗಳಿಂದ ಮಾಹಿತಿ ನೀಡಲಾಗಿದೆ. ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಸದ್ಯ ತಂದೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ತಂದೆಯಿಂದ ಮಗನ ಕೊಲೆ ಕೇಸ್​ಗೆ ಟ್ವಿಸ್ಟ್: ಉದ್ದೇಶಪೂರ್ವಕವಾಗಿ ಮಾಡಿಲ್ಲ ಎಂದ ಅಪ್ಪ
ತಂದೆ ಸಯ್ಯದ್ ಅಸ್ಲಾಂ, ಮಗ ಅವೈಸ್
Follow us
ರಾಮ್​, ಮೈಸೂರು
| Updated By: ಗಂಗಾಧರ​ ಬ. ಸಾಬೋಜಿ

Updated on: Nov 30, 2023 | 3:18 PM

ಮೈಸೂರು, ನವೆಂಬರ್​​ 30: ಮೊಬೈಲ್ ಬಳಸುವ ವಿಚಾರದಲ್ಲಿ ತಂದೆ ಮತ್ತು ಮಗನ ನಡುವೆ ಗಲಾಟೆ ಕೊನೆಗೆ ಕೊಲೆ (crime) ಯಲ್ಲಿ ಅಂತ್ಯವಾಗಿದೆ. ಸದ್ಯ ಈ ಪ್ರಕರಣಕ್ಕೆ ಟ್ವಿಸ್ಟ್​​ ಸಿಕ್ಕಿದೆ. ಆತ್ಮರಕ್ಷಣೆಗಾಗಿ ತಂದೆಯಿಂದ ಮಗನ ಕೊಲೆ ಮಾಡಲಾಗಿದೆ ಎಂದು ಟಿವಿ9ಗೆ ಸಂಬಂಧಿಗಳಿಂದ ಮಾಹಿತಿ ನೀಡಲಾಗಿದೆ. ನಗರದ ಬನ್ನಿಮಂಟಪದಲ್ಲಿ ಘಟನೆ ನಡೆದಿತ್ತು. ಅವೈಸ್ (23) ಕೊಲೆಯಾಗಿದ್ದ ಮಗ. ತಂದೆ ಸಯ್ಯದ್​ ಅಸ್ಲಾಂ  ವಿರುದ್ದ ಕೊಲೆ ಆರೋಪ ಮಾಡಲಾಗಿದೆ.

ಮಾದಕ ವ್ಯಸನಿಯಾಗಿದ್ದ ಅವೈಸ್​, ನಿತ್ಯ ಮಾದಕ ವಸ್ತು ಸೇವಿಸಿ ತಂದೆ ತಾಯಿಗೆ ಕಿರುಕುಳ ನೀಡುತ್ತಿದ್ದ. ಮಾನಸಿಕವಾಗಿ ದೈಹಿಕವಾಗಿ ಹಿಂಸೆ ನೀಡುತ್ತಿದ್ದ. ಕೊಲೆಯಾದ ದಿನವೂ ಮನೆಯಲ್ಲಿ ಗಲಾಟೆ ಮಾಡಿದ್ದು, ಈ ವೇಳೆ ತಂದೆಗೆ ಚಾಕುವಿನಿಂದ ಇರಿಯಲು ಯತ್ನಿಸಿದ್ದಾನೆ.

ಇದನ್ನೂ ಓದಿ: ಮೈಸೂರು: ಮೊಬೈಲ್ ಬಳಸುವ ವಿಚಾರಕ್ಕೆ ಗಲಾಟೆ: ಮಗನನ್ನೇ ಕೊಂದ ಅಪ್ಪ!

ಆಗ ಆತ್ಮರಕ್ಷಣೆಗೆ ಅಸ್ಲಂ ಮುಂದಾಗಿದ್ದು, ಚಾಕು ಕಸಿದುಕೊಳ್ಳುವ ವೇಳೆ ಆಕಸ್ಮಿಕವಾಗಿ ಘಟನೆ ನಡೆದಿದೆ. ಉದ್ದೇಶಪೂರ್ವಕವಾಗಿ ಅಸ್ಲಂ ಮಗನ ಕೊಲೆ ಮಾಡಿಲ್ಲ. ಮಗನಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಅಪಘಡ ನಡೆದಿದೆ ಎಂದು ಸಂಬಂಧಿಕರು ಮಾಹಿತಿ ನೀಡಿದ್ದಾರೆ. ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಸದ್ಯ ತಂದೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಬ್ಬರು ಮಕ್ಕಳೊಂದಿಗೆ ಕೆರೆಗೆ ಬಿದ್ದು ತಾಯಿ ಆತ್ಮಹತ್ಯೆ

ತುಮಕೂರು: ಇಬ್ಬರು ಮಕ್ಕಳೊಂದಿಗೆ ಕೆರೆಗೆ ಬಿದ್ದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ  ಜಿಲ್ಲೆಯ ಗುಬ್ಬಿ ತಾಲ್ಲೂಕಿನ ನಿಟ್ಟೂರಿನಲ್ಲಿ ನಡೆದಿದೆ. ವಿಜಯಲಕ್ಷ್ಮೀ, (11 ತಿಂಗಳ) ಯದುನಾಯಕ್, (4 ವರ್ಷ) ಹೆಣ್ಣ ಮಗು ಮೃತರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಒಂದು ವರ್ಷದ ಹಿಂದೆ ವಿಜಯಲಕ್ಷ್ಮೀ ಪತಿ ಸಾವನಪ್ಪಿದ್ದರು.‌ ಗುಬ್ಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದಕ್ಕೆ ಅಜ್ಜನ ಕೊಲೆ: ಇಬ್ಬರ ಬಂಧನ

ಕಲಬುರಗಿ: ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದಕ್ಕೆ ಅಜ್ಜನ ಬರ್ಬರ ಕೊಲೆ ಮಾಡಿದ್ದವರನ್ನು ನರೋಣ ಪೊಲೀಸರು ಬಂಧಿಸಿದ್ದಾರೆ. ಆಕಾಶ್ (22) ತಾಯಿ ಸರೋಜಾ ಬಂಧಿತರು. ಸಿದ್ರಾಮಪಪ್ಪ ಕಾಮನ್ (75)ಮೃತ ವ್ಯಕ್ತಿ. ಜಿಲ್ಲೆಯ ಜವಳಗಾ ಬಿ ಗ್ರಾಮದಲ್ಲಿ ನ.27 ರಂದು ಕೊಲೆ ನಡೆದಿತ್ತು. ಕಲಬುರಗಿ ತಾಲ್ಲೂಕಿನ ಕುಮಿಸಿ ಗ್ರಾಮಕ್ಕೆ ಅಂತ್ಯಕ್ರಿಯೆಗೆ ತೆರಳಿದ್ದರು. ಕ್ರೂಸರ್​ನಲ್ಲಿ ವಾಪಸ್ ಬರುವಾಗ ಸರೋಜಾ, ಸಿದ್ರಾಮಪ್ಪನ ಗಾಡಿಯ ಮೇಲೆ ಕೂರುವಂತೆ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನಡೆಯುತ್ತಿದೆ ಬ್ರಾಂಡೆಡ್ ಸಿಗರೇಟ್, ಬಟ್ಟೆಗಳ ನಕಲು, ಅಂಗಡಿಗಳ ಮೇಲೆ ಸಿಸಿಬಿ ದಾಳಿ

ವಯಸ್ಸಾದವನಿಗೆ ಗಾಡಿಯ ಮೇಲೆ ಕೂರುವಂತೆ ಹೇಳಿದಕ್ಕೆ ಸಿದ್ರಾಮಪ್ಪ ಸರೋಜಾಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸರೋಜಾ ತನ್ನ ಮಗನಿಗೆ ಅಜ್ಜ ಬೈದಿರುವ ವಿಚಾರ ಹೇಳಿದ್ದಾರೆ. ಅಜ್ಜ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರೋದಕ್ಕೆ ರೊಚ್ಚಿಗೆದ್ದು ಚಾಕುವಿನಿಂದ ಇರಿದು ಕೊಲೆ‌ ಮಾಡಿದ್ದ. ಸದ್ಯ ತಾಯಿ ಮಗನನ್ನ ಪೊಲೀಸರು ಬಂಧಿಸಿದ್ದಾರೆ. ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ