Santro Ravi: ಸ್ಯಾಂಟ್ರೋ ರವಿ ಸ್ಟೋರಿಯಲ್ಲಿ ಬಿಗ್ ಟ್ವಿಸ್ಟ್, ಬೆಂಗಳೂರು ಟು ಮೈಸೂರ್ ಕಹಾನಿ ಇಲ್ಲಿದೆ

| Updated By: Rakesh Nayak Manchi

Updated on: Jan 09, 2023 | 11:19 AM

ರಾಜ್ಯಾದ್ಯಂತ ಸಂಚಲನ ಮೂಡಿಸಿದ ಸ್ಯಾಂಟ್ರೋ ರವಿ ಸ್ಟೋರಿ ಟ್ವಿಸ್ಟ್ ಪಡೆದುಕೊಂಡಿದೆ. ಭಾರಿ ಸಂಚಲನ ಸೃಷ್ಟಿಸಿದ ಸ್ಯಾಂಟ್ರೋ ರವಿ ಕಹಾನಿಗೆ ಕಾರಣ ಇಲ್ಲಿದೆ ನೋಡಿ.

Santro Ravi: ಸ್ಯಾಂಟ್ರೋ ರವಿ ಸ್ಟೋರಿಯಲ್ಲಿ ಬಿಗ್ ಟ್ವಿಸ್ಟ್, ಬೆಂಗಳೂರು ಟು ಮೈಸೂರ್ ಕಹಾನಿ ಇಲ್ಲಿದೆ
ಸ್ಯಾಂಟ್ರೋ ರವಿ
Follow us on

ಮೈಸೂರು: ರಾಜ್ಯದಲ್ಲಿ ಭಾರೀ ಸುದ್ದು ಮಾಡುತ್ತಿರುವ ಉದ್ಯಮಿ ಸ್ಯಾಂಟ್ರೋ ರವಿ (Santro Ravi) ಪ್ರಕರಣದಲ್ಲಿ ಬಗೆದಷ್ಟು ಮಾಹಿತಿ ಹೊರಬೀಳುತ್ತಿದೆ. ತನ್ನ ಪತ್ನಿ ಬಳಿ ಇದ್ದ ಲ್ಯಾಪ್​ಟಾಪ್ ತನ್ನ ಕೈ ಸೇರಲು ಸ್ಯಾಂಟ್ರೋ ರವಿ ಪತ್ನಿ ವಿರುದ್ಧವೇ ಷಡ್ಯಂತರ ರೂಪಿಸುತ್ತಾನೆ. ಇದಕ್ಕಾಗಿ ವರ್ಗಾವಣೆಯಾಗುವ ತಲೆಬಿಸಿಯಲ್ಲಿದ್ದ ಕಾಟನ್​ಪೇಟೆ ಠಾಣಾ ಇನ್ಸ್​ಪೆಕ್ಟರ್​ ಪ್ರವೀಣ್​ ಅವರನ್ನು ಬಳಕೆ ಮಾಡಿಕೊಳ್ಳುತ್ತಾನೆ. ವರ್ಗಾವಣೆ ತಡೆ ಆಮಿಷವೊಡ್ಡಿ ಇನ್ಸ್​​ಪೆಕ್ಟರ್ ಮೂಲಕ ಫೇಕ್ ಪ್ರಕರಣ ದಾಖಲಿಸಿಕೊಳ್ಳುತ್ತಾನೆ. ಅದರಂತೆ ಇನ್ಸ್​ಪೆಕ್ಟರ್ ಮೂವರು ಅಮಾಯಕರನ್ನು ಬಂಧಿಸುತ್ತಾರೆ. ಇವರು ಜೈಲುವಾಸ ಅನುಭವಿಸಿ ಹೊರಬಂದ ನಂತರ ಅಸಲಿ ದೂರನ್ನು ದಾಖಲಿಸುತ್ತಾರೆ. ಇದು ಸ್ಯಾಂಟ್ರೋ ರವಿಗೆ ತಿರುಗುಬಾಣವಾಗಿ ಪರಿಣಮಿಸಿದೆ.

ಲ್ಯಾಪ್​ಟಾಪ್​ಗಾಗಿ ಪತ್ನಿ ವಿರುದ್ಧ ಷಡ್ಯಂತರ ರೂಪಿಸಿದ ರವಿ ವಂಚನೆ ಪ್ರಕರಣದಲ್ಲಿ ಸಿಲುಕಿಸಿಹಾಕಲು ಯತ್ನಿಸುತ್ತಾನೆ. ಇದೇ ಸಂದರ್ಭದಲ್ಲಿ ಕಾಟನ್​ಪೇಟೆ ಠಾಣಾ ಇನ್ಸ್​ಪೆಕ್ಟರ್​ ಪ್ರವೀಣ್ ವರ್ಗಾವಣೆ ತಲೆಬಿಸಿಯಲ್ಲಿ ಇರುತ್ತಾರೆ. ಈ ವಿಚಾರ ತಿಳಿದ ಸ್ಯಾಂಟ್ರೋ ರವಿ, ತಾನು ಹೇಳಿದಂತೆ ಪ್ರಕರಣ ದಾಖಲಿಸಿದರೆ ವರ್ಗಾವಣೆ ತಡೆ ಮಾವುದಾಗಿ ಆಮಿಷವೊಡ್ಡುತ್ತಾನೆ. ತಾನು ಕಾಟನ್​ಪೇಟೆ ಠಾಣೆಯಲ್ಲಿ ಇನ್ಸ್​ಪೆಕ್ಟರ್ ಆಗಿಯೇ ಮುಂದುವರಿಯಬೇಕು ಎನ್ನುವ ಆಸೆಯಿಂದ ಪ್ರವೀಣ್, ಸ್ಯಾಂಟ್ರೋ ರವಿ ಹೇಳಿದಂತೆ ನಕಲಿ ವಂಚನೆ ಪ್ರಕರಣ ದಾಖಲಿಸುತ್ತಾರೆ. ತನ್ನ ಸ್ನೇಹಿತ ಶ್ರೀಪ್ರಕಾಶ್ ಎಂಬಾತನಿಂದ ಸ್ಯಾಂಟ್ರೋ ರವಿ ದೂರು ದಾಖಲಿಸುತ್ತಾನೆ.

ಶ್ರೀಪ್ರಕಾಶ್ ನೀಡಿದ ದೂರಿನಲ್ಲಿ ಉಲ್ಲೇಖಿಸಿದ ಅಂಶಗಳೇನು?

ಸ್ಯಾಂಟ್ರೋ ರವಿ ಪತ್ನಿ ಆರ್ಥಿಕ ಸಮಸ್ಯೆ ಹೇಳಿಕೊಂಡು ತನ್ನ ಬಳಿಯಿಂದ 5 ಲಕ್ಷ ಸಾಲು ಪಡೆದು ಮೂರು ತಿಂಗಳಲ್ಲಿ ವಾಪಸ್ ನೀಡುವುದಾಗಿ ಹೇಳಿದ್ದರು. ಈ ಸಂಬಂಧ ಒಂದು ಚೆಕ್, ಪಾಸ್​​ಬುಕ್ ಜೆರಾಕ್ಸ್ ಸಹ ನೀಡಿದ್ದರು. ನವೆಂಬರ್ 23ರಂದು ಕರೆ ಮಾಡಿ ಹಣ ವಾಪಸ್ ನೀಡುವುದಾಗಿ ಹೇಳಿ ಮೆಜೆಸ್ಟಿಕ್ ಬಳಿ ರಾತ್ರಿ ಮಳೆ ಬರುತ್ತಿದ್ದಾಗ ಕರೆಸಿಕೊಂಡಿದ್ದಾರೆ. ನಂತರ ರೈಲು ನಿಲ್ದಾಣದಿಂದ ಕೊಂಚ ಮುಂದೆ ಕರೆಸಿಕೊಂಡು ಹಣ ಕೊಡದೇ ಹಲ್ಲೆ ನಡೆಸಿ ತನ್ನ ಬಳಿ ಇದ್ದ ಚಿನ್ನ ಕದ್ದು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಶ್ರೀಪ್ರಕಾಶ್ ನೀಡಿದ ದೂರಿನ ಅನ್ವಯ ಎಫ್​ಐಆರ್​ ದಾಖಲಿಸಿಕೊಂಡ ಕಾಟನ್ ಪೇಟೆ ಠಾಣಾ ಇನ್​​ಸ್ಪೆಕ್ಟರ್ ಪ್ರವೀಣ್, ರವಿ ಪತ್ನಿ, ಮತ್ತೋರ್ವ ಮಹಿಳೆ ಹಾಗೂ ಓರ್ವ ವ್ಯಕ್ತಿಯನ್ನು ಬಂಧಿಸುತ್ತಾರೆ. ತಾನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದ ಅಮಾಯಕರು ಜೈಲಿನಿಂದ ಬಿಡುಗಡೆಯಾಗಿ ರವಿ ವಿರುದ್ಧ ವಂಚನೆ, ಅತ್ಯಾಚಾರ ಎಸಗಿರುವ ಬಗ್ಗೆ ದೂರು ದಾಖಲಿಸುತ್ತಾರೆ. ದೂರಿನ ಅನ್ವಯ ಮೈಸೂರು ಪೊಲೀಸರು ರವಿ ವಿರುದ್ಧ ಎಫ್​ಐಆರ್ ದಾಖಲಿಸುತ್ತಾರೆ. ಬಳಿಕ ರಾಜ್ಯಾದ್ಯಂತ ಸ್ಯಾಂಟ್ರೋ ರವಿ ಭಾರೀ ಚರ್ಚೆಗೆ ಕಾರಣವಾಗುತ್ತದೆ. ಈ ನಡುವೆ ರವಿ ಪತ್ನಿ ಮೈಸೂರಿನ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದಲ್ಲಿ 164ರ ಅಡಿ ಹೇಳಿಕೆ ದಾಖಲಿಸಿದ್ದಾರೆ.

ಇದನ್ನೂ ಓದಿ: Santro Ravi Case: ಮಹಿಳೆಯರಿಗೆ ಮತ್ತು ಬರಿಸುವ ಔಷಧಿ ಬೆರೆಸುತ್ತಿದ್ದ ಸ್ಯಾಂಟ್ರೋ ರವಿ ಆಪ್ತ ಪೊಲೀಸರ ವಶಕ್ಕೆ

ವರ್ಗಾವಣೆ ತಡೆಗೆ ಫೇಕ್ ಕೇಸ್​ನ  ಸತ್ಯ ಶೋಧ

ಫೇಕ್ ಕೇಸ್​​ನ ಗೊಲ್​ಮಾಲ್ ಬಗ್ಗೆ ಮಾಹಿತಿ ಹೊರಬೀಳುತ್ತಿದ್ದಂತೆ ಹಿರಿಯ ಅಧಿಕಾರಿಗಳು ತನಿಖೆಗೆ ಇಳಿದಿದ್ದಾರೆ. ಪೊಲೀಸ್ ಇಲಾಖೆಯ ಆಂತರಿಕ ತನಿಖೆ ನಡೆಸಲಾಗುತ್ತಿದೆ. ಯಾವ ಕ್ಷಣದಲ್ಲಾದರೂ ಇನ್ಸ್​ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಯಾವುದೇ ಸಮಯದಲ್ಲಿ ಬೇಕಾದರೂ ಇನ್ಸ್​​ಪೆಕ್ಟರ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಆದೇಶ ಹೊರಬೀಳಬಹುದು.

ಇದನ್ನೂ ಓದಿ: Santro Ravi: ತಲೆ ಮರೆಸಿಕೊಂಡಿರೊ ಸ್ಯಾಂಟ್ರೋ ರವಿ ಹಾದಿ ಮತ್ತಷ್ಟು ಕಠಿಣ, ನ್ಯಾಯಾಧೀಶರ ಮುಂದೆ‌ ಮಹಿಳೆ 164 ಹೇಳಿಕೆ ದಾಖಲು

ನೂರಾರು ಯುವತಿಯರಿಗೆ ಗರ್ಭಪಾತ ಮಾಡಿಸಿದ್ನಾ ರವಿ?

ದಿನಗಳು ಉರುಳುತ್ತಿದ್ದಂತೆ ಸ್ಯಾಂಟ್ರೋ ರವಿಯ ಒಂದೊಂದು ಬೆಚ್ಚಿಬೀಳಿಸುವ ಮಾಹಿತಿ ಹೊರಬೀಳುತ್ತಲೇ ಇದೆ. ಹಲವು ಯುವತಿಯರಿಗೆ ಗರ್ಭಪಾತ ಮಾಡಿಸಿರುವ ಆರೋಪವೂ ಇದೀಗ ಕೇಳಿಬರಲು ಆರಂಭವಾಗಿದೆ. ಹಣದ ಆಸೆ ತೋರಿಸಿ ವೈದ್ಯರನ್ನು ಬಳಸಿಕೊಂಡು ಈ ರೀತಿಯಾಗಿ ಮಾಡುತ್ತಿದ್ದನಂತೆ. ಒಂದು ಬಾರಿ ಪರಿಚಯವಾದ ವೈದ್ಯರಿಂದ ಕನಿಷ್ಟ 5 ಜನರಿಗೆ ಮಾತ್ರ ಗರ್ಭಪಾತ ಮಾಡಿಸುತ್ತಿದ್ದನಂತೆ. ನಂತರ ಬೇರೊಬ್ಬರ ವೈದ್ಯರನ್ನು ಪರಿಚತ ಮಾಡಿಕೊಂಡು ಗರ್ಭಪಾತ ನಡೆಸುತ್ತಿದ್ದನಂತೆ.

ಏಳು ದಿನವಾದರೂ ಪತ್ತೆಯಾಗದ ಸ್ಯಾಂಟ್ರೋ ರವಿ

ವೇಶ್ಯಾವಾಟಿಕೆ ದಂಧೆ ಪ್ರಕರಣ ಸಂಬಂಧ ಪ್ರಕರಣ ದಾಖಲಾಗಿ ಏಳು ದಿನಗಳ ಕಳೆದರೂ ಪೊಲೀಸರಿಗೆ ಆರೋಪಿ ಸ್ಯಾಂಟ್ರೋ ರವಿಯನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ವಕೀಲರ ಮೂಲಕ ನಿರೀಕ್ಷಣಾ ಜಾಮೀನು ಸಲ್ಲಿಸಿರುವ ಸ್ಯಾಂಟ್ರೋ ರವಿ, ಪೊಲೀಸರ ಕಣ್ಣಿಗೆ ಬೀಳದೆ ತಲೆಮರೆಸಿಕೊಳ್ಳುತ್ತಿದ್ದಾನೆ.

ಕ್ರೈಂ ಸುದ್ದಿಗಳನ್ನು ಓಲು ಇಲ್ಲಿ ಕ್ಲಿಕ್ ಮಾಡಿ

Published On - 9:42 am, Mon, 9 January 23