ಕೆಲಸ ಕೊಡಿಸುವುದಾಗಿ ವಂಚಿಸಿದ್ದ ಮೈಸೂರು ಸಂಚಾರಿ ಪೊಲೀಸ್​​ ಠಾಣೆಯ ಪಿಎಸ್​​ಐ ಅಶ್ವಿನಿ ಅಮಾನತು

| Updated By: ವಿವೇಕ ಬಿರಾದಾರ

Updated on: Sep 19, 2022 | 3:36 PM

545 ಪಿಎಸ್​​ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮದಲ್ಲಿ ಭಾಗಿಯಾಗಿದ್ದ ಪಿಎಸ್​​ಐ ಅಶ್ವಿನಿ ಅವರನ್ನು ಮೈಸೂರು ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಅಮಾನತುಗೊಳಿಸಿದ್ದಾರೆ.

ಕೆಲಸ ಕೊಡಿಸುವುದಾಗಿ ವಂಚಿಸಿದ್ದ ಮೈಸೂರು ಸಂಚಾರಿ ಪೊಲೀಸ್​​ ಠಾಣೆಯ ಪಿಎಸ್​​ಐ ಅಶ್ವಿನಿ ಅಮಾನತು
ಸಾಂಧರ್ಬಿಕ ಚಿತ್ರ
Follow us on

ಮೈಸೂರು: ಎಫ್​ಡಿಎ (FDA) ಕೆಲಸ ಕೊಡಿಸುವುದಾಗಿ ವಂಚಿಸಿದ್ದ ಮಹಿಳಾ ಪಿಎಸ್​​ಐ (PSI) ಅಶ್ವಿನಿಯನ್ನು ಮೈಸೂರು (Mysore) ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಅಮಾನತುಗೊಳಿಸಿದ್ದಾರೆ. ಪಿಎಸ್​​ಐ ಅಶ್ವಿನಿ ಮೂಲತಃ ಜಮಖಂಡಿ ತಾಲೂಕಿನ ಆಲಗೂರು ನಿವಾಸಿಯಾಗಿದ್ದಾರೆ. ಇವರು ಮೈಸೂರಿನ ನರಸಿಂಹರಾಜ ಸಂಚಾರಿ ಪೊಲೀಸ್​​ ಠಾಣೆಯlಲ್ಲಿ ಪಿಎಸ್​​ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪಿಎಸ್​ಐ ಅಶ್ವಿನಿ 2020ರಲ್ಲಿ ನಡೆದಿದ್ದ ಪರೀಕ್ಷೆ ವೇಳೆ, ಎಫ್​ಡಿಎ ಕೆಲಸ ಕೊಡಿಸುವುದಾಗಿ, ಜಮಖಂಡಿ ತಾಲೂಕಿನ ಚಿಕ್ಕಲಕಿ ಗ್ರಾಮದ ಬಸವರಾಜ ಝಳಕಿ ಎಂಬುವನಿಗೆ ಹೇಳಿದ್ದರು.

ಕೆಲಸ ಕೊಡಿಸಲು ಬಸವರಾಜ ಸೋದರ ಸಂಗಮೇಶ್ ಜೊತೆಗೆ 15 ಲಕ್ಷಕ್ಕೆ ಡೀಲ್​ ಮಾಡಿಕೊಂಡಿದ್ದರು. ಮುಂಗಡವಾಗಿ ಅಶ್ವಿನಿ ತಮ್ಮ ತಂದೆಯ ಅಕೌಂಟ್​ ಮೂಲಕ 2 ಲಕ್ಷ ಪಡೆದಿದ್ದರು. ಈ ಸಂಬಂಧ ಹಣಕಾಸಿನ ವ್ಯವಹಾರದ ಬಗ್ಗೆ ಮಾತಾಡಿರುವ ಆಡಿಯೋ ವೈರಲ್ ಆಗಿತ್ತು. ಸದ್ಯ,  ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು  ಪಿಎಸ್​ಐ ಅಶ್ವಿನಿ ಅವರನ್ನು ಅಮಾನತುಗೊಳಿಸಿ ಮೈಸೂರು ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:06 pm, Mon, 19 September 22