ಮೈಸೂರು: ವಿಜಯ ದಶಮಿ ದಿನವಾದ ಇಂದಿನ ಬಳಿಕವೂ ಮುಂದಿನ 9 ದಿನ ದಸರಾ ದೀಪಾಲಂಕಾರ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು (ಅಕ್ಟೋಬರ್ 15) ಅಧಿಕೃತ ಘೋಷಣೆ ಮಾಡಿದ್ದಾರೆ. ಸುತ್ತೂರು ಶಾಖಾ ಮಠದಲ್ಲಿ ಸಿಎಂ ಬೊಮ್ಮಾಯಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ದಸರಾ ದೀಪಾಲಂಕಾರ ಮುಂದುವರಿಸಲು ಜನರ ಬೇಡಿಕೆ ಇದೆ. ಹಾಗಾಗಿ ವಿದ್ಯುತ್ ದೀಪಾಲಂಕಾರ ಮುಂದುವರಿಸಲಾಗುವುದು. ಇಂದಿನಿಂದ 9 ದಿನ ದೀಪಾಲಂಕಾರ ಮುಂದುವರಿಯಲಿದೆ ಎಂದು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಬೊಮ್ಮಾಯಿ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ ರಾಜ್ಯದ ಜನತೆಗೆ ನಾಡ ಹಬ್ಬ ದಸರಾದ ಶುಭಾಶಯ ಕೋರಿದ್ದಾರೆ. ರಾಜ್ಯ ಮತ್ತಷ್ಟು ಸುಭಿಕ್ಷವಾಗಲಿ. ತಾಯಿ ಚಾಮುಂಡೇಶ್ವರಿ ನಾಡಿನ ಜನತೆಗೆ ಹರಸಲಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ನಾಡಿಗೆ ಶುಭಹಾರೈಸಿದ್ದಾರೆ. ಸುತ್ತೂರು ಶಾಖಾ ಮಠಕ್ಕೆ ಸಿಎಂ ಬೊಮ್ಮಾಯಿ ಭೇಟಿ ಕೊಟ್ಟಿದ್ದಾರೆ. ಮಠದಲ್ಲಿ ಸಿಎಂ ಬೊಮ್ಮಾಯಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಗಿದೆ. ಮಠದ ಆವರಣದಲ್ಲಿ ಚಾಮುಂಡೇಶ್ವರಿ ದೇವಿಗೆ ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಸಿದ್ದಾರೆ.
ದಸರಾ ಗಜಪಡೆಗೆ ಬಣ್ಣದ ಸಿಂಗಾರ ಕೆಲಸ ಪೂರ್ಣ
ದಸರಾ ಗಜಪಡೆಗೆ ಬಣ್ಣದ ಸಿಂಗಾರ ಕೆಲಸ ಪೂರ್ಣವಾಗಿದೆ. ಮಧ್ಯಾಹ್ನ 2.30 ರವರೆಗೆ ದಸರಾ ಗಜಪಡೆ ವಿಶ್ರಾಂತಿ ಪಡೆಯುತ್ತಿದೆ. 2.30 ನಂತರ ಅಭಿಮನ್ಯುಗೆ ಅಂಬಾರಿ ಕಟ್ಟುವ ಕೆಲಸ ನಡೆಯುತ್ತಿದೆ. ಬಳಿಕ ಅಭಿಮನ್ಯು ಆನೆ ಅಂಬಾರಿ ಹೊರಲಿದೆ. ಮೆರವಣಿಗೆಯಲ್ಲಿ ಅಭಿಮನ್ಯುಗೆ ಗಜಪಡೆ ಸಾಥ್ ನೀಡಲಿದೆ. ಅಭಿಮನ್ಯು ಆನೆಗೆ ಚಿನ್ನದ ಅಂಬಾರಿ ಕಟ್ಟಲು ಒಂದು ಗಂಟೆ ಬೇಕಾಗುತ್ತದೆ. ಹೀಗಾಗಿ 2.30 ರಿಂದ ಅಂಬಾರಿ ಕಟ್ಟುವ ಕೆಲಸ ಶುರುವಾಗಿದೆ. ಅಭಿಮನ್ಯುಗೆ ಈ ಬಾರಿ 5 ಆನೆಗಳು ಸಾಥ್ ನೀಡಲಿವೆ. ಅಭಿಮನ್ಯು ಅಕ್ಕಪಕ್ಕ ಕಾವೇರಿ, ಚೈತ್ರಾ ಆನೆಗಳು ಹೆಜ್ಜೆ ಹಾಕಲಿದೆ. ನಿಶಾನೆ ಆನೆಯಾಗಿ ಧನಂಜಯ ಇರಲಿದೆ. ನೌಪತ್ ಆನೆಯಾಗಿ ಗೋಪಾಲಸ್ವಾಮಿ ಹಾಗೂ ಸಾಲಾನೆಯಾಗಿ ಅಶ್ವತ್ಥಾಮ ಆನೆ ಹೆಜ್ಜೆ ಹಾಕಲಿದೆ.
ಇದನ್ನೂ ಓದಿ: ಮೈಸೂರು ದಸರಾ 2021: ಅಂಬಾರಿಯಲ್ಲಿ ರಾರಾಜಿಸುವ ಮಹಿಷಮರ್ಧಿನಿ ಮೂರ್ತಿ ಹೇಗಿದೆ? ಇಲ್ಲಿದೆ ಕುತೂಹಲಕರ ಮಾಹಿತಿ
ಇದನ್ನೂ ಓದಿ: ಕರ್ನಾಟಕದಲ್ಲಿ ದಸರಾ ಬಳಿಕ ಕೊರೊನಾ ನಿಯಮ ಸಡಿಲಿಕೆ ಬಗ್ಗೆ ನಿರ್ಧಾರ; ಸಿಎಂ ಬಸವರಾಜ ಬೊಮ್ಮಾಯಿ
Published On - 2:22 pm, Fri, 15 October 21