AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ದಸರಾ 2021: ಅಂಬಾರಿಯಲ್ಲಿ ರಾರಾಜಿಸುವ ಮಹಿಷಮರ್ಧಿನಿ ಮೂರ್ತಿ ಹೇಗಿದೆ? ಇಲ್ಲಿದೆ ಕುತೂಹಲಕರ ಮಾಹಿತಿ

ಅಂಬಾರಿಯಲ್ಲಿ ರಾರಾಜಿಸುವ ನಾಡದೇವತೆ ತಾಯಿ ಚಾಮುಂಡೇಶ್ವರಿ ದರ್ಶನಕ್ಕಾಗಿ ಭಕ್ತರು ಕಾದು ಕುಳಿತಿರುತ್ತಾರೆ. ಈ ಬಾರಿ ಮಹಿಷಮರ್ಧಿನಿ ಮೂರ್ತಿ ಹೇಗಿದೆ? ಎಂಬುದನ್ನು ಇಲ್ಲಿ ನೋಡಿ.

ಮೈಸೂರು ದಸರಾ 2021: ಅಂಬಾರಿಯಲ್ಲಿ ರಾರಾಜಿಸುವ ಮಹಿಷಮರ್ಧಿನಿ ಮೂರ್ತಿ ಹೇಗಿದೆ? ಇಲ್ಲಿದೆ ಕುತೂಹಲಕರ ಮಾಹಿತಿ
ಅಂಬಾರಿಯಲ್ಲಿ ರಾರಾಜಿಸುವ ಮಹಿಷಮರ್ಧಿನಿ ಮೂರ್ತಿ
TV9 Web
| Edited By: |

Updated on: Oct 15, 2021 | 11:54 AM

Share

ಮೈಸೂರು ದಸರಾ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾಯುತ್ತಿರುತ್ತಾರೆ. ಅದ್ಧೂರಿಯಾಗಿ ಆಚರಿಸುವ ದಸರಾ ಸಂಭ್ರಮದಲ್ಲಿ ಅಂಬಾರಿಯಲ್ಲಿ ರಾರಾಜಿಸುವ ಮಹಿಷಾಸುರ ಮರ್ಧಿನಿ ಮೂರ್ತಿಯನ್ನು ನೋಡುವುದೇ ಕಣ್ಣಿಗೆ ಹಬ್ಬ. ಅಂಬಾರಿಯಲ್ಲಿ ರಾರಾಜಿಸುವ ನಾಡದೇವತೆ ತಾಯಿ ಚಾಮುಂಡೇಶ್ವರಿ ದರ್ಶನಕ್ಕಾಗಿ ಭಕ್ತರು ಕಾದು ಕುಳಿತಿರುತ್ತಾರೆ. ಈ ಬಾರಿ ಮಹಿಷಮರ್ಧಿನಿ ಮೂರ್ತಿ ಹೇಗಿದೆ? ಎಂಬುದನ್ನು ಇಲ್ಲಿ ನೋಡಿ.

ಮೂರ್ತಿ ಕಲಾತ್ಮಕವಾಗಿ ಅತ್ಯಂತ ಆಕರ್ಷಕವಾಗಿದೆ. ವಿಶ್ವವಿಖ್ಯಾತ ಜಂಬೂ ಸವಾರಿಯಲ್ಲಿ ರಾರಾಜಿಸುವ ನಾಡದೇವತೆ ತಾಯಿ ಚಾಮುಂಡೇಶ್ವರಿಯ ರೂಪ ಮಹಿಷಾಸುರ ಮರ್ಧಿನಿ ವಿಗ್ರಹವನ್ನು ಅತ್ಯಂತ ಕಲಾತ್ಮಕವಾಗಿ ಕೆತ್ತಲಾಗಿದೆ. ಜಂಬೂಸವಾರಿಯ ಮೆರವಣಿಗೆಯಲ್ಲಿ ಮಾತ್ರ ಮಹಿಷಾಸುರ ಮರ್ಧಿನಿ ಮೂರ್ತಿಯನ್ನು ಮೆರವಣಿಗೆ ಮಾಡಲಾಗುತ್ತದೆ.

ಅಷ್ಟಭುಜಗಳನ್ನು ಹೊಂದಿರುವ ಮಹಿಷಾಸುರ ಮರ್ಧಿನಿ ವಿಗ್ರಹವನ್ನು ಕಲಾತ್ಮಕವಾಗಿ ಕೆತ್ತಲಾಗಿದೆ. ಈ ಬಾರಿ ಮೈಸೂರು ಅರಮನೆಯ ಆವರಣದಲ್ಲಿ ಮಾತ್ರ ಮೆರವಣಿಗೆ ಕೈಗೊಳ್ಳಲಾಗುತ್ತದೆ. ಈ ಬಾರಿಯ ದಸರಾ ವಿಶೇಷವಾಗಿ ಮಾತನಾಡಿದ ಅರ್ಚಕರಾದ ಶಶಿಶೇಖರ್ ದೀಕ್ಷಿತ್, ಚಾಮುಂಡೇಶ್ವರಿ ಎಲ್ಲಾ ಕಡೆ ಬೇರೆ ಬೇರೆ ರೂಪ ತಾಳುತ್ತಾಳೆ. ಎಂಟು ಕೈಗಳನ್ನು ಇಟ್ಟುಕೊಂಡಿರುವ, ಮಹಿಷಾಸುರ ಸಂಹಾರವನ್ನು ಮಾಡುತ್ತಿರುವ ಮರ್ಧಿನಿಯ ವಿಗ್ರಹ ಇದು. ದೈನಂದಿನ ರೀತಿಯಲ್ಲಿಯೇ ಪೂಜೆ ಸಲ್ಲಿಸಿ, ಮಹಾಪೂಜೆ, ಪಂಚಾಮೃತ ಪೂಜೆ ಮಾಡಿ ಜಂಬೂ ಸವಾರಿಯಲ್ಲಿ ಮಹಿಷಮರ್ಧಿನಿಯನ್ನು ಮೆರವಣಿಗೆ ಮಾಡಲಾಗುತ್ತದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

ಮೈಸೂರು: ಅರಮನೆ ಅಂಗಳದಲ್ಲಿ ಅಂತಿಮ ಹಂತದ ರಿಹರ್ಸಲ್​; ಜಂಬೂಸವಾರಿಯ ತಾಲೀಮಿನ ಸುಂದರ ದೃಶ್ಯಗಳನ್ನು ನೋಡಿ

ಮೈಸೂರು: ಜಂಬೂಸವಾರಿಯಲ್ಲಿ ಭಾಗವಹಿಸಲು ಕೊವಿಡ್ ವರದಿ ಕಡ್ಡಾಯ; ನೆಗೆಟಿವ್ ಇದ್ದರೆ ಮಾತ್ರ ಅರಮನೆ ಆವರಣಕ್ಕೆ ಎಂಟ್ರಿ