AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ದಸರಾಗೆ ಡ್ರೋನ್‌ಗಳ ಝಲಕ್: 3,500ಕ್ಕೂ ಹೆಚ್ಚು ಡ್ರೋನ್‌ಗಳ ಮೂಲಕ ನವಿಲಿನ ಆಕೃತಿ ಮೂಡಿಸಿ ಗಿನ್ನೆಸ್ ದಾಖಲೆ ಗುರಿ

ಮೈಸೂರು ದಸರಾ ಮಹೋತ್ಸವದ ಸಂದರ್ಭ ಈ ಬಾರಿ 3,500ಕ್ಕೂ ಹೆಚ್ಚು ಡ್ರೋನ್‌ಗಳ ಭರ್ಜರಿ ಪ್ರದರ್ಶನಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಎಲ್‌ಇಡಿ ದೀಪಗಳನ್ನು ಅಳವಡಿಸಿರುವ ಡ್ರೋನ್‌ಗಳ ಮೂಲಕ ಆಕಾಶದಲ್ಲಿ ಬೃಹತ್ ನವಿಲಿನ ಆಕೃತಿ ಮೂಡಿಸಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸುವ ಗುರಿ ಹೊಂದಲಾಗಿದೆ. ಅಕ್ಟೋಬರ್ 17, 18, 20 ಹಾಗೂ 21ರಂದು ಪದರ್ಶನ ನಡೆಸಲು ಯೋಜಿಸಲಾಗಿದೆ.

ಮೈಸೂರು ದಸರಾಗೆ ಡ್ರೋನ್‌ಗಳ ಝಲಕ್: 3,500ಕ್ಕೂ ಹೆಚ್ಚು ಡ್ರೋನ್‌ಗಳ ಮೂಲಕ ನವಿಲಿನ ಆಕೃತಿ ಮೂಡಿಸಿ ಗಿನ್ನೆಸ್ ದಾಖಲೆ ಗುರಿ
ಮೈಸೂರು ದಸರಾ (ಸಾಂದರ್ಭಿಕ ಚಿತ್ರ)Image Credit source: tv9
ಗಣಪತಿ ಶರ್ಮಾ
|

Updated on:Oct 08, 2026 | 10:02 AM

Share

ಮುಖ್ಯಾಂಶಗಳು

  • 3,500ಕ್ಕೂ ಹೆಚ್ಚು ಡ್ರೋನ್‌ಗಳ ಭರ್ಜರಿ ಪ್ರದರ್ಶನ
  • ಆಕಾಶದಲ್ಲಿ ಮೂಡಲಿದೆ ಬೃಹತ್ ನವಿಲಿನ ಆಕೃತಿ
  • ಗಿನ್ನೆಸ್ ವಿಶ್ವ ದಾಖಲೆ ನಿರ್ಮಾಣಕ್ಕೆ ಸಿದ್ಧತೆ

ಮೈಸೂರು, ಅಕ್ಟೋಬರ್ 8: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಮತ್ತಷ್ಟು ಮೆರುಗು ನೀಡಲು ಈ ಬಾರಿ 3,500ಕ್ಕೂ ಹೆಚ್ಚು ಡ್ರೋನ್‌ಗಳ ಭರ್ಜರಿ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ. ಆಕಾಶವನ್ನೇ ಕ್ಯಾನ್ವಾಸ್ ಮಾಡಿಕೊಂಡು ಎಲ್‌ಇಡಿ ದೀಪಗಳನ್ನು ಅಳವಡಿಸಿರುವ ಡ್ರೋನ್‌ಗಳ ಮೂಲಕ ಬೃಹತ್ ನವಿಲಿನ ಆಕೃತಿ ಮೂಡಿಸಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸುವ ಗುರಿ ಹೊಂದಲಾಗಿದೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (CESC) ಈ ಡ್ರೋನ್‌ ಶೋ ಆಯೋಜಿಸಲು ಸಿದ್ಧತೆ ನಡೆಸಿದೆ. ಸುಮಾರು 15 ನಿಮಿಷಗಳ ಕಾಲ ನಡೆಯಲಿರುವ ಪ್ರದರ್ಶನದಲ್ಲಿ 3,500ಕ್ಕೂ ಹೆಚ್ಚು ಡ್ರೋನ್‌ಗಳು ಹಾರಾಟ ನಡೆಸಲಿವೆ.

ಆಕಾಶದಲ್ಲಿ ಮೂಡಲಿದೆ ಬೃಹತ್ ನವಿಲಿನ ಆಕೃತಿ

ಭಾರತದ ರಾಷ್ಟ್ರೀಯ ಪಕ್ಷಿ ನವಿಲಿನ ಬೃಹತ್ ಆಕೃತಿಯನ್ನು ಡ್ರೋನ್‌ಗಳ ಮೂಲಕ ಆಕಾಶದಲ್ಲಿ ಮೂಡಿಸುವ ಯೋಜನೆ ರೂಪಿಸಲಾಗಿದೆ. ಈ ಮೂಲಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಸೇರುವ ಪ್ರಯತ್ನ ನಡೆಯಲಿದೆ. ಯೋಜನೆ ಬಗ್ಗೆ ಸರ್ಕಾರದ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.

2023ರಲ್ಲೂ ಗಿನ್ನೆಸ್ ದಾಖಲೆ ಬರೆದಿದ್ದ ಡ್ರೋನ್ ಶೋ

2023ರಲ್ಲಿ 2,983 ಡ್ರೋನ್‌ಗಳನ್ನು ಬಳಸಿ ಆಕಾಶದಲ್ಲಿ ಬೃಹತ್ ಹುಲಿಯ ಆಕೃತಿ ಮೂಡಿಸಲಾಗಿತ್ತು. ಇದು ಮಲ್ಟಿರೋಟರ್‌/ಡ್ರೋನ್‌ಗಳ ಮೂಲಕ ನಿರ್ಮಿಸಲಾದ ಅತಿ ದೊಡ್ಡ ಸಸ್ತನಿ ಆಕಾಶ ಪ್ರದರ್ಶನ ಎಂಬ ಗಿನ್ನೆಸ್ ದಾಖಲೆಗೆ ಪಾತ್ರವಾಗಿತ್ತು. 2024ರಲ್ಲಿ ಬನ್ನಿಮಂಟಪದ ಟಾರ್ಚ್‌ಲೈಟ್ ಪರೇಡ್ ಮೈದಾನದಲ್ಲಿ 1,500 ಡ್ರೋನ್‌ಗಳ ಮೂಲಕ ಡ್ರೋನ್‌ ಶೋ ಆರಂಭಿಸಲಾಗಿತ್ತು. ಬಳಿಕ ಈ ಪ್ರದರ್ಶನ ಜನಪ್ರಿಯತೆ ಗಳಿಸಿದೆ.

₹5 ಕೋಟಿ ವೆಚ್ಚ, ಖಾಸಗಿ ಪ್ರಾಯೋಜಕತ್ವಕ್ಕೆ ಚಿಂತನೆ

ಈ ಬಾರಿಯ ಡ್ರೋನ್‌ ಶೋಗೆ ಸುಮಾರು ₹5 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಡ್ರೋನ್‌ಗಳ ಖರೀದಿ, ತಾಂತ್ರಿಕ ವ್ಯವಸ್ಥೆ, ಸಾಫ್ಟ್‌ವೇರ್, ನಿಯಂತ್ರಣ ವ್ಯವಸ್ಥೆ, ಸುರಕ್ಷತಾ ಕ್ರಮಗಳು ಹಾಗೂ ತಾಂತ್ರಿಕ ತಜ್ಞರ ವೆಚ್ಚ ಇದರಲ್ಲಿ ಸೇರಿದೆ. ಸರ್ಕಾರದ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಖಾಸಗಿ ಪ್ರಾಯೋಜಕತ್ವ ಪಡೆಯುವ ಚಿಂತನೆಯೂ ಇದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ಅ.17ರಿಂದ ನಾಲ್ಕು ದಿನ ಡ್ರೋನ್‌ ಶೋ

ದೆಹಲಿ ಮೂಲದ ಬೋಟ್​​ಲ್ಯಾಬ್ ಡೈನಾಮಿಕ್ಸ್ (Botlab Dynamics) ಸಂಸ್ಥೆಗೆ ಈ ಬಾರಿಯ ಡ್ರೋನ್‌ ಶೋ ಜವಾಬ್ದಾರಿ ವಹಿಸಲಾಗಿದೆ. 2023ರಲ್ಲಿ ಮೈಸೂರಿನಲ್ಲಿ ಬೃಹತ್ ಹುಲಿಯ ಆಕೃತಿ ಸೇರಿದಂತೆ ಸಂಕೀರ್ಣ 3D ವಿನ್ಯಾಸಗಳನ್ನು ಡ್ರೋನ್‌ಗಳ ಮೂಲಕ ನಿರ್ಮಿಸಿ ಗಿನ್ನೆಸ್ ದಾಖಲೆ ಮಾಡಿದ್ದ ಸಂಸ್ಥೆಯೇ ಈ ಬಾರಿ ಕೂಡ ಪ್ರದರ್ಶನ ನಡೆಸಲಿದೆ. ಕಳೆದ ವರ್ಷದ ಪ್ರದರ್ಶನದಲ್ಲಿ ಸೌರವ್ಯೂಹ, ವಿಶ್ವ ಭೂಪಟ, ಸೇನೆ, ನವಿಲು, ಹುಲಿ, ಡಾಲ್ಫಿನ್, ಹದ್ದು, ಶ್ರೀಕೃಷ್ಣನ ಕಾಳಿಂಗ ನೃತ್ಯ, ಅಂಬಾರಿ ಆನೆ, ಕರ್ನಾಟಕದ ನಕ್ಷೆ ಹಾಗೂ ಚಾಮುಂಡೇಶ್ವರಿ ಸೇರಿದಂತೆ ಹಲವು ಆಕೃತಿಗಳನ್ನು ಆಕಾಶದಲ್ಲಿ ಮೂಡಿಸಲಾಗಿತ್ತು. ಸುಮಾರು 4 ಕಿ.ಮೀ ವ್ಯಾಪ್ತಿಯಿಂದ ಡ್ರೋನ್‌ ಶೋ ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ: ಮೈಸೂರು ದಸರಾ: ಸಿಡಿಮದ್ದು ತಾಲೀಮು ಯಶಸ್ವಿ; ಭಾರೀ ಶಬ್ದಕ್ಕೆ ಅಂಜದ ಗಜಪಡೆ, ಅಶ್ವದಳ

ಈ ಬಾರಿಯ ಪ್ರದರ್ಶನವನ್ನು ಅಕ್ಟೋಬರ್ 17, 18, 20 ಹಾಗೂ 21ರಂದು ನಡೆಸಲು ಯೋಜಿಸಲಾಗಿದೆ. ವಿಶ್ವ ದಾಖಲೆ ಪ್ರಯತ್ನದ ಸಂಪೂರ್ಣ ಪ್ರದರ್ಶನವನ್ನು ದಾಖಲಿಸಲು ವಿಶೇಷ ತಂಡವೂ ಇರಲಿದೆ. ನಿಗದಿತ ಮಾನದಂಡಗಳ ಪರಿಶೀಲನೆ ಪೂರ್ಣಗೊಂಡ ಬಳಿಕ ವಿಶ್ವ ದಾಖಲೆಯ ಕುರಿತು ಅಧಿಕೃತ ಘೋಷಣೆ ಮಾಡಲಾಗುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:55 am, Thu, 8 October 26

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
ದೆಹಲಿಯಲ್ಲಿ ಇಂಡಿ ಮೈತ್ರಿಕೂಟದ ಪ್ರತಿಭಟನೆ
ದೆಹಲಿಯಲ್ಲಿ ಇಂಡಿ ಮೈತ್ರಿಕೂಟದ ಪ್ರತಿಭಟನೆ
ಅತ್ತಿಬೆಲೆ ಪೆಟ್ರೋಲ್ ಬಂಕ್​ಗೆ ನುಗ್ಗಿದ ಜಾಗ್ವಾರ್ ಕಾರು: ಭಾರಿ ಅಗ್ನಿ ಅವಘಡ
ಅತ್ತಿಬೆಲೆ ಪೆಟ್ರೋಲ್ ಬಂಕ್​ಗೆ ನುಗ್ಗಿದ ಜಾಗ್ವಾರ್ ಕಾರು: ಭಾರಿ ಅಗ್ನಿ ಅವಘಡ
ಯಾರಿಗೆ ವೆಂಕಟೇಶ್ವರ ಸ್ವಾಮಿ ಕೃಪೆ?, ಯಾರಿಗೆ ಧನಲಾಭ?
ಯಾರಿಗೆ ವೆಂಕಟೇಶ್ವರ ಸ್ವಾಮಿ ಕೃಪೆ?, ಯಾರಿಗೆ ಧನಲಾಭ?
ಹುಟ್ಟಿ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶ: ಇನ್ವೆಸ್ಟರ್ ಆದ ಮಗು!
ಹುಟ್ಟಿ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶ: ಇನ್ವೆಸ್ಟರ್ ಆದ ಮಗು!
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ