AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರಿನಲ್ಲಿ ದಸರಾ ದಂಗಲ್: ಸಚಿವರ ಬೆನ್ನಲ್ಲೇ ಪ್ರಮೋದಾದೇವಿ ಪತ್ರಕ್ಕೆ ಕಮಿಷನರ್ ಸ್ಪಷ್ಟನೆ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ದಂಗಲ್ ಮುಂದುವರೆದಿದೆ. ಸಚಿವ ಯತೀಂದ್ರ ಸಿದ್ದರಾಮಯ್ಯ ತಿರುಗೇಟು ಬೆನ್ನಲ್ಲೇ ಇದೀಗ ಪೊಲೀಸ್ ಕಮಿಷನರ್​ ಸರದಿ. ಪ್ರಮೋದಾದೇವಿ ಒಡೆಯರ್ ಆಕ್ಷೇಪಗಳಿಗೆ ಪತ್ರದ ಮೂಲಕ ಸೀಮಾ ಲಾಟ್ಕರ್ ಸ್ಪಷ್ಟನೆ ನೀಡಿದ್ದಾರೆ. ಮೈಸೂರು ಅರಮನೆ ಧಾರ್ಮಿಕ‌ ಕಾರ್ಯಗಳಿಗೆ ಅಡ್ಡಿಪಡಿಸಿಲ್ಲ ಎಂದಿದ್ದಾರೆ.

ಮೈಸೂರಿನಲ್ಲಿ ದಸರಾ ದಂಗಲ್: ಸಚಿವರ ಬೆನ್ನಲ್ಲೇ ಪ್ರಮೋದಾದೇವಿ ಪತ್ರಕ್ಕೆ ಕಮಿಷನರ್ ಸ್ಪಷ್ಟನೆ
ಪ್ರಮೋದಾದೇವಿ ಒಡೆಯರ್, ಸೀಮಾ ಲಾಟ್ಕರ್
ರಾಮ್​, ಮೈಸೂರು
| Edited By: |

Updated on: Oct 28, 2026 | 9:59 PM

Share

ಮುಖ್ಯಾಂಶಗಳು

  • ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿಲ್ಲದ ದಸರಾ ದಂಗಲ್
  • ಸಚಿವರ ನಂತರ ಇದೀಗ ಪೊಲೀಸ್ ಕಮಿಷನರ್​​ ಸರದಿ
  • ಪ್ರಮೋದಾದೇವಿ ಒಡೆಯರ್ ಪತ್ರಕ್ಕೆ ಕಮಿಷನರ್ ಸ್ಪಷ್ಟನೆ

ಮೈಸೂರು, ಅಕ್ಟೋಬರ್​​ 28: ದಸರಾ ವೇಳೆ ಉಂಟಾದ ಗೊಂದಲಗಳ ಬಗ್ಗೆ ರಾಜಮಾತೆ ಪ್ರಮೋದಾದೇವಿ ಬೇಸರ ವ್ಯಕ್ತಪಡಿಸಿ ಬರೆದಿರುವ ಪತ್ರ ಕೋಲಾಹಲ ಸೃಷ್ಟಿಸಿದೆ. ಪ್ರಮೋದಾದೇವಿ ಪತ್ರಕ್ಕೆ ನಿನ್ನೆಯಷ್ಟೇ ಸಚಿವ ಯತೀಂದ್ರ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದರು. ನಮ್ಮದು ತಪ್ಪಿದ್ದರೆ ತಿದ್ದುಕೊಳ್ಳುತ್ತೇವೆ ಎಂದು ಸಿಎಂ ಡಿಕೆ ಶಿವಕುಮಾರ್ ಕೂಡ​ ಹೇಳಿದ್ದಾರೆ. ಇದೀಗ ಸುದೀರ್ಘ ಪತ್ರ ಬರೆಯುವ ಮೂಲಕ ಪೊಲೀಸ್ ಕಮಿಷನರ್​ ಸೀಮಾ ಲಾಟ್ಕರ್​​ ಕೂಡ ಕೌಂಟರ್​ ನೀಡಿದ್ದಾರೆ.

ಪ್ರಮೋದಾದೇವಿ ಒಡೆಯರ್ ಆಕ್ಷೇಪಗಳಿಗೆ ಸೀಮಾ ಲಾಟ್ಕರ್​ ಸ್ಪಷ್ಟನೆ 

ಪ್ರಮೋದಾದೇವಿ ಒಡೆಯರ್ ಆಕ್ಷೇಪಗಳಿಗೆ ಡಿಸಿಗೆ ಸುದೀರ್ಘ ಪತ್ರ ಬರೆಯುವ ಮೂಲಕ ಪೊಲೀಸ್ ಕಮಿಷನರ್​ ಸೀಮಾ ಲಾಟ್ಕರ್​ ಸ್ಪಷ್ಟನೆ ನೀಡಿದ್ದಾರೆ. ‘ಮೈಸೂರು ಅರಮನೆ ಧಾರ್ಮಿಕ‌ ಕಾರ್ಯಗಳಿಗೆ ಅಡ್ಡಿಪಡಿಸಿಲ್ಲ. ಅಗತ್ಯವಿದ್ದ ಕಡೆ ಮಾತ್ರ ಬ್ಯಾರಿಕೇಡ್ ಅಳವಡಿಕೆ ಮಾಡಿದ್ದೆವು. ರಾಜ್ಯಪಾಲರು, ಸಿಎಂ, ಸಚಿವರು, ವಿದೇಶಿ ರಾಯಭಾರಿಗಳು, ನ್ಯಾಯಾಧೀಶರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ಭದ್ರತೆ, ಕಾಲ್ತುಳಿದಂತಹ ಅಹಿತಕರ ಘಟನೆ ತಡೆದಿದ್ದೇವೆ. ಧಾರ್ಮಿಕ ಚಟುವಟಿಕೆ ಸುಗಮವಾಗಿ ನಡೆಯುವಂತೆ ಕ್ರಮಕೈಗೊಳ್ಳಲಾಗಿದೆ. ಅರಮನೆ ಆಡಳಿತ ಮಂಡಳಿ ಜೊತೆ ಕಳೆದ ಎರಡು ತಿಂಗಳಿಂದ ಸಮನ್ವಯ ಸಭೆ ಮಾಡಿದ್ದೇವೆ. ಜಟ್ಟಿ ಕಾಳಗದಲ್ಲೂ ನಮ್ಮ ತಪ್ಪಿಲ್ಲ’ ಎಂದಿದ್ದಾರೆ.

LIVE TV

ಅಂಬಾರಿ ಸ್ವೀಕರಿಸುವಾಗ, ವಾಪಸ್​ ಕೊಡುವಾಗ ಸುರಕ್ಷತೆ ಕಾಪಾಡಿದ್ದೇವೆ

‘ಪ್ರತಿ ವರ್ಷದಂತೆ ಈ ವರ್ಷ ಕೂಡ ವಜ್ರಮುಷ್ಠಿ ಕಾಳಗಕ್ಕೆ ಆಗಮಿಸುವ ಜಟ್ಟಿ ಸಮುದಾಯದವರಿಗೆ ಬ್ರಹ್ಮಪುರಿ ದ್ವಾರದ ಮೂಲಕ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ವಜ್ರಮುಷ್ಠಿ ಕಾಳಗಕ್ಕಾಗಿ ನಿಗದಿತ ಸಮಯವನ್ನು ನಿಗದಿಪಡಿಸಲಾಗಿದ್ದು, 3 ತಂಡ ಸರಿಯಾದ ಸಮಕ್ಕೆ ಬಂದಿತ್ತು, 4ನೇ‌ ತಂಡ ತಡವಾಗಿದೆ. ತಮ್ಮ ಜೊತೆ ಪಾಸ್ ಇಲ್ಲದವರನ್ನ ಕರೆದುಕೊಂಡು ಬಂದಿದ್ದರು. ಅಂಬಾರಿ ಕಟ್ಟುವ ಸ್ಥಳದಲ್ಲಿ ಅನಧಿಕೃತ ವ್ಯಕ್ತಿಗಳು ಇರಲಿಲ್ಲ. ಅಧಿಕಾರಿಗಳ ಕುಟುಂಬ ಸದಸ್ಯರಿಗೆ ಅವಕಾಶ ಕಲ್ಪಿಸಿರಲಿಲ್ಲ. ಹೊಸ‌ ಆನೆ ನಿಯೋಜನೆಗೊಂಡ ಕಾರಣಕ್ಕೆ ದಸರಾ ಪಾಸ್ ಹೊಂದಿದ್ದವರಿಗಷ್ಟೇ ಅವಕಾಶ ನೀಡಿದ್ದೆವು. ಅಂಬಾರಿ ಸ್ವೀಕರಿಸುವಾಗ, ವಾಪಸ್​ ಕೊಡುವಾಗ ಸುರಕ್ಷತೆ ಕಾಪಾಡಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಯಾವ ಕಾರಣಕ್ಕೂ ಕ್ಷಮೆ ಕೇಳಲ್ಲ: ನನಗೆ ರಾಜಮಾತೆ ಪ್ರಮೋದಾದೇವಿ ಜತೆ ಮಾತನಾಡುವ ಅಗತ್ಯ ಇಲ್ಲ ಎಂದ ಯತೀಂದ್ರ

‘ಅಧಿಕೃತ ಪಾಸ್ ಇದ್ದವರಿಗೆ ಅಂಬಾರಿ ಕಟ್ಟುವಾಗ ಹಾಗೂ ಅಂಬಾರಿ ವಾಪಸ್ ಕೊಡುವಾಗ ಅರಮನೆ ಪ್ರತಿನಿಧಿಗಳ ಉಪಸ್ಥಿತಿಗೆ ಮುಕ್ತ ಅವಕಾಶ ನೀಡಿದ್ದೆವು. ರಾಜ ಕುಟುಂಬದ ಪಾರ್ಕಿಂಗ್ ವ್ಯವಸ್ಥೆಗೂ ಭದ್ರತೆ ಕಲ್ಪಿಸಿದ್ದು, ಅರಮನೆ ಬ್ರಹ್ಮಪುರಿ‌ ಗೇಟ್ ಬಳಿ ಪ್ರವೇಶಾವಕಾಶ ಕಲ್ಪಿಸಲಾಗಿತ್ತು’ ಎಂದು ಪೊಲೀಸ್ ಕಮಿಷನರ್​ ಸೀಮಾ ಲಾಟ್ಕರ್​ ಸ್ಪಷ್ಟನೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ರಾಮ್​, ಮೈಸೂರು
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More