Mysore News: ನಾಟಕದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಅಪಮಾನ ಆರೋಪ, ದೂರು ನೀಡಿದ ಅಭಿಮಾನಿಗಳು

ಮೈಸೂರಿನ ರಂಗಾಯಣದ ಭೂಮಿಗೀತಾದಲ್ಲಿ ಸಾಂಬಾಶಿವ ಪ್ರಹಾಸನ ನಾಟಕ ಪ್ರದರ್ಶನ ನಡೆಯಿತು. ಇದರಲ್ಲಿ ಸಿದ್ದರಾಮಯ್ಯ ಅವರಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ.

Mysore News: ನಾಟಕದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಅಪಮಾನ ಆರೋಪ, ದೂರು ನೀಡಿದ ಅಭಿಮಾನಿಗಳು
ಸಾಂಬಶಿವ ಪ್ರಹಸನ ನಾಟಕದಲ್ಲಿ ಸಿದ್ದರಾಮಯ್ಯ ಅವರಿಗೆ ಅಪಮಾನ ಆರೋಪ
Edited By:

Updated on: Jan 01, 2023 | 5:58 PM

ಮೈಸೂರು: ಮೈಸೂರಿನ ರಂಗಾಯಣದ ಭೂಮಿಗೀತಾದಲ್ಲಿ ನಡೆದ ಸಾಂಬಾಶಿವ ಪ್ರಹಾಸನ ನಾಟಕ (Sambashiva Prahasana Drama)ದಲ್ಲಿ ಮಾಜಿ ಮುಖ್ಯಮಂತ್ರಿಯೂ ಆಗಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರನ್ನು ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ನಾಟಕ ತಂಡದ ವಿರುದ್ಧ ಅಭಿಮಾನಿಗಳು ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ರಾಜ್ಯ ಕುರುಬ ಸಂಘದ ಅಧ್ಯಕ್ಷ ಸುಬ್ರಮಣ್ಯ ಅವರಿಂದ ದೂರು ದಾಖಲಿಸಲಾಗಿದೆ. ನಿನ್ನೆ (ಡಿಸೆಂಬರ್ 31) ರಾತ್ರಿ ಮೈಸೂರಿನ ರಂಗಾಯಣ (Mysore Rangayana)ದ ಭೂಮಿಗೀತಾದಲ್ಲಿ ಸಾಂಬಾಶಿವ ಪ್ರಹಾಸನ ನಾಟಕ ನಡೆಯಿತು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ್ ಕಂಬಾರರು (Dr.ChandraShekhar Kambara) ರಚಿಸಿರುವ ಹಾಗೂ ನಿರ್ದೇಶಕ ಕಾರ್ತಿಕ್ ಉಪಮನ್ಯ ಅವರ ನಿರ್ದೇಶನದಲ್ಲಿ ಈ ನಾಟಕ ಮೂಡಿಬಂದಿದೆ.

ಈ ನಾಟಕದಲ್ಲಿ ವಾಸ್ತವ ಬಿಟ್ಟು ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಅಪಮಾನ ಮಾಡಲಾಗಿದೆ ಎಂದು ನಾಟಕ ಪ್ರದರ್ಶನ ಅಂತ್ಯದಲ್ಲಿ ಸಿದ್ದರಾಮಯ್ಯ ಅವರ ಅಭಿಮಾನಿಗಳು ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ: Mysore Bangalore Expressway: ಮೈಸೂರು-ಬೆಂಗಳೂರು ಹೆದ್ದಾರಿಗೆ ಒಡೆಯರ್ ಹೆಸರಿಡುವಂತೆ ಕೇಂದ್ರ ಸಚಿವರಿಗೆ ಪತ್ರ ಬರೆದ ಮಾಜಿ ಸಿಎಂ ಎಸ್.ಎಂ.ಕೃಷ್ಣ

ಅನ್ನಭಾಗ್ಯ ಕೊಟ್ಟು ಸೋಂಬೇರಿ ಮಾಡಿದ್ದೀರಿ ಎಂದು ಯೋಜನೆಯ ಬಗ್ಗೆ ಅಪಹಾಸ್ಯ ಮಾಡಲಾಗಿದೆ. ಈ ಬಾರಿ ಬಾದಾಮಿನು ಸಿಗಲ್ಲ ಸಿದ್ದು ಗೊರಕೆ ಹೊಡೆದು ರಾಜ್ಯ ಹಾಳುಮಾಡಿದ್ದೀರಿ ಎಂದು ವ್ಯಂಗ್ಯ ಮಾಡಲಾಗಿದೆ. ಅಲ್ಲದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೂ ಕೇಡಿ ಅಂಕಲ್ ಎಂದು ವ್ಯಂಗ್ಯ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ನಾಟಕದಲ್ಲಿ ಅಭಿನಯಿಸಿರುವ 18 ಮಂದಿಯ ತಂಡದ ವಿರುದ್ಧವು ದೂರು ನೀಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ