ಮೈಸೂರು: ಸ್ಯಾಂಟ್ರೋ ರವಿ ಪತ್ನಿ ದೂರು ಕೊಟ್ಟಿದ್ದೇ ತಡ, ಅನೇಕ ಸಂಗತಿಗಳು ಬಯಲಾಗುತ್ತಿವೆ. ಆರ್.ಆರ್ ನಗರ ಪೊಲೀಸರ ಎದುರೇ ಸ್ಯಾಂಟ್ರೋ ರವಿ ತಾನು ಬಿಜೆಪಿ ಕಾರ್ಯಕರ್ತ. ಸರಿ ಸುಮಾರು 3-4 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಸೇವೆ ಮಾಡಿದ್ದಾಗಿ ಹೇಳಿಕೊಂಡು ತಿರುಗಾಡುತ್ತಿದ್ದ ಎಂಬ ಸತ್ಯ ಬಯಲಾಗಿತ್ತು. ಮತ್ತೀಗ ಮೈಸೂರಿನ ಒಡನಾಡಿ ಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ ಮತ್ತಷ್ಟು ಸಂಗತಿಯನ್ನು ಬಯಲು ಮಾಡಿದ್ದಾರೆ. ಸ್ಯಾಂಟ್ರೋ ರವಿ ಚಿತ್ರದುರ್ಗದ ಮುರುಘಾ ಮಠದ ಜೊತೆಗೂ ನಂಟು ಹೊಂದಿದ್ದನೆಂದು ನಿರ್ದೇಶಕ ಸ್ಟ್ಯಾನ್ಲಿ ತಿಳಿಸಿದ್ದಾರೆ.
ಸ್ಯಾಂಟ್ರೋ ರವಿ ಚಿತ್ರದುರ್ಗದ ಮುರುಘಾ ಮಠವನ್ನೂ ಸಂಪರ್ಕಿಸಿದ್ದ. ಒಡನಾಡಿ ಸೇವಾ ಸಂಸ್ಥೆ ವಿರುದ್ಧ ಚಾಡಿ ಹೇಳಿದ್ದನಂತೆ. ಜೈಲರ್ ರಘುಪತಿ ಎಂಬಾತನನ್ನ ಬಳಸಿಕೊಂಡು ಸುಳ್ಳು ದಾಖಲೆ ದೃಷ್ಟಿ ಮಾಡಿದ್ದನಂತೆ. ಸ್ಯಾಂಟ್ರೋ ರವಿ ನೀಡಿದ್ದ ದಾಖಲೆಗಳನ್ನೇ ನ್ಯಾಯಾಲಯಕ್ಕೆ ಸಲ್ಲಿಸಿ ಮುರುಘ ಮಠದ ವಕೀಲರು ಪೇಚಿಗೆ ಸಿಲುಕಿದ್ದರೆಂಬ ಬಗ್ಗೆ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಇದನ್ನೂ ಓದಿ: ಸ್ಯಾಂಟ್ರೋ ರವಿ ಪರವಾಗಿ ಸುಳ್ಳು ದೂರು ದಾಖಲಿಸಿದ್ದ ಕಾಟನ್‌ಪೇಟೆ ಇನ್ಸ್‌ಪೆಕ್ಟರ್ ಅಮಾನತು
ಒಡನಾಡಿ ಸೇವಾ ಸಂಸ್ಥೆ ವಿರುದ್ಧ ಮಸಲತ್ತು ನಡೆಸುತ್ತಿದ್ದ ಸ್ಯಾಂಟ್ರೋ ರವಿ, ಒಡನಾಡಿ ಸೇವಾ ಸಂಸ್ಥೆ ನಿರ್ದೇಶಕ ಸ್ಟ್ಯಾನ್ಲಿ ವಿರುದ್ಧ ನಕಲಿ ದಾಖಲೆ ಸೃಷ್ಟಿ ಮಾಡಿದ್ದ. ವೇಶ್ಯವಾಟಿಕೆ ದಂಧೆಯಲ್ಲಿ ಸಿಕ್ಕಿ ಬಿದ್ದಿದ್ದ ಸ್ಟ್ಯಾನ್ಲಿ ಎಂಬ ವ್ಯಕ್ತಿಯ ಹೆಸರನ್ನು ಇಟ್ಟುಕೊಂಡು 2011ರಲ್ಲಿ 8 ದಿನಗಳ ಕಾಲ ಒಡನಾಡಿ ಸೇವಾ ಸಂಸ್ಥೆ ನಿರ್ದೇಶಕ ಸ್ಟ್ಯಾನ್ಲಿ ಕಾರಾಗೃಹ ಶಿಕ್ಷೆ ಅನುಭವಿಸಿರುವ ಬಗ್ಗೆ ಸ್ಯಾಂಟ್ರೋ ರವಿ ದಾಖಲೆ ಸೃಷ್ಟಿಸಿದ್ದ. 2017ರಲ್ಲಿ ಹೈಕೋರ್ಟ್‌ಗೂ ದಾವೆ ಹೂಡಿದ್ದ. ಆರ್‌ಟಿಐ ಅಡಿಯಲ್ಲಿ ಪಡೆದ ಮಾಹಿತಿ ತಪ್ಪು ಎಂದು ಹೈಕೋರ್ಟ್ ಪ್ರಕರಣ ರದ್ದುಪಡಿಸಿತ್ತು. ಮುರುಘಾ ಶ್ರೀ ಜಾಮೀನು ಪಡೆಯಲು ಈ ದಾಖಲೆ ಬಳಸಿಕೊಂಡಿದ್ದರು. ಹೈಕೋರ್ಟ್ ಗು ಸಲ್ಲಿಕೆ ಮಾಡಲಾಗಿತ್ತು ಎಂದು ಮೈಸೂರಿನ ಒಡನಾಡಿ ಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ ಮಾಹಿತಿ ನೀಡಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:55 pm, Wed, 11 January 23