ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿರುವ ಮೈಸೂರು ಅರಮನೆ; ವಾರಾಂತ್ಯದಲ್ಲಿ ಪ್ರವಾಸಿಗರ ದಂಡು

ವಾರದ ಉಳಿದ ದಿನಗಳಲ್ಲಿ ಧ್ವನಿ, ಬೆಳಕು ಕಾರ್ಯಕ್ರಮ ಮಾತ್ರ ಇರುತ್ತದೆ. ಸೋಮವಾರದಿಂದ ಶುಕ್ರವಾರದವರೆಗೆ ಧ್ವನಿ, ಬೆಳಕು ಕಾರ್ಯಕ್ರಮ ಇರುತ್ತದೆ. ಭಾನುವಾರ ವಿದ್ಯುತ್ ದೀಪಾಲಂಕಾರ ಕೂಡ ಮಾಡಲಾಗುತ್ತದೆ.

ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿರುವ ಮೈಸೂರು ಅರಮನೆ; ವಾರಾಂತ್ಯದಲ್ಲಿ ಪ್ರವಾಸಿಗರ ದಂಡು
ಮೈಸೂರು ಅರಮನೆ ಆವರಣ
Edited By:

Updated on: Jul 25, 2021 | 9:53 PM

ಮೈಸೂರು: ಕೊರೊನಾ 2ನೇ ಅಲೆ ಹಿನ್ನೆಲೆ ಸ್ಥಗಿತವಾಗಿದ್ದ ಮೈಸೂರು ಅರಮನೆಯ ದೀಪಾಲಂಕಾರ ಪ್ರವಾಸೋದ್ಯಮ ಪುನಶ್ಚೇತನ ದೃಷ್ಟಿಯಿಂದ ಪುನಾರಂಭ ಮಾಡಲಾಗಿದೆ. ಇದೀಗ ಮತ್ತೆ ವಿದ್ಯುತ್ ದೀಪಾಲಂಕಾರ ಆರಂಭಿಸಲಾಗಿದೆ. ವಾರಾಂತ್ಯ ಹಿನ್ನೆಲೆಯಲ್ಲಿ ದೀಪಾಲಂಕಾರ ಮಾಡಲಾಗಿದೆ. ಮೈಸೂರು ಅರಮನೆ ದೀಪಾಲಂಕಾರ ನೋಡಲು ಬಹಳಷ್ಟು ಸಂಖ್ಯೆಯ ಪ್ರವಾಸಿಗರು ಭೇಟಿ ನೀಡಿದ್ದಾರೆ.

ಪ್ರತಿ ಭಾನುವಾರ, ಸಾರ್ವತ್ರಿಕ ರಜೆ ದಿನದಂದು ದೀಪಾಲಂಕಾರ ಮಾಡಲಾಗುತ್ತದೆ. ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿರುವ ಅರಮನೆ ಕಣ್ತುಂಬಿಕೊಳ್ಳಲು ಜನರು ಅರಮನೆಗೆ ಭೇಟಿ ನೀಡಿದ್ದಾರೆ. ಸಂಜೆ 7ರಿಂದ ರಾತ್ರಿ 8 ಗಂಟೆಯವರೆಗೆ ಜಗಮಗಿಸುವ ಅರಮನೆ ಕಣ್ತುಂಬಿಕೊಂಡಿದ್ದಾರೆ.

ವಾರದ ಉಳಿದ ದಿನಗಳಲ್ಲಿ ಧ್ವನಿ, ಬೆಳಕು ಕಾರ್ಯಕ್ರಮ ಮಾತ್ರ ಇರುತ್ತದೆ. ಸೋಮವಾರದಿಂದ ಶುಕ್ರವಾರದವರೆಗೆ ಧ್ವನಿ, ಬೆಳಕು ಕಾರ್ಯಕ್ರಮ ಇರುತ್ತದೆ. ಭಾನುವಾರ ವಿದ್ಯುತ್ ದೀಪಾಲಂಕಾರ ಕೂಡ ಮಾಡಲಾಗುತ್ತದೆ.

ಇದನ್ನೂ ಓದಿ: ಮೈಸೂರು ಅರಮನೆ ಆವರಣ ಮತ್ತೆ ಧ್ವನಿ-ಬೆಳಕು ಹೊಂಬಣ್ಣದಲ್ಲಿ ಜಗಮಗ; ತುಂಬಿ ಹರಿಯುತಿವೆ ಚುಂಚನಕಟ್ಟೆ, ಧನುಷ್ಕೋಟಿ ಜಲಪಾತ

ಮೈಸೂರು: ಆಷಾಢ ಮಾಸದ ಮೊದಲ ಸೋಮವಾರ; ನಂಜುಂಡೇಶ್ವರನ ದರ್ಶನಕ್ಕೆ ಹರಿದುಬಂತು ಜನಸಾಗರ

(Mysuru Palace Lighting Weekend Tourists visit Palace)