ಮೈಸೂರಿನಲ್ಲಿ ಹಲ್ಲೆ, ಅತ್ಯಾಚಾರ ಪ್ರಕರಣದ ಹಿಂದೆ ಪ್ರೇಮ ಪುರಾಣದ ಲಿಂಕ್!

ಹಲ್ಲೆ, ಅತ್ಯಾಚಾರ ಯತ್ನ ಪ್ರಕರಣದ ಹಿಂದೆ ಪ್ರೇಮ ಪುರಾಣದ ಲಿಂಕ್ ಇದೆ ಎಂದು ತಿಳಿದುಬಂದಿದೆ. 28 ವರ್ಷದ ಸಂತ್ರಸ್ತೆಗೂ, 21 ವರ್ಷದ ಆರೋಪಿಗೂ ನಂಟಿದೆ. ಬಂಧಿತ ಆರೋಪಿ, ಸಂತ್ರಸ್ತ ಯುವತಿ ಪರಿಚಯಸ್ತರಾಗಿದ್ದರು

ಮೈಸೂರಿನಲ್ಲಿ ಹಲ್ಲೆ, ಅತ್ಯಾಚಾರ ಪ್ರಕರಣದ ಹಿಂದೆ ಪ್ರೇಮ ಪುರಾಣದ ಲಿಂಕ್!
ಸಾಂಕೇತಿಕ ಚಿತ್ರ
Edited By: sandhya thejappa

Updated on: Sep 04, 2021 | 11:52 AM

ಮೈಸೂರು: ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ (Gang Rape) ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದೆ. ಈ ಘಟನೆ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ಅತ್ಯಾಚಾರ ಯತ್ನ ಪ್ರಕರಣ ಬೆಳಕಿಗೆ ಬಂದಿದೆ. ಮೈಸೂರಿನ ಆರ್.ಎಸ್.ನಾಯ್ಡು ನಗರದ ಹೋಲಿ ಕ್ರಾಸ್ ಸ್ಡಡಿ ಹೌಸ್​ನಲ್ಲಿ ಕಾಲೇಜು ವಿದ್ಯಾರ್ಥಿನಿಯೋರ್ವಳ ಮೇಲೆ ಹಲ್ಲೆ ಮತ್ತು ಅತ್ಯಾಚಾರ ಯತ್ನ ನಡೆದಿದೆ ಎಂಬ ಮಾಹಿತಿ ತಿಳಿದುಬಂದಿದ್ದು, ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆ ಮತ್ತು ಆರೋಪಿ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.

ಹಲ್ಲೆ, ಅತ್ಯಾಚಾರ ಯತ್ನ ಪ್ರಕರಣದ ಹಿಂದೆ ಪ್ರೇಮ ಪುರಾಣದ ಲಿಂಕ್ ಇದೆ ಎಂದು ತಿಳಿದುಬಂದಿದೆ. 28 ವರ್ಷದ ಸಂತ್ರಸ್ತೆಗೂ, 21 ವರ್ಷದ ಆರೋಪಿಗೂ ನಂಟಿದೆ. ಬಂಧಿತ ಆರೋಪಿ, ಸಂತ್ರಸ್ತ ಯುವತಿ ಪರಿಚಯಸ್ತರಾಗಿದ್ದರು. ಆರೋಪಿಯನ್ನು ಯುವತಿಯೇ ಹಾಸ್ಟೆಲ್ಗೆ ಬರುವುದಕ್ಕೆ ಹೇಳಿದ್ದಾಳೆ. ಹಾಸ್ಟೆಲ್​ನಲ್ಲಿ ಯಾರೂ ಇಲ್ಲದ ವೇಳೆ ಪ್ರೇಮಿಗಳು ಒಟ್ಟಾಗಿದ್ದಾರೆ. ಸಹಪಾಠಿಗಳು ಹಾಸ್ಟೆಲ್​ಗೆ ಬಂದ ಕೂಡಲೇ ಯುವಕ ಪರಾರಿಯಾಗಿದ್ದಾನೆ.

ಕ್ರೈಸ್ತ ಸಮುದಾಯದ ಹಿರಿಯರಿಗೆ ಗೊತ್ತಾದರೆ ತೊಂದರೆ ಆಗುತ್ತೆ ಅಂತ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಬಳಿಕ ಅತ್ಯಾಚಾರ ಯತ್ನ ಮತ್ತು ಹಲ್ಲೆ ಕಥೆಯನ್ನು ಹೆಣೆದಿದ್ದಾಳೆ. ನಾನು ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ, ನೀನು ತಪ್ಪಿಸಿಕೋ ಅಂತ ಯುವತಿ ಆರೋಪಿಗೆ ಸುಳಿವು ಕೊಟ್ಟಿದ್ದಳಂತೆ. ಈ ಎಲ್ಲ ಮಾಹಿತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಘಟನೆ ನಡೆದ ಎರಡು ಗಂಟೆಯೊಳಗೆ ಆರೋಪಿಯನ್ನು ಪೊಲೀಸರು  ಬಂಧಿಸಿದ್ದಾರೆ. ವಿದ್ಯಾರ್ಥಿನಿ ಒಬ್ಬಳೇ ಇದ್ದಾಗ ಹಲ್ಲೆ ನಡೆಸಿ ಅತ್ಯಾಚಾರಕ್ಕೆ ಯತ್ನಿಸಿಲಾಗಿತ್ತು ಎಂಬ ಆರೋಪದಡಿ ಪ್ರಕರಣ ದಾಖಲಾಗಿದೆ. ಸ್ಟಡಿ ಹೌಸ್​ನಲ್ಲಿ ಆಂಧ್ರ ಮೂಲದ 7 ವಿದ್ಯಾರ್ಥಿನಿಯರಿದ್ದರು. ಘಟನೆ ವೇಳೆ ಉಳಿದ ವಿದ್ಯಾರ್ಥಿನಿಯರು ತರಗತಿಗೆ ತೆರಳಿದ್ದರು. ಇದನ್ನು ಗಮನಿಸಿಯೇ ಸ್ಟಡಿ ಹೌಸ್ ಒಳಗೆ ನುಗ್ಗಿದ್ದ ಆರೋಪಿ, ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಹಲ್ಲೆಗೈದು ಪರಾರಿಯಾಗಿದ್ದಾನೆ ಎಂದು ಪ್ರಕರಣ ದಾಖಲಾಗಿದೆ. ಗಾಯಾಳು ವಿದ್ಯಾರ್ಥಿನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಬಗ್ಗೆ ಹೇಳಿಕೆ ನೀಡಿದ ಮೈಸೂರು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ನಿನ್ನೆ ಮಧ್ಯಾಹ್ನ ನರಸಿಂಹರಾಜ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಊಟದ ನೆಪದಲ್ಲಿ ಬಂದು ಅತ್ಯಾಚಾರ ಆಗಿದೆ ಅಂತ ದೂರು ದಾಖಲಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಇಬ್ಬರು ಪರಿಚಯಸ್ಥರು ಅಂತ ಗೊತ್ತಾಗಿದೆ. ಯುವಕನನ್ನು ಪರಿಚಯ ಇಲ್ಲ ಎಂದು ಹೇಳಿದ್ದು ಏಕೆ ಅಂತ ಗೊತ್ತಿಲ್ಲ. ಮೊದಲಿಗೆ ಪರಿಚಯ ಇಲ್ಲವೆಂದು ಯುವತಿ ದೂರು ಕೊಟ್ಟಿದ್ದಳು. ಯುವತಿಯ ಹೇಳಿಕೆಯ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ. ಯುವತಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ದೂರಿನ ಆಧಾರದಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಯುವಕನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ

ಮಹಿಳಾ ಟೆಕ್ಕಿಗೆ ಮದ್ಯ ಕುಡಿಸಿ ಅತ್ಯಾಚಾರ: ಇಬ್ಬರು ನೈಜೀರಿಯಾ ಪ್ರಜೆಗಳನ್ನ ಬಂಧಿಸಿದ ಬಾಣಸವಾಡಿ ಪೊಲೀಸರು

ಮೈಸೂರಿನಲ್ಲಿ ಇನ್ನೋರ್ವ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ; ಪ್ರಕರಣ ದಾಖಲು, ಆರೋಪಿ ಬಂಧನ

(Mysuru sliced and rape attempt case victim and Accused are acquaintance)

Published On - 10:40 am, Sat, 4 September 21

Web contact

TV9 Kannada

Read More
Follow Us